ಎಲ್ಲ ತೀರ್ಮಾನ ದೇವೇಗೌಡರ ಅಡುಗೆ ಮನೆಯಿಂದಲೇ

ಈ ಅಪ್ಪ-ಮಕ್ಕಳು ಎಲ್ಲಿ, ಎಷ್ಟೇ ಭರವಸೆ ನೀಡಿದ್ದರೂ, ಅದು ಕಾರ್ಯಗತವಾಗುವುದಿಲ್ಲ. ಏಕೆಂದರೆ ರಾತ್ರಿ ಕುಟುಂಬದ ಸದಸ್ಯರೆಲ್ಲ ಊಟಕ್ಕೆ ಕುಳಿತಾಗ, ಅಡುಗೆ ಮನೆಯಲ್ಲಿ ಕೈಗೊಳ್ಳುವ ತೀರ್ಮಾನವೇ ಜೆಡಿಎಸ್ ಪಕ್ಷದ ಅಂತಿಮ ತೀರ್ಮಾನವಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಬಿಎನ್ ಬಚ್ಚೇಗೌಡ ಗೌಡರ ಕುಟುಂಬದ ಬಗ್ಗೆ ಹೊಸ ಸತ್ಯವೊಂದನ್ನು ಹೊರಹಾಕಿದ್ದಾರೆ.
ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಮ್ಮ ಕುಟುಂಬ ವರ್ಗದವರಿಂದ ಏರ್ಪಡಿಸಿದ್ದ ಚನ್ನಕೇಶವಸ್ವಾಮಿರವರ ಪುಷ್ಪ ಪಲ್ಲಕ್ಕಿ ಉತ್ಸವದ ಸೇವಾ ಕಾರ್ಯದಲ್ಲಿ ಸಚಿವ ಬಚ್ಚೇಗೌಡ ಅವರು ಮಾತನಾಡಿದರು.
ಇದೀಗ ಚುನಾವಣಾ ಸಂದರ್ಭದಲ್ಲಿ ತಂದೆಯೊಬ್ಬರಿಗೆ ಮಾತು ನೀಡುವುದು, ಮಗ ಮತ್ತೂಬ್ಬರಿಗೆ ಮಾತು ನೀಡುವುದು, ಆದರೆ ರಾತ್ರಿ ಏರ್ಪಡುವ ಸಭೆಯಲ್ಲಿ ಆಗುವ ತೀರ್ಮಾನವೇ ಮತ್ತೂಂದು ಎಂದು ಜೆಡಿಎಸ್ ಬಗ್ಗೆ ಸಚಿವರು ವ್ಯಂಗ್ಯವಾಡಿದರು.
ಸಚಿವ ಬಚ್ಚೇಗೌಡ ಅವರು ಮೂಲತಃ ಜೆಡಿಎಸ್ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಇದೀಗ ಅವರು ಬಿಜೆಪಿಯಲ್ಲಿದ್ದು, ತಾವು ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.












Click it and Unblock the Notifications