ಮೊದಲು ಮುಸ್ಲಿಂ ಅಭ್ಯರ್ಥಿಗಳ ಘೋಷಿಸಿದ ಕುಮಾರಣ್ಣ

ತನ್ಮೂಲಕ, ಮುಸ್ಲಿಂ ಮತದಾರರ ಓಲೈಕೆಗೆ ಮುಂದಾಗಿರುವ ಜೆಡಿಎಸ್ ಬೆಂಗಳೂರು ನಗರದ ನಾಲ್ಕು ಕ್ಷೇತ್ರಗಳ ಪಟ್ಟಿ ಪ್ರಕಟಿಸಿ, ಮುಸ್ಲಿಂರಿಗೆ ಅವಕಾಶ ನೀಡಿರುವುದು ಕುತೂಹಲಕಾರಿಯಾಗಿದೆ.
ಚಾಮರಾಜಪೇಟೆಯಿಂದ ಜಮೀರ್ ಅಹಮದ್ ಖಾನ್, ಶಿವಾಜಿನಗರದಿಂದ ಅಬ್ಬಸ್ ಆಲಿ ಬೋಹ್ರಾ, ಹೆಬ್ಬಾಳದಿಂದ ನಿವೃತ್ತ ಖಡಕ್ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಹಾಗೂ ಜಯನಗರದಿಂದ ಸಮೀವುಲ್ಲಾ ಅವರು ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.
ನಗರದ ಒಟ್ಟು ಐದು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ನಿರ್ಧರಿಸಿದೆ. ಜತೆಗೆ ನಗರದಲ್ಲಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಅಥವಾ 12 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಚುನಾವಣೆಗಿಳಿಸಲು ಚಿಂತನೆ ನಡೆಸಿದೆ ಎಂದೂ ಅವರು ತಿಳಿಸಿದರು.
ಕಳೆದ ವಾರ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಹೋಗಿ ಚಾದರ್ ಅರ್ಪಿಸಿ ಬಂದಿದ್ದ ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದಾರೆ.
ಇದೇ ವೇಳೆ ಜೆಡಿಎಸ್ ಗೆ ವಾಪಸಾದ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಮಾಜಿ ಸಚಿವ ಸುಧೀಂದ್ರ ರಾವ್ ಕಸಬೆ, ಉತ್ತರ ಕರ್ನಾಟಕ ಭಾಗದ ಮುಖಂಡರಾದ ವಸಂತ ಗುಡದಳ್ಳಿ ಹಾಗೂ ಟಿ.ಪರಮೇಶ್ವರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಸುಮಾರು 160 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಚುನಾವಣಾ ತಂತ್ರ ರೂಪಿಸಿಲ್ಲದಿರುವ ಕಾರಣ ರಾಷ್ಟೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಮತ್ತು ಇತರೆ ಹಿರಿಯ ಮುಖಂಡ ಸಲಹೆ ಮೇರೆಗೆ ಬಿಡುಗಡೆ ಮಾಡಿಲ್ಲ. ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭ ಕುಮಾರಸ್ವಾಮಿ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications