ಆದಿತ್ಯ ಬಿಸ್ವಾಸ್ ಜಿಲ್ಲಾಧಿಕಾರಿ ಅಲ್ಲ ಸರ್ವಾಧಿಕಾರಿ

ಚುನಾವಣೆ ಕಾಲೇ ರಾಜಕಾರಣಿಗಳು ಪರಸ್ಪರ ಕೆಸರೆರಚಿಕೊಳ್ಳುವುದು ಸಾಮಾನ್ಯ. ಆದರೆ ಇದೇನಿದು ಶಾಸಕನೊಬ್ಬ ಸರಕಾರಿ ಅಧಿಕಾರಿಯನ್ನು ಹೀಗೆಲ್ಲ ಬೈದಾಡಬಹುದಾ?
'ರಾಮುಲು ಖುದ್ದಾಗಿ ಪ್ರಚಾರ ನಡೆಸಲಿಲ್ಲ. ಹಾಗಾಗಿ ನಾವು ಸೋತೆವು' ಎಂದು ಬಳ್ಳಾರಿಯಲ್ಲಿ ರೆಡ್ಡೀ ಪಡೆ ಧೂಳೀಪಟವಾಗಲು ಸೋಮಶೇಖರ ರೆಡ್ಡಿ ಮಹಾಕಾರಣ ಕಂಡುಕೊಂಡಿರುವಾಗ ಶ್ರೀರಾಮುಲು ಮಾತ್ರ 'ಅದೆಲ್ಲಾ ಏನೂ ಅಲ್ಲ. ಆ ಸರ್ವಾಧಿಕಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವನೇ ಕಾರಣ ಎಂದು ಏಕವಚನದಲ್ಲೇ (ಈ ರೆಡ್ಡಿಗಳಿಗೆ ಏಕವಚನ/ಬಹುವಚನ ಯಾವುದು ಎಂದು ತಿಳಿಯುವುದಿಲ್ಲ, ಅದು ಬೇರೆ ಮಾತು!) ಮೊನ್ನೆ ಝಾಡಿಸಿದ್ದಾರೆ.
ಇಷ್ಟೆಲ್ಲ ಡೆಕೋರೇಶನ್ ಹೊಂದಿರುವ ಆದಿತ್ಯ ಬಿಸ್ವಾಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಪಕ್ಷದ ವಿರುದ್ಧ ಷಡ್ಯಂತ್ರ ನಡೆಸಿದ್ದಾನೆ. ಮತ ಪಟ್ಟಿ ಗೊಂದಲದಿಂದಲೇ ತಮ್ಮ ಪಕ್ಷ ಸೋಲುಂಡಿದೆ ಎಂದು DC ಮೇಲೆ ಗೂಬೆ ಕೂರಿಸಿ, ರಾಮುಲು ಧನ್ಯರಾಗಿದ್ದಾರೆ.
ವರ್ಗಾವಣೆಗೂ ಪಟ್ಟು: ಚುನಾವಣೆ ಆರಂಭದಿಂದಲೂ ನಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಪಕ್ಷದ ಚಿಹ್ನೆ ಗೊಂದಲ ಸೃಷ್ಟಿಸಿ ಮತದಾರರು ಹಾಗೂ ಅಭ್ಯರ್ಥಿಗಳಿಗೆ ತೊಂದರೆ ಉಂಟು ಮಾಡಿದ್ದಾರೆ. ಮತಪಟ್ಟಿಯ ದೋಷಗಳಿಂದ ವಾರ್ಡ್ ವಾರು ಮತಗಳು ಅದಲೂಬದಲಾಗಿ ಮತದಾರರು ತಮ್ಮ ಹಕ್ಕು ಚಲಾಯಿಸದೆ ವಂಚಿತರಾಗಿದ್ದಾರೆ. ಮತದಾರರ ಚೀಟಿಯನ್ನು ನಾವೇ ನೀಡುತ್ತೇವೆಂದು ಹೇಳಿದ ಜಿಲ್ಲಾಧಿಕಾರಿ, ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಚೀಟಿ ಹಂಚುವಂತೆ ತಿಳಿಸಿದ್ದಾರೆ ಎಂದು ಆರೋಪಿಸಿರುವ ರಾಮುಲು ಇಂತಹ DCಯನ್ನು ಮುಂದಿನ ಚುನಾವಣೆಗೂ ಮುನ್ನ ಎತ್ತಂಗಡಿ ಮಾಡಿ ಎಂದು ಉಡ ಪಟ್ಟು ಹಿಡಿದಿದ್ದಾರೆ.
ಕರುಣಾಕರ ರೆಡ್ಡಿಯ ಅಚ್ಚುಮೆಚ್ಚಿನ ಅಧಿಕಾರಿ: ಅಮ್ಲಾನ್ ಆದಿತ್ಯ ಬಿಸ್ವಾಸ್- 1997ನೇ ಬ್ಯಾಚಿನ ಯುವ ಐಎಎಸ್ ಅಧಿಕಾರಿ. ಮೂಲತಃ ಪಶ್ಚಿಮ ಬಂಗಾಳದವರು. ಜನನ 25/08/1968. ಇತಿಹಾಸದಲ್ಲಿ ಸ್ನಾತಕೋತ್ತರಪದವೀಧರ.
2011ರ ಫೆಬ್ರವರಿ 21ರಿಂದ ಬಳ್ಳಾರಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಮುನ್ನ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಜಿ ಕರುಣಾಕರ ರೆಡ್ಡಿ ಅವರ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು.












Click it and Unblock the Notifications