ಸಿದ್ದರಾಮಯ್ಯಗೆ ಯಶಸ್ವೀ ಶಸ್ತ್ರಚಿಕಿತ್ಸೆ, ಮನೆಗೆ ವಾಪಸ್

ಬೆಂಗಳೂರು, ಏ.3: ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯಗೆ ನಾಳೆ ಆಪರೇಷನ್ ನಡೆಯಲಿದ್ದು, ಒಂದು ವಾರ ಕಾಲ ರೆಸ್ಟ್ ತೆಗೆದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ.

ಗಮನಾರ್ಹವೆಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಹ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಸೋನಿಯಾ ಅನುಪಸ್ಥಿತಿಯಲ್ಲಿ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಆದರೆ ಇಲ್ಲಿ ಚುನಾವಣೆ ಕಾಲದಲ್ಲಿ ಸಿದ್ದರಾಮಯ್ಯನವರ ಅನುಪಸ್ಥಿತಿ ನಿಜಕ್ಕೂ ಅವರಿಗೆ ದುಬಾರಿಯಾಗುವ ಲಕ್ಷಣಗಳಿವೆ.

ಪಿತ್ತ ಕೋಶದಲ್ಲಿ ಕಲ್ಲು:
ದೆಹಲಿಯಿಂದ ವಾಪಸಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಮೊನ್ನೆ ಸೋಮವಾರ ಬೆಳಗ್ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಪಿತ್ತ ಜಾಸ್ತಿಯಾಗಿ ವಾಂತಿಯೂ ಆಗಿತ್ತು. ತಕ್ಷಣ ಅವರನ್ನು ಹೆಚ್ಚಿನ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು.

Congress leader Siddaramaiah to undergo gall bladder operation
ಪಿತ್ತಕೋಶಕ್ಕೆ ಸೋಂಕು :
ಪ್ರಸ್ತುತ, ಸಿದ್ದರಾಮಯ್ಯ ಅವರು ಮಿಲ್ಲರ್‌ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆ ನಡೆಸಿದ ಬಳಿಕ ಅವರ ಪಿತ್ತ ಕೋಶದಲ್ಲಿ (ಗಾಲ್‌ ಬ್ಲಾಡರ್‌) ಒಂದು ಕಲ್ಲು ಹಾಗೂ ಮರಳಿನಂತಹ ಹಲವು ಕಣಗಳು ಇರುವುದು ಕಂಡುಬಂದಿದೆ. ಪಿತ್ತಕೋಶಕ್ಕೆ ಸೋಂಕು ಸಹ ಆಗಿದೆ.

ಈ ಮಧ್ಯೆ, ಪಿತ್ತಕೋಶದಲ್ಲಿರುವ ಕಲ್ಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ವೈದ್ಯರು ನಿರ್ಧರಿಸಿದ್ದಾರೆ. ನಾಳೆ ಗುರುವಾರ ಲೆಪ್ರೋಸ್ಕೋಪಿಕ್‌ ಆಪರೇಷನ್‌ ಮೂಲಕ ಪಿತ್ತ ಕೋಶದಲ್ಲಿನ ಕಲ್ಲನ್ನು ತೆಗೆದುಹಾಕಲಾಗುವುದು ಎಂದು ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ರಮೇಶ್‌ ಹೇಳಿದ್ದಾರೆ.

ದೇಹವನ್ನು ಛೇದಿಸದೆ ಎರಡು ಸಣ್ಣ ರಂಧ್ರಗಳನ್ನು ಕೊರೆದು ಪಿತ್ತಕೋಶದಲ್ಲಿರುವ ಕಲ್ಲು ನಾಶಪಡಿಸುವ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ವಿಧಾನವಾದ ಲೆಪ್ರೋಸ್ಕೋಪಿಕ್‌ ಆಪರೇಷನಿಗೆ ಒಂದೆರಡು ತಾಸು ಬೇಕಾಗುತ್ತದೆ. ಈ ಆಪರೇಷನ್‌ ಮಾಡಿಸಿಕೊಂಡವರು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು.

ಸಿದ್ದರಾಮಯ್ಯನವರು ಪೂರ್ವನಿಗದಿಯಂತೆ ಏ.4ರಂದು ದೆಹಲಿಗೆ ತೆರಳಬೇಕಿತ್ತು. ಆದರೆ ಅವರಿಗೆ ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿರುವುದರಿಂದ ಏಪ್ರಿಲ್ 8ರವರೆಗೂ ಯಾವುದೇ ರಾಜಕೀಯ ಕಾರ್ಯಕ್ರಮ ಹಾಕಿಕೊಂಡಿಲ್ಲ ಎಂದು ಸಿದ್ದರಾಮಯ್ಯನವರ ಆಪ್ತರು ತಿಳಿಸಿದ್ದಾರೆ. TC siddaramaiah Sir.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+