ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಔಟ್

ದೇವನಹಳ್ಳಿ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಹಾಲಿ 71 ಮಂದಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಒಂದೇ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಮಾರ್ಪಾಡುಗಳು ಹೈಕಮಾಂಡ್ ಮಟ್ಟದಲ್ಲೇ ನಡೆಯಲಿವೆ. 2150ಕ್ಕೂ ಅಧಿಕ ಅರ್ಜಿಗಳನ್ನು ಸದ್ಯಕ್ಕೆ 600 ಅರ್ಜಿಗಳಿಗೆ ಇಳಿಸಲಾಗಿದೆ. ಬೆಂಗಳೂರಿನ 28 ಕ್ಷೇತ್ರಕ್ಕೆ 84 ಜನ ಸಂಭಾವ್ಯ ಅಭ್ಯರ್ಥಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಕುತೂಹಲಕಾರಿ ಪಟ್ಟಿ: ನೆಲಮಂಗಲ ಕ್ಷೇತ್ರಕ್ಕೆ ಮಾಜಿ ಸಚಿವ ಆಂಜನ ಮೂರ್ತಿ ಅವರ ಒಂದು ಹೆಸರನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಕಾಂಗ್ರೆಸ್ ಸೇರಿರುವ ಸಿ.ಪಿ.ಯೋಗೇಶ್ವರ್ ಅವರ ಹೆಸರನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ಪರಿಗಣಿಸಿಲ್ಲ.
* ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಜಾಜಿನಗರದಲ್ಲಿ ಹೆಚ್ಚು ಸ್ಪರ್ಧೆಯಿದ್ದು ಈ ಕ್ಷೇತ್ರಕ್ಕೆ 6 ಮಂದಿಯ ಹೆಸರನ್ನು ಸೂಚಿಸಲಾಗಿದೆ.
* ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವೆ ರಾಣಿ ಸತೀಶ್, ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಆರಾಧ್ಯ ಮುಖಂಡರಾದ ತಿಮ್ಮೇಗೌಡ ಅವರುಗಳ ಹೆಸರುಗಳು ಪಟ್ಟಿಯಲ್ಲಿವೆ.
* ಮಲ್ಲೇಶ್ವರಂ ಕ್ಷೇತ್ರಕ್ಕೆ ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಮಾಜಿ ಮೇಯರ್ ಹುಚ್ಚಪ್ಪ ಸೇರಿದಂತೆ ಮೂರು ಜನರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ಸರ್.ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಮುಖಂಡರಾದ ಪಿ.ರಮೇಶ್, ಛಲವಾದಿ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್
* ರಾಜಾಜಿನಗರದಂತೆ ಜಯನಗರ ಕ್ಷೇತ್ರಕ್ಕೂ ಹೆಚ್ಚು ಸ್ಪರ್ಧೆಯಿದ್ದು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಸಿ.ವೇಣುಗೋಪಾಲ್, ಯು.ಬಿ.ವೆಂಕಟೇಶ್, ಚಂದ್ರಶೇಖರ ರಾಜು
* ಯಲಹಂಕ ಕ್ಷೇತ್ರಕ್ಕೆ ಗಂಟಕಾನಹಳ್ಳಿ ಕೃಷ್ಣಪ್ಪ, ಗೋಪಾಲಕೃಷ್ಣ, ಗೋಪಿ,
* ದಾಸರಹಳ್ಳಿ ಕ್ಷೇತ್ರಕ್ಕೆ ಮಂಜುನಾಥ್, ಪುಟ್ಟಸ್ವಾಮಿಗೌಡ, ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಶಂಕರ್,
* ಹೆಬ್ಬಾಳ ಕ್ಷೇತ್ರಕ್ಕೆ ಎಚ್.ಎಂ.ರೇವಣ್ಣ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ಮೊಮ್ಮಗ ರೆಹಮಾನ್ ಶರೀಫ್, ಕಾಂಗ್ರೆಸ್ ಮುಖಂಡ ಅಬ್ದುಲ್ ವಾಹಾಬ್,
* ಚಾಮರಾಜಪೇಟೆ ಕ್ಷೇತ್ರದಿಂದ ಮಾಜಿ ಪೊಲೀಸ್ ಅಧಿಕಾರಿ ಜಿಯಾಭಾವ, ಅಲ್ತಾಫ್, ರತ್ನಪ್ರಭಾ ಅರಸ್, ಎಂ.ಸಿ.ಕುಮಾರ್ ಅವರ ಹೆಸರುಗಳು ಶಿಫಾರಸ್ಸುಗೊಂಡಿವೆ.
* ಚಿಕ್ಕಪೇಟೆ ಕ್ಷೇತ್ರದಿಂದ ಆರ್.ವಿ.ದೇವರಾಜು, ಬಿಬಿಎಂಪಿ ವಿರೋಧಪಕ್ಷದ ಮಾಜಿ ನಾಯಕ ಉದಯಶಂಕರ್, ಮಾಜಿ ಮೇಯರ್ ಪಿ.ಆರ್.ರಮೇಶ್
* ಬಸವನಗುಡಿ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್, ಸುಧೀಂದ್ರ, ನಿರ್ಮಾಪಕ ಕೃಷ್ಣ ಪ್ರಜ್ವಲ್
* ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮಾಜಿ ಸಂಸದೆ ತೇಜಸ್ವಿನಿಗೌಡ, ರಾಜಗೋಪಾಲರೆಡ್ಡಿ, ಸದಾನಂದ,
* ರಾಜರಾಜೇಶ್ವರಿ ಕ್ಷೇತ್ರಕ್ಕೆ ಹನುಮಂತರಾಯಪ್ಪ, ಪಿ.ಎನ್.ಕೃಷ್ಣಮೂರ್ತಿ, ಹೇಮಲತಾ ರಮೇಶ್, ಮುನಿರತ್ನಂ,
* ಯಶವಂತಪುರ ಕ್ಷೇತ್ರಕ್ಕೆ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಮರಿಯಮ್ಮ
* ಪದ್ಮನಾಭನಗರ ಕ್ಷೇತ್ರಕ್ಕೆ ಗುರ್ರಪ್ಪ ನಾಯ್ಡು, ಯುವ ಕಾಂಗ್ರೆಸ್ ಮುಖಂಡ ಚೇತನ್‌ಗೌಡ, ವಿಜಯರಾಜ್
* ಆನೇಕಲ್ ಕ್ಷೇತ್ರಕ್ಕೆ ಶಿವಣ್ಣ, ಕೃಷ್ಣಪ್ಪ ಅವರು ಹೆಸರುಗಳು ಶಿಫಾರಸ್ಸುಗೊಂಡಿವೆ.
* ಹಾಲಿ ಶಾಸಕರಾಗಿರುವ ರೋಷನ್‌ಬೇಗ್ ಶಿವಾಜಿನಗರದಿಂದ, ಎನ್.ಎ.ಹ್ಯಾರಿಸ್ ಶಾಂತಿನಗರದಿಂದ, ಕೃಷ್ಣಭೈರೇಗೌಡ ಬ್ಯಾಟರಾಯನಪುರ ಕ್ಷೇತ್ರದಿಂದ, , ನರೇಂದ್ರಬಾಬು ಮಹಾಲಕ್ಷ್ಮಿಲೇಔಟ್ ಕ್ಷೇತ್ರದಿಂದ, ಎಂ.ಕೃಷ್ಣಪ್ಪ ವಿಜಯನಗರದಿಂದ, ಪ್ರಿಯಾಕೃಷ್ಣ ಗೋವಿಂದರಾಜನಗರ ಕ್ಷೇತ್ರದಿಂದ, ರಾಮಲಿಂಗರೆಡ್ಡಿ ಬಿಟಿಎಂ ಲೇಔಟ್‌ನಿಂದ, ವೆಂಕಟಸ್ವಾಮಿ ದೇವನಹಳ್ಳಿ ಕ್ಷೇತ್ರದಿಂದ ಅಭ್ಯರ್ಥಿಗಳಾಗಿದ್ದಾರೆ.
* ಗಾಂಧಿನಗರ ಕ್ಷೇತ್ರದಿಂದ ಹಾಲಿ ಶಾಸಕ ದಿನೇಶ್‌ಗುಂಡೂರಾವ್ ಜೊತೆಗೆ ಟಿ.ಮಲ್ಲೇಶ್
* ಪುಲಿಕೇಶಿನಗರ ಕ್ಷೇತ್ರಕ್ಕೆ ಪ್ರಸನ್ನಕುಮಾರ್ ಜೊತೆಗೆ ಸಂಪತ್‌ರಾಜ್ ಹೆಸರುಗಳು ಪಟ್ಟಿಯಲ್ಲಿದೆ. [ ಬೆಂಗಳೂರು : ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications