ಕರಾವಳಿಯಲ್ಲಿ ರಂಗೇರದ ವಿಧಾನಸಭೆ ಚುನಾವಣೆ

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ. ಹಾಲಿ ವಿಧಾನಸಭೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮ ಬಲದಲ್ಲಿದೆ.
ಬೆಳ್ತಂಗಡಿ, ಮೂಡಬಿದಿರೆ, ಮಂಗಳೂರು ನಗರ ಮತ್ತು ಬಂಟ್ವಾಳ ಕಾಂಗ್ರೆಸ್ ಅಧೀನದಲ್ಲಿದ್ದರೆ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು ಮತ್ತು ಸುಳ್ಯ (ಮೀಸಲು) ಬಿಜೆಪಿ ಆಡಳಿತದಲ್ಲಿದೆ. ಇನ್ನು, ಈ ಬಾರಿಯಾದರೂ ಜೆಡಿಎಸ್ ಇಲ್ಲಿ ಅಸ್ತಿತ್ವಕ್ಕೆ ಬರಲಿದೆಯಾ? ಎಂಬ ಕುತೂಹಲವೂ ಮೂಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಕರಾವಳಿ ಜಿಲ್ಲೆ ಅನುಕೂಲಕರವಾಗಿದೆಯಾದರೂ ಯಾವುದೇ ಪಕ್ಷವೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಧೈರ್ಯ ಮಾಡಿಲ್ಲ. ಏಪ್ರಿಲ್ 11ರಂದು ನಾಮಪತ್ರ ಸಲ್ಲಿಕೆ ಆರಂಭ ದಿನವಾಗಿದ್ದು, ಅಂದಿನಿಂದಲಾದರೂ ಚುನಾವಣೆ ಕಾವು ಪಡೆಯುವುದಾ? ಎಂದು ಮಂಗಳೂರು ಮಂದಿ ಕಾದುಕುಳಿತಿದ್ದಾರೆ.
ಅದಕ್ಕೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಈ ಮಾಸಾಂತ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೆ ಸ್ವಲ್ಪ ಚುನಾವಣೆ ಕಾವು ಕಂಡುಬರಬಹುದು. ಕಾಂಗ್ರೆಸ್ ವತಿಯಿಂದ ಪಕ್ಷದ ಜಿಲ್ಲಾಧ್ಯಕ್ಷ ಬಂಟ್ವಾಳ ರಮಾನಾಥ ರೈ ಈ ಬಾರಿ ಹೆಚ್ಚು ಉತ್ಸಾಹದಿಂದ ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ.
ಆದರೆ ಬಿಜೆಪಿಯಲ್ಲಿ ಈ ಬಾರಿ ಅಷ್ಟೊಂದು ಉತ್ಸಾಹ ಉಳಿದಿಲ್ಲ. ಇನ್ನು ಜೆಡಿಎಸ್ ಈ ಬಾರಿಯಾದರೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುತ್ತದಾ ಅಂದರೆ ಜಿಲ್ಲಾ ಜೆಡಿಎಸ್ ನಲ್ಲಿ ಒಳಜಗಳ ಥಳುಕು ಹಾಕಿಕೊಂಡಿದೆ. ಏಪ್ರಿಲ್ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣೆ ಕಳೆಗಟ್ಟುತ್ತದಾ, ಕಾದುನೋಡಬೇಕಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications