ಹೊನ್ನಾಳಿ ನರ್ಸ್ ಜಯಲಕ್ಷ್ಮಿ ಬಿಎಸ್‌ಆರ್ ಕಾಂಗ್ರೆಸಿಗೆ

ನಗರದ ಬೊಮ್ಮನಹಳ್ಳಿಯಲ್ಲಿ ಇಂದು ಬೆಳಗ್ಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಿಢೀರನೆ ಕಾಣಿಸಿಕೊಂಡ 'ಹೊನ್ನಾಳಿ ನರ್ಸ್ ಜಯಲಕ್ಷ್ಮಿ' ಅವರು ಪಕ್ಷದ ನಾಯಕ ಸೋಮಶೇಕರ ರೆಡ್ಡಿ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು. ಹೊಸನಗರ ಮೂಲದ ಜಯಲಕ್ಷ್ಮಿ ಅವರು ಹೊನ್ನಾಳಿಯಲ್ಲಿ ಶುಶ್ರೂಷಕಿಯಾಗಿ ಸೇವೆ ಆರಂಭಿಸಿದ್ದರು.
ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕನೊಂದಿಗೆ ಮುತ್ತಿನ ಪ್ರಕರಣದಲ್ಲಿ ಥಳಕುಹಾಕಿಕೊಂಡಿದ್ದ ನರ್ಸ್ ಜಯಲಕ್ಷ್ಮಿ ಆಗ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಇದೀಗ ಮತ್ತೊಂದು ಸುತ್ತಿನ ರಾಜಕೀಯ ಬಿರುಗಾಳಿ ಎಬ್ಬಿಸಲು ಜಯಲಕ್ಷ್ಮಿ ಅಣಿಯಾಗುತ್ತಿದ್ದಾರೆ.
'ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಮುಂದೆ ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ಪಕ್ಷದ ಮುಖಂಡರ ತೀರ್ಮಾನದಂತೆ ನಡೆದುಕೊಳ್ಳುವೆ' ಎಂದು ಜಯಲಕ್ಷ್ಮಿ ಅವರು ಹೇಳಿದ್ದಾರೆ.
'ನರ್ಸ್ ಜಯಲಕ್ಷ್ಮಿ' ಎಂದೇ ಮನೆ ಮಾತಾಗಿರುವ ಜಯಲಕ್ಷ್ಮಿ ಅವರು ಇದೀಗ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಎದುರು ಸ್ಪರ್ಧಿಸುತ್ತಾರಾ? ಎಂಬ ಕುತೂಹಲ ನಾಡಿನ ಜನತೆಯಲ್ಲಿ ಗರಿಗೆದರಿದೆ.
ತನ್ಮೂಲಕ, ಬಿಗ್ ಬಾಸ್ ಮನೆಯಲ್ಲಿ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಂಡಿದ್ದ ಜಯಲಕ್ಷ್ಮೀ ಅವರ ಕನಸು ನನಸಾಗುತ್ತದಾ ಎಂಬ ಕುತೂಹಲವೂ ಮೂಡಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications