ಕರ್ನಾಟಕ ವಿಧಾನಸಭೆ ಚುನಾವಣೆ-2013 ವೇಳಾಪಟ್ಟಿ

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಹಾಲಿ ಸರ್ಕಾರದ ಅವಧಿ ಜೂನ್ 3ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆಸಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ವೇಳಾಪಟ್ಟಿ ರೂಪಿಸಲಾಗಿದೆ
ತಕ್ಷಣದಿಂದಲೇ (ಮಾ.20) ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜಗದೀಶ್ ಶೆಟ್ಟರ್ ಅವರ ಸರ್ಕಾರ ಕುಡಿಯುವ ನೀರು ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಾತ್ರ ಅನುದಾನ ಬಿಡುಗಡೆ ಮಾಡಬಹುದಾಗಿದೆ. ಬೇರೆ ಯಾವುದೇ ಅನುದಾನ, ಕಾಮಗಾರಿಗೆ ಚಾಲನೆ ನೀಡುವಂತಿಲ್ಲ.
ಚುನಾವಣಾ ಪ್ರಕ್ರಿಯೆಗಳು:
* ಏಪ್ರಿಲ್ 10, 2013: ಅಧಿಸೂಚನೆ ಪ್ರಕಟ
* ಏ.17, 2013: ನಾಮಪತ್ರ ಸಲ್ಲಿಸಲು ಕೊನೆಯ ದಿನ
* ಏ.18, 2013: ನಾಮಪತ್ರಗಳ ಪರಿಶೀಲನೆ
* ಏ.20, 2013: ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
* ಮೇ 5, 2013: ಮತದಾನ
* ಮತದಾನದ ಅವಧಿ: ಬೆಳಗ್ಗೆ 7 ಗಂಟೆ ಇಂದ ಸಂಜೆ 5 ಗಂಟೆ
* ಮೇ 8,2013: ರಂದು ಮತ ಎಣಿಕೆ, ಫಲಿತಾಂಶ
* ಒಟ್ಟು ಮತದಾರರು: 4,36,14,881 ಕೋಟಿ
* 2,22,73,618 ಕೋಟಿ ಪುರುಷ ಮತದಾರರು
* 2,13,38,344 ಕೋಟಿ ಮಹಿಳಾ ಮತದಾರರು
* 2919 ಲೈಂಗಿಕ ಅಲ್ಪಸಂಖ್ಯಾತರು
* 4,47,914 ಅತಿ ಹೆಚ್ಚು ಮತದಾರರು ಬೆಂಗಳೂರು ದಕ್ಷಿಣ ಕ್ಷೇತ್ರ
* 1,49,980 ಅತಿ ಕಡಿಮೆ ಮತದಾರರು ಶೃಂಗೇರಿ ಕ್ಷೇತ್ರ
* ಮತದಾನಕ್ಕೆ 3-4 ದಿನ ಮನೆಮನೆಗೆ ಮತದಾನ ಚೀಟಿ ವಿತರಣೆ
* ಮತಚೀಟಿಯಲ್ಲಿ ಮತದಾನದ ಸ್ಥಳ, ಮತದಾನ ಕೇಂದ್ರ, ಬೂತ್ ವಿವರಗಳಿರುತ್ತವೆ.
* 50,446 ಮತಗಟ್ಟೆಗಳ ಸ್ಥಾಪನೆ
* ಚುನಾವಣಾ ಸಹಾಯ ವಾಣಿ : 1950
* ಚುನಾವಣಾ ವೆಚ್ಚ ಮಿತಿ: ಪ್ರತಿ ಅಭ್ಯರ್ಥಿಗೆ ಗರಿಷ್ಠ 16 ಲಕ್ಷ ರು
* ಚುನಾವಣಾ ಬಂದೋಬಸ್ತ್ ಗೆ ಕೇಂದ್ರ ಮೀಸಲು ಪಡೆ, ಕೈಗಾರಿಕಾ ಭದ್ರತಾ ಪಡೆ, ಗೃಹರಕ್ಷಕ ದಳ ಸೇರಿ 1.35 ಲಕ್ಷ ಪೊಲೀಸ್ ಸಿಬ್ಬಂದಿ ಬಳಕೆ
* ಮತದಾನಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 5000 ಬಸ್ ಗಳನ್ನು ಬಳಸುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications