ಬಹಿರಂಗ ಪ್ರಚಾರಕ್ಕೆ ಕಾಂಗ್ರೆಸ್ ತಂತ್ರ ರಚನೆ

Congress
ಬೆಂಗಳೂರು, ಏ.3 : ವಿಧಾನಸಭೆ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲಗಳ ನಡುವಯೇ ಇಂದು ಪ್ರಚಾರ ಸಮಿತಿ ಸಭೆ ನಡೆಸಿತು. ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುವುದು, ಸ್ಟಾರ್ ಪ್ರಚಾರಕರ ಕ್ಷೇತ್ರಗಳು ಮುಂತಾದ ವಿಷಯಗಳ ಕುರಿತು ವಿವರವಾದ ಚರ್ಚೆ ನಡೆಯಿತು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ, ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಹಿರಿಯ ನಟ ಅಂಬರೀಶ್ ಮುಂತಾದವರು ಪಾಲ್ಗೊಂಡಿದ್ದರು. ಚುನಾವಣೆ ಪ್ರಚಾರ ಕಾರ್ಯ ಆರಂಭಿಸುವುದು. ಜಿಲ್ಲೆಗಳಲ್ಲಿ ಪ್ರಚಾರದ ತಂತ್ರ ಮುಂತಾದವುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವಿಧಾನಸಭೆ ಚುನಾವಣೆಗೆ 4 ಹಂತದಲ್ಲಿ ಪ್ರಚಾರ ಕಾರ್ಯ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಫೇಸ್ ಬುಕ್, ಟ್ವೀಟರ್ ಮೂಲಕವು ಪ್ರಚಾರ ನಡೆಸಿ ಐಟಿ ಕಂಪನಿಯ ಉದ್ಯೋಗಿಗಳು ಮತ್ತು ಯುವಕರನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ. ದರ್ಶನ್, ಭಾವನಾ, ರಮ್ಯ, ಅಂಬರೀಶ್ ಮುಂತಾದವರು ಪಕ್ಷದ ಪರವಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ.

ಸೋನಿಯಾಗಾಗಿ ಪ್ರಾಥಮಿಕ ಯೋಜನೆ : ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಧಾನಿ ಮನಹೋಹನ್ ಸಿಂಗ್ ಅವರು ರಾಜ್ಯದ ಯಾವ ಸ್ಥಳಗಳಲ್ಲಿ ಪ್ರಚಾರ ಮಾಡಬೇಕು ಎಂದು ಪ್ರಾಥಮಿಕ ಯೋಜನೆ ತಯಾರಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಸೋನಿಯಾ ಗಾಂಧಿ ಒಪ್ಪಿಗೆ ಬಳಿಕ ಈ ಯೋಜನೆ ಅಂತಿಮಗೊಳ್ಳಲಿದೆ.

ಹಿರಿಯರಿಗಾಗಿ ಪಿ.ಚಿದಂಬರಂ : ಕರ್ನಾಟಕದ ಬುದ್ಧಿಜೀವಿಗಳು, ವ್ಯಾಪಾರಸ್ಥರನ್ನು ಸೆಳೆಯಲು ಕೇಂದ್ರ ಸಚಿವ ಪಿ.ಚಿದಂಬರಂ, ಕಪಿಲ್ ಸಿಬಲ್, ಮನೀಷ್ ತಿವಾರಿ ಮತ್ತು ಜಯರಾಂ ರಮೇಶ್ ಮುಂತಾದವರು ಪ್ರಚಾರ ನಡೆಸಲಿದ್ದಾರೆ.

ತೆಲುಗಿಗೆ ಚಿರಂಜೀವಿ : ತೆಲಗು ಭಾಷಿಕ ಜನಾಂಗದವರು ಹೆಚ್ಚಿರುವ ಕಡೆ ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ರೇಣುಕಾ ಚೌಧರಿ ಹಾಗೂ ಪುರಂದರೇಶ್ವರಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

ಮರಾಠಿಗರಿಗೆ ಶಿಂಧೆ : ಮರಾಠ ಪ್ರದೇಶಗಳಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಎ.ಕೆ.ಆಂಡನಿ ಪ್ರಚಾರ ನಡೆಸಲಿದ್ದಾರೆ ಎಂದು ಯೋಜೆನೆ ತಯಾರಿಸಲಾಗಿದೆ.

ಪ್ರಚಾರ ಸಮಿತಿ ರಾಜ್ಯದ ಪ್ರಚಾರ ಕಾರ್ಯದ ರೂಪುರೇಷೆ ತಯಾರಿಸಿದೆ. ಮಾಜಿ ಸಚಿವ ಎಸ್.ಎಂ.ಕೃಷ್ಣ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ಒಪ್ಪಿಗೆಯ ನಂತರ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+