ಸದ್ಯಕ್ಕೆ ವಿದ್ಯುತ್ ದರ ಏರಿಕೆ ಬಿಸಿ ಇಲ್ಲ

ಕೆಪಿಟಿಸಿಎಲ್‌ಗೆ ನೀಡಬೇಕಾದ ವಿದ್ಯುತ್ ಸರಬರಾಜು ವೆಚ್ಚ ಸೇರಿದಂತೆ ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಿಸಬೇಕು ಎಂದು ರಾಜ್ಯದ ಐದು ಎಸ್ಕಾಂಗಳು ಕೆಇಆರ್‌ಸಿ ಮುಂದೆ ಪ್ರಸ್ತಾವ ನೀಡಿತ್ತು. ಆದರೆ, ಅಷ್ಟೊಂದು ಪ್ರಮಾಣದಲ್ಲಿ ದರ ಏರಿಕೆಗೆ ಕೆಇಆರ್‌ಸಿ ಒಪ್ಪಿಗೆ ನೀಡದೇ ಇದ್ದರೂ ಪ್ರತಿ ಯೂನಿಟ್‌ಗೆ 10ರಿಂದ 20 ಪೈಸೆಯಷ್ಟು ದರ ಹೆಚ್ಚಿಸಲು ಒಪ್ಪಿಗೆ ನೀಡುವ ಸಾಧ್ಯತೆ ಇತ್ತು.
ಕಳೆದ ವರ್ಷದ ಏ. 30ರಂದು ವಿದ್ಯುತ್ ದರ ಏರಿಕೆಯಾಗಿತ್ತು, ಪ್ರತಿ ಯೂನಿಟ್ ಗೃಹ ಬಳಕೆ ವಿದ್ಯುತ್‌ಗೆ 10 ಪೈಸೆ, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆ 20 ಪೈಸೆಯಷ್ಟು ಏರಿಕೆ ಮಾಡಲಾಗಿತ್ತು.
ಕಳೆದ ನವೆಂಬರ್‌ನಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ವಿದ್ಯುತ್ ದರ ಏರಿಕೆ ಕುರಿತಂತೆ ಕೆಇಆರ್‌ಸಿ ಮುಂದೆ ಪ್ರಸ್ತಾವ ಸಲ್ಲಿಸಿದ್ದವು. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಿಗೆ ಸೇರಿ ಪ್ರತಿ ಯೂನಿಟ್‌ಗೆ 70 ಪೈಸೆ ದರ ಹೆಚ್ಚಳ ಮಾಡಬೇಕು ಎಂಬ ಕೋರಿಕೆ ಮುಂದಿಟ್ಟಿದ್ದವು. ಈ ಕುರಿತಂತೆ ಸಾರ್ವಜನಿಕ ವಿಚಾರಣೆ ಪೂರ್ಣಗೊಳಿಸಿದ್ದ ಕೆಇಆರ್‌ಸಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು,
ವಿದ್ಯುತ್ ಕೊರತೆ, ಪೂರೈಕೆ ವೆಚ್ಚ ಹೆಚ್ಚಳ ಸೇರಿದಂತೆ ಕಳೆದ ಮೂರೂವರೆ ವರ್ಷದಲ್ಲಿ ನಾಲ್ಕು ಬಾರಿ ದರ ಏರಿಕೆಯಾಗಿದೆ. ಆದರೆ, ಈ ಬಾರಿ ಬರಗಾಲ, ಚುನಾವಣೆ ಮುಂತಾದ ಕಾರಣಗಳಿಂದ ದರ ಏರಿಕೆ ಬಿಸಿಯಿಂದ ಗ್ರಾಹಕರು ಬಚಾವಾಗಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಸರ್ಕಾರ ಕೂಡಾ ಮಧ್ಯೆ ಪ್ರವೇಶಿಸುವಂತಿಲ್ಲ.
ಅಣುಸ್ಥಾವರ ಸ್ಥಾಪನೆ: ವಿವಾದಿತ ತಮಿಳುನಾಡಿನ ಕೂಡಂಕುಳಂ ಅಣುಸ್ಥಾವರದ ಮೊದಲ ಘಟಕ ಮುಂದಿನ ತಿಂಗಳು ಆರಂಭವಾಗಲಿದೆ. ಇದರಿಂದ ಕರ್ನಾಟಕಕ್ಕೆ ಎಷ್ಟರಮಟ್ಟಿಗೆ ಲಾಭವಾಗುವುದೋ ಕಾದು ನೋಡಬೇಕಿದೆ. ಅಣುಸ್ಥಾವರ ಆರಂಭದ ವಿಷಯವಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಭರವಸೆ ನೀಡಿದ್ದಾರೆ. 'ಬ್ರಿಕ್' ರಾಷ್ಟ್ರಗಳ ಸಮಿತಿ ಸಭೆ ಬಳಿಕ ನಡೆದ ಭೇಟಿ ವೇಳೆ ಪ್ರಧಾನಿ ಈ ಭರವಸೆ ನೀಡಿದ್ದಾರೆ. ಬ್ರಿಕ್ ರಾಷ್ಟ್ರಗಳು ವಿಶ್ವಬ್ಯಾಂಕ್ ಗೆ ಪ್ರತಿಯಾಗಿ ಅದೇ ಮಾದರಿ ಬ್ಯಾಂಕ್ ಸ್ಥಾಪನೆ ಮಾಡುವುದಾಗಿ ಕೂಡಾ ಘೋಷಿಸಿವೆ.












Click it and Unblock the Notifications