ಬೇಳೂರಿಗೆ ಈಶ್ವರಪ್ಪ ಗೇಟ್ ಪಾಸ್; ಯಡ್ಯೂರಪ್ಪನೇ ಗತಿ

'ಇನ್ನು ಆಯಪ್ಪ ವಾಪಸ್ ಬಂದರೆ ಬಿಜೆಪಿ ಸೇರಿಸಿಕೊಳ್ಳಲ್ಲ' ಎಂದು ಬೇಳೂರು ಬಗ್ಗೆ ಈಶ್ವರಪ್ಪ ಹೇಳಿದ್ದಾರೆ.
ಭಾನುವಾರ ಬೇಳೂರು ಏನು ಹೇಳಿದ್ದರೆಂದರೆ?:
'ಹಿಂದುಳಿದ ವರ್ಗಕ್ಕೆ ಸೇರಿದ ತಮಗೆ ಬಿಜೆಪಿ, ಆರ್ ಎಸ್ಎಸ್ ನ್ಯಾಯ ಕೊಡುತ್ತದೆ ಎಂದು ತಾಳ್ಮೆ ವಹಿಸಿದ್ದೆ. ಆದರೆ ಈಶ್ವರಪ್ಪ ತಾವೊಬ್ಬರೇ ಪಕ್ಷದ ಹಿಂದುಳಿದ ನಾಯಕನೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಬಜೆಟ್ ಸಂದರ್ಭದಲ್ಲಿ ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸದೆ ಸಾಗರವನ್ನು ನಿರ್ಲಕ್ಷಿಸಿ ಕೇವಲ ಶಿವಮೊಗ್ಗಕ್ಕೆ ಅನುದಾನ ತಂದಿದ್ದಾರೆ' ಎಂದು ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಮೇಲೆ ಬೇಳೂರು ಹರಿಹಾಯ್ದಿದ್ದರು.
ಮುಂದುವರಿದು, 'ಶಿರಸಿಯಿಂದ ಆಪ್ತರು ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಹ್ವಾನಿಸಿರುವುದು ನಿಜ. ಯಾವುದೇ ರಾಜಕೀಯ ಪಕ್ಷದ ಸೇರ್ಪಡೆ ನಿರ್ಧಾರವನ್ನು ಅಂತಿಮಗೊಳಿಸಿಲ್ಲ. ಒಂದೊಮ್ಮೆ ಅಗತ್ಯಬಿದ್ದರೆ ಪಕ್ಷೇತರನಾಗಿಯಾದರೂ ಸಾಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ' ಎಂದೂ ಬೇಳೂರು ಘೋಷಿಸಿದ್ದರು.
'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ಇನ್ನು 15 ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರಲಿದ್ದೇನೆ' ಎಂದು ಪ್ರಕಟಿಸುತ್ತಾ ಬಿಜೆಪಿ ಮೇಲೆ ಪರೋಕ್ಷವಾಗಿ ದಾಳಿ ನಡೆಸಿದ್ದ ಶಾಸಕ ಬೇಳೂರುಗೆ ಕೆಎಸ್ ಈಶ್ವರಪ್ಪ ಇಂದು ಸೋಮವಾರ ಗೇಟುಪಾಸು ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.
ಇನ್ನು ಯಡಿಯೂರಪ್ಪನೇ ಗತಿ:
ರಾಜ್ಯದ ಪ್ರಮುಖ ಈಡಿಗ ಸಮುದಾಯಕ್ಕೆ ಸೇರಿದ ಶಾಸಕ ಬೇಳೂರು ಪದೇ ಪದೇ, ರಾಜಕೀಯದಲ್ಲಿ ಯಾರೂ ಶಾಶ್ವತ ಸ್ನೇಹಿತರಲ್ಲ, ಶತ್ರುಗಳಲ್ಲ ಎಂದು ಉದ್ಗರಿಸುವುದರ ಹಿಂದೆ ಅಂತಿಮವಾಗಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಗೋಚರಿಸುತ್ತಿದೆ.
ಈ ಮೂರನ್ನು ತಪ್ಪದೆ ಓದಿ:
* ನನಗೆ ಗೂಟ ಹೊಡೆದಿದ್ದು ಬಿಎಸ್‌ವೈ: ಬೇಳೂರು
* ಸಿಎಂ ಶೆಟ್ಟರ್ ಕೆಳಗಿಳಿಸಿದರೆ ಯಡಿಯೂರಪ್ಪ ಭಸ್ಮ
* ಕಾಮುಕರು ನನ್ನ ಕಾಲೆಳೆದಿದ್ದಾರೆ: ಗೋಪಾಲಕೃಷ್ಣ












Click it and Unblock the Notifications