ಮೇಯರ್ ಪಟ್ಟಕ್ಕೆ ಮೂವರು ಗೀತಾ, ಒಬ್ಬಳು ಶಾಂತಾ

ಹಾಲಿ ಮೇಯರ್ ಡಿ ವೆಂಕಟೇಶ್ ಮೂರ್ತಿ ಹಾಗೂ ಉಪ ಮೇಯರ್ ಎಲ್ ಶ್ರೀನಿವಾಸ್ ಅವರ ಅವಧಿ ಮುಗಿಯುವ ಮುನ್ನವೇ ಪುರಪಿತೃಗಳ ಸ್ಥಾನಕ್ಕೆ ಭಾರಿ ಲಾಬಿ ನಡೆಯುತ್ತಿದೆ. 47ನೇ ಮೇಯರ್ ಸ್ಥಾನ ಸಾಮಾನ್ಯ ವರ್ಗ(ಮಹಿಳೆ)ಗೆ ಮೀಸಲಾಗಿದೆ. ಶಾಂತಾ ಕುಮಾರಿ(ಮೂಡಲಪಾಳ್ಯ), ಗೀತಾ ಶ್ರೀನಿವಾಸ್ ರೆಡ್ಡಿ (ದೊಮ್ಮಲೂರು) ಹಾಗೂ ಗೀತಾ ವಿವೇಕಾನಂದ(ವಿಜ್ಞಾನ್ ನಗರ) ಕಣದಲ್ಲಿದ್ದಾರೆ. 48ನೇ ಮೇಯರ್ ಸ್ಥಾನ ಹಿಂದುಳಿದ ವರ್ಗ (ಎ) ಗೆ ಮೀಸಲಾಗಿದೆ.
ಸಚಿವ ಸೋಮಣ್ಣ ಅವರ ಬೆಂಬಲ ಪಡೆದಿರುವ ಮೂರು ಬಾರಿ ಕೌನ್ಸಿಲರ್ ಆಗಿರುವ ಶಾಂತಕುಮಾರಿ ಅವರು ಉಳಿದಿಬ್ಬರಿಗಿಂತ ಸ್ಪರ್ಧೆಯಲ್ಲಿ ಮುಂದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಆಕೆ ಕುರುಬ ಸಮುದಾಯಕ್ಕೆ ಸೇರಿದ್ದು, ಮೀಸಲಾತಿ ಪ್ರಕಾರ ಹಾಗೂ ಹಾಲಿ ಮೇಯರ್ ಜಾತಿ ಪ್ರಕಾರ ನೋಡಿದರೆ ಆಕ್ಷೇಪ ಏಳುವುದು ಖಾತ್ರಿಯಾಗಿದೆ.
ಈ ಮೂವರಲ್ಲದೆ ಗೀತಾ ಶಶಿಕುಮಾರ್(ಅಟ್ಟೂರು) ಹೆಸರು ಕೂಡಾ ಕೇಳಿ ಬರುತ್ತಿದ್ದು, ಮಾಜಿ ಮೇಯರ್ ಎಸ್ ಕೆ ನಟರಾಜ್ ಹಾಗೂ ಯಲಹಂಕ ಎಂಎಲ್ ಎ ಎಸ್ ಆರ್ ವಿಶ್ವನಾಥ್ ಬೆಂಬಲ ಇವರಿಗಿದೆ. ಆದರೆ, ಆರೋಗ್ಯ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ಮುಳುವಾಗಲಿದೆ.
ಉಪಮೇಯರ್ ಸ್ಥಾನಕ್ಕೆ ಬಿ ಸೋಮಶೇಖರ್(ಶಾಖಂಬರಿ ನಗರ), ಎ.ಎಚ್ ಬಸವರಾಜು(ಬನಶಂಕರಿ ಟೆಂಪಲ್ ವಾರ್ಡ್), ಎಂ ಕೃಷ್ಣ(ಸಿ.ವಿ ರಾಮನ್ ನಗರ), ಎಚ್ ಆರ್ ಕೃಷ್ಣಪ್ಪ (ರಾಜಾಜಿನಗರ), ಬಿ.ವಿ ಗಣೇಶ್(ಚಾಮರಾಜಪೇಟೆ) ಹಾಗೂ ಎ.ಎಲ್ ಶಿವಕುಮಾರ್ (ಚಿಕ್ಕಪೇಟೆ) ಅವರ ಹೆಸರುಗಳು ಕೇಳಿ ಬಂದಿದೆ.
ಬುಧವಾರ (ಮಾ.21) ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‌ನಲ್ಲಿ ವೈದಿಕ ಭವನ ಹಾಗೂ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಾಲಿಕೆಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆಯಿಂದ, ಸಾಮಾನ್ಯ ವರ್ಗಕ್ಕೆ ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಮಹಿಳಾ ಮೀಸಲಾತಿಯನ್ನು ತಿದ್ದುಪಡಿ ಮಾಡಲಿಚ್ಛಿಸಿದರೆ ಕಾನೂನಿನಲ್ಲಿ ಅವಕಾಶವಿಲ್ಲ. ಮುಂದಿನ ಮೇಯರ್ ಮಹಿಳೆಯೇ ಆಗಲಿದ್ದಾರೆ ಎಂದರು.
ವಿವಿಧ ಯೋಜನೆಗಳು: ಇದೇ ಮೊದಲ ಬಾರಿಗೆ ಯಡಿಯೂರು ವಾರ್ಡ್‌ನಲ್ಲಿ ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಒಂದು ವರ್ಷದ ವೃತ್ತಿನಿರತ ಕಂಪ್ಯೂಟರ್ ಡಿಪ್ಲೊಮಾ ಕೋರ್ಸ್ ನೀಡಲಾಗುತ್ತಿದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಹೇಳಿದರು,
ವಿದ್ಯಾರ್ಥಿಗಳಿಗೆ ಯುವ ಡಾಟ್ ಕಂ, ಕಿಯೊನಿಕ್ಸ್ ಸಂಸ್ಥೆ ಕಂಪ್ಯೂಟರ್ ತರಬೇತಿ ನೀಡಲಿದ್ದು, ಜೊತೆಗೆ ಅದರ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸ್ಥಳೀಯ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಮಾತನಾಡಿ ಬಿಬಿಎಂಪಿ ವತಿಯಿಂದ 90 ಲಕ್ಷ ರೂ.ವೆಚ್ಚದಲ್ಲಿ ವೈದಿಕ ಭವನ ಹಾಗೂ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಯಡಿಯೂರು ಕೆರೆಯ ಸಮೀಪವೇ ಇದುವರೆಗೂ ವೈದಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇದರಿಂದ ಕೆರೆ ಮಲಿನವಾಗುತ್ತಿತ್ತು. ಈ ನಿಟ್ಟಿನಲ್ಲಿ ವೈದಿಕ ಭವನವನ್ನು ಸ್ಥಾಪಿಸಲಾಗಿದೆ. ಪದ್ಮನಾಭನಗರ ಹಾಗೂ ಯಡಿಯೂರು ವಾರ್ಡ್‌ನ ನಾಗರಿಕರು ಈ ಭವನದಲ್ಲಿ ವೈದಿಕ ಕಾರ್ಯಗಳನ್ನು ಮಾಡಬಹುದು ಎಂದು ತಿಳಿಸಿದರು.












Click it and Unblock the Notifications