ನರೇಂದ್ರ ಮೋದಿ ಸುಮ್ಮನಿದ್ದರೆ ಸರಿ, ಇಲ್ಲಾಂದ್ರೆ ಕಥೆನೇ ಬೇರೆ

ನರೇಂದ್ರ ಮೋದಿ ಈ ಕೂಡಲೇ ಸೋನಿಯಾ ಗಾಂಧಿ ಕುಟುಂಬವನ್ನು ಟೀಕಿಸುವುದನ್ನು ನಿಲ್ಲಿಸದಿದ್ದಲ್ಲಿ ಕಥೆಯೇ ಬೇರೆ ಆಗಲಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪೂಜರಿ, ಅಟಲ್ ಬಿಹಾರಿ ವಾಜಪೇಯಿಗೆ ಇರುವ ಸ್ವಲ್ಪ ವರ್ಚಸ್ಸು ನರೇಂದ್ರ ಮೋದಿಗೆ ಇಲ್ಲ. ಮೂರು ಅವಧಿಗೆ ಮುಖ್ಯಮಂತ್ರಿಯಾದರೆ ಅವರೇನೂ ಇತಿಹಾಸ ಪುರುಷರಲ್ಲ. ಮೋದಿ ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್ ಗುಜರಾತ್ ರಾಜ್ಯವನ್ನು ಅಭಿವೃದ್ದಿಗೊಳಿಸಿತ್ತು.
ಗಾಂಧಿ ಕುಟುಂಬದವರು ಈ ದೇಶಕ್ಕೆ ಮಾಡಿದ ತ್ಯಾಗದ ಬಗ್ಗೆ ಮೋದಿಗೆ ಅರಿವಿದೆಯಾ? ಗೋಧ್ರಾ ಹತ್ಯಾಕಾಂಡವನ್ನು ಇನ್ನೂ ಜನ ಮರೆತಿಲ್ಲ ಎಂದು ಜನಾರ್ಧನ ಪೂಜಾರಿ, ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಮುಂದಾದರೂ ಸೋನಿಯಾ ಗಾಂಧಿ ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದನ್ನು ನಿಲ್ಲಿಸಿದರೆ ಬಚಾವ್, ಇಲ್ಲಾಂದ್ರೆ ಮೋದಿ ವೈಯಕ್ತಿಕ ರಹಸ್ಯವನ್ನು ದಾಖಲೆ ಸಮೇತ ಬಹಿರಂಗ ಪಡಿಸುತ್ತೇನೆ ಎಂದು ಪೂಜಾರಿ ಎಚ್ಚರಿಸಿದ್ದಾರೆ.
ಮೋದಿಗೆ ಪ್ರಧಾನಿಯಾಗುವ ಯಾವ ಅರ್ಹತೆ ಇದೆ? ಮೊದಲು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕನಸು ಕಾಣುವುದನ್ನು ನಿಲ್ಲಿಸಲಿ. ಕೋಮುವಾದಿ ಬಿಜೆಪಿಗೆ ಮತ ಹಾಕಲು ಜನರಿಗೆ ಮಂಡೆ ಪೆಟ್ಟಾಗಿಲ್ಲ ಎಂದು ಪೂಜಾರಿ ಟೀಕಿಸಿದ್ದಾರೆ.
ಈ ಬಾರಿ ಕಾಂಗ್ರೆಸ್ ಪಕ್ಷಕ್ಕಿರುವ ಜನ ಬೆಂಬಲ ನೋಡಿ ಬಿಜೆಪಿ ಹೆದರಿದೆ. ಬಿಜೆಪಿ ದುರಾಡಳಿತದಿಂದ ಜನ ಕಂಗಾಲಾಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನಾಮ ನಿಶಾನೆ ಇಲ್ಲದೆ ನಿರ್ನಾಮವಾಗುವುದು ನಿಶ್ಚಿತ.. ನಿಶ್ಚಿತ..ನಿಶ್ಚಿತ.. ಎಂದು ಮಾಧ್ಯಮದವರಿಗೆ ಪೋದುಪರ್ಪೆ (ಹೋಗ್ಬಿಟ್ಟು ಬರ್ತೀನಿ) ಎಂದು ಹೇಳಿ ಸುದ್ದಿಗೋಷ್ಠಿಗೆ ಜನಾರ್ಧನ ಪೂಜಾರಿ ಮಂಗಳ ಹಾಡಿದರು.












Click it and Unblock the Notifications