ಕೋಟಿ ಕೋಟಿ ಚಿನ್ನ ಕದ್ದು ಸಿಕ್ಕಿಬಿದ್ದ ಕೊಲ್ಲಿ ರಾಯಭಾರಿ

UAE diplomat caught smuggling 37 kg gold at New Delhi airport
ನವದೆಹಲಿ, ಮಾ.14: ಆತ ಕೊಲ್ಲಿ ಸಂಯುಕ್ತ ಸಂಸ್ಥಾನದಲ್ಲಿ ಭಾರತದ ರಾಯಭಾರ ಕಚೇರಿಯ ಉನ್ನತಾಧಿಕಾರಿ. ಆದರೆ ಮಂಗಳವಾರ ಸಿಂಗಾಪುರ ವಿಮಾನದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕಂದಾಯ ಬೇಹುಗಾರಿಗೆ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಾಕಪ್ಪಾ ಅಂದರೆ ಈ ಉನ್ನತಾಧಿಕಾರಿ ವೃತ್ತಿ ಗೌರವ ಕಾಪಾಡದೆ ತನ್ನೊಂದಿಗೆ ಅಕ್ರಮವಾಗಿ 37 ಕೆಜಿ ಚಿನ್ನವನ್ನು ತಂದಿದ್ದರು. ಖಚಿತ ಸುಳಿವಿನ ಮೇರೆಗೆ ಬೇಹು ಅಧಿಕಾರಿಗಳು ಆತನನ್ನು ತಡೆದು, ತಪಾಸಣೆಗೆ ಮುಂದಾದಾಗ 'ತಾನು ರಾಯಭಾರ ಕಚೇರಿಯ ಉನ್ನತಾಧಿಕಾರಿಯೆಂದೂ, ತನ್ನನ್ನು ಹಾಗೆಲ್ಲ ತಡವಿಕೊಳ್ಳುವಂತಿಲ್ಲ' ಎಂದು ರಾಜತಾಂತ್ರಿಕ ಪ್ರತಿರೋಧವನ್ನು ಒಡ್ಡಿದ್ದಾನೆ. ಆದರೆ ಅಧಿಕಾರಿಗಳು ಜಗ್ಗಿಲ್ಲ.

ಆತನು ತಂದಿದ್ದ ಕಳ್ಳಮಾಲಿನ ಮೌಲ್ಯ ಬರೋಬ್ಬರಿ 11 ಕೋಟಿ ರೂ. ಹಾಗಾಗಿ ಕಂದಾಯಾಧಿಕಾರಿಗಳು ಯಾಮಾರುವಂತಿರಲಿಲ್ಲ. ಆತ ಸೂಟ್ ಕೇಸಿನಲ್ಲಿ 37 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದ. ಅಗತ್ಯ ತಪಾಸಣಾ ಕ್ರಮಗಳ ನಂತರ ಅಧಿಕಾರಿಗಳು ಆರೋಪಿಯನ್ನು ಬಿಟ್ಟುಕಳಿಸಿದ್ದಾರೆ. ಹೆಚ್ಚಿನ ಮಾಹಿತಿ/ವಿಚಾರಣೆಗಾಗಿ ಕಂದಾಯಾಧಿಕಾರಿಗಳು ಪ್ರಕರಣವನ್ನು ವಿದೇಶಾಂಗ ವ್ಯವಹಾರ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.

ಆದರೆ ಆರೋಪಿ ಜತೆ ಪ್ರಯಾಣಿಸುತ್ತಿದ್ದ ದೆಹಲಿ ಉದ್ಯಮಿಯನ್ನು ಇದೇ ವೇಳೆ ಬಂಧಿಸಿದ್ದಾರೆ. ಆತ ಪ್ರಕರಣದಲ್ಲಿ ರಾಯಭಾರ ಕಚೇರಿ ಉನ್ನತಾಧಿಕಾರಿಗೆ ನೆರವು ನೀಡಿದ್ದಾನೆ ಎಂದು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಿಯೆನ್ನಾ ಒಪ್ಪಂದದಂತೆ ಯಾವುದೇ ರಾಜತಾಂತ್ರಿಕ ಅಧಿಕಾರಿ ಅಪರಾಧ ಮತ್ತು ನಾಗರಿಕ ಆಡಳಿತ ವಿಚಾರಣೆಯ ಪರಿಧಿಗೆ ಬರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+