ಶೋಭಾಗೆ ಬ್ರೇಕ್: ಕೆಜೆಪಿ ಬಸ್ ಹತ್ತುವ 10 ಮಂದಿ ಇವರೇ
ಬೆಂಗಳೂರು, ಮಾ.15: ಮಾಜಿ ಸಚಿವ, ಕೆಜೆಪಿಯ ಹಿರಿಯಣ್ಣ ಉದಾಸಿ ಅವರ ಮಧ್ಯಸ್ಥಿಕೆಯಲ್ಲಿ ಬಿಜೆಪಿಯ ಅನೇಕ ಶಾಸಕ/ಸಚಿವರು ಕೆಜೆಪಿಗೆ ಸೇರ್ಪಡೆಯಾಗಲು ಒಲವು ತೋರಿದ್ದಾರಾದರೂ *Conditions apply ಅಂದಿದ್ದಾರೆ.
ಏನಪ್ಪಾ ಅಂಥಾ ಕಂಡೀಷನ್ಸು, ಏನು ಮುಂದಿನ ಚುನಾವಣೆಗೆ ಟಿಕೆಟ್ ಕೇಳಿದ್ದಾರಾ? ಅಥವಾ ದುಡ್ಡು ಕಾಸು ಏನಾದರೂ ಕೇಳಿದ್ದಾರಾ ಅಂತಂದರೆ... ಅಂಥಾದ್ದೇನೂ ಇಲ್ಲ. ನಮ್ದು ಒಂದೇ ಕಂಡೀಷನ್ನು. ಆಯಮ್ಮ ಶೋಭಾರ ಆರ್ಭಟ/ಸರ್ವಾಧಿಕಾರವನ್ನು ವಸಿ ತಡೆಗಟ್ಟಿ ಎಂದು ಪಿಸುಗುಟ್ಟಿದ್ದಾರೆ ಆ ಶಾಸಕ ಮಿತ್ರರು.
ಕಳೆದೈದು ವರ್ಷಗಳಿಂದ ಯಡಿಯೂರಪ್ಪ ಜತೆಗೇ ಬಲವಾಗಿ ಗುರುತಿಸಿಕೊಂಡಿದ್ದು, ಕೆಜೆಪಿ ಸ್ಥಾಪನೆಯ ಹಂತದಲ್ಲಿ ಹಿಂದೆ ಸರಿದಿದ್ದ ಆ ಸಚಿವ-ಶಾಸಕರು ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ನಂತರ ತಮ್ಮ ಪಕ್ಷ ನಿಷ್ಠೆಯನ್ನು ಬದಲಾಯಿಸುವ ಸಂಭವ ದಟ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿ ಅವರು ಗುರುವಾರ ತಡರಾತ್ರಿವರೆಗೂ ಕೆಜೆಪಿಯ ಹಿರಿಯಣ್ಣ ಉದಾಸಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಮುರುಗೇಶ್ ರುದ್ರಪ್ಪ ನಿರಾಣಿ
ಬಾಗಲಕೋಟ ಬೀಳಗಿ ಕ್ಷೇತ್ರದಿಂದ 2ನೇ ಬಾರಿಗೆ ವಿಧಾಸನಭೆ ಪ್ರವೇಶಿಸಿದವರು. ಪ್ರಸ್ತುತ, ಬೃಹತ್ ಕೈಗಾರಿಕೆ ಸಚಿವರು.

ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿಯ ಶಿಗ್ಗಾಂವ್ ಕ್ಷೇತ್ರದ ಶಾಸಕ, ಹಾಲಿ ಜಲಸಂನ್ಮೂಲ ಸಚಿವ, ಮಾಜಿ ಮುಖ್ಯಮಂತ್ರಿ ಎಸ್ಆರ್ ಬೊಮ್ಮಾಯಿ ಅವರ ಪುತ್ರ,

ಉಮೇಶ್ ವಿಶ್ವನಾಥ ಕತ್ತಿ
ಬೆಳಗಾವಿಯ ಹುಕ್ಕೇರಿ ಕ್ಷೇತ್ರ, ಹಾಲಿ ಕೃಷಿ ಸಚಿವ

ಎಂಪಿ ರೇಣುಕಾಚಾರ್ಯ
ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ. ಅಬಕಾರಿ ಸಚಿವ

ಮಾಡಾಳ್ ಕೆ ವಿರೂಪಾಕ್ಷಪ್ಪ
ದಾವಣಗೆರೆಯ ಚನ್ನಗಿರಿ ವಿಧಾನಸಭೆ ಕ್ಷೇತ್ರದ ಶಾಸಕ.

ಸಿಸಿ ಪಾಟೀಲ
ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಶಾಸಕ, ಮಾಜಿ ಸಚಿವ

ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪ
ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪ
ಗದಗ ವಿಧಾನಸಭೆ ಕ್ಷೇತ್ರದ ಶಾಸಕ

ರಾಮಣ್ಣ ಸೋಬೆಪ್ಪ ಕಾಳಪ್ಪ ಲಮಾಣಿ
ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಶಾಸಕ, ಮಾಜಿ ಸಚಿವ

ಎಸ್ ವಿ ರಾಮಚಂದ್ರ
ದಾವಣಗೆರೆಯ ಜಗಳೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ (2011) ಆರಿಸಿಬಂದವರು. ಹಟ್ಟಿ ಚಿನ್ನದ ಗಣಿಯ ಮಾಜಿ ಅಧ್ಯಕ್ಷ

ಚಂದ್ರಕಾಂತ್ ಗುರಪ್ಪ ಬೆಲ್ಲದ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ












Click it and Unblock the Notifications