ಮಂತ್ರಿಪಟ್ಟ ಬಿಟ್ಟ ಯೋಗಿಗೆ ಜಾಮೀನು ಯೋಗವಿಲ್ಲ

Relief to Minister CP Yogeshwar
ಬೆಂಗಳೂರು, ಮಾ.1: ಬಿಜೆಪಿಯಲ್ಲಿದ್ದು ಪ್ರಯೋಜನವಿಲ್ಲ ಎಂದು ಕೈ ನಾಯಕರ ಮನೆ ತಟ್ಟುತ್ತಿರುವ ಚನ್ನಪಟ್ಟಣದ ಪುತ್ಥಳಿ ಮಾಜಿ ಅರಣ್ಯ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಂತ್ರಿ ಪದವಿ ತೊರೆದ ಟೈಂ ಸರಿ ಇರಲಿಲ್ಲ ಎನಿಸುತ್ತದೆ. ಮೆಗಾಸಿಟಿ ಹಗರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಯೋಗಿಗೆ ಈಗ ಹೈಕೋರ್ಟ್ ಉಳಿದ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿದೆ.

ಮಾಜಿ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಅವರ ವಿರುದ್ಧದ ಅಧೀನ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಮಂಗಳವಾರ (ನ.20) ಹೈಕೋರ್ಟ್ ಆದೇಶಿಸಿತ್ತು. ಆದರೆ, ಶುಕ್ರವಾರ(ಮಾ.1) ಉಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೇಶ್ವರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ಮೆಗಾಸಿಟಿಯ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿ ಯೋಗೀಶ್ವರ್ ವಿರುದ್ಧ ಪ್ರಕರಣ ದಾಖಲಾಗಿದೆ.ಅದಕ್ಕೆ ಸಂಬಂಧಿಸಿದಂತೆ ಯೋಗೀಶ್ವರ್ ವಿರುದ್ಧ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಮೂರು ಪ್ರಕರಣದಲ್ಲಿ ಚಾರ್ಚ್ ಶೀಟ್ ರದ್ದಾಗಿದೆ.

ಯೋಗೀಶ್ವರ್ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೂರ್ತಿ ನಾಗಮೋಹನ ದಾಸ್ ಅವರ ಪೀಠ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ. ಮೆಗಾಸಿಟಿ ಸಂಬಂಧಿಸಿದಂತೆ ಕೆಲವೊಂದು ಕಂಪನಿಗಳು ಯೋಗೀಶ್ವರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದ್ದರು. ಈ ಬಗ್ಗೆ ತನಿಖಾಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ಪೀಠ ರದ್ದುಗೊಳಿಸಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಒಂದು ದೂರನ್ನು ಆರ್ಥಿಕ ವ್ಯವಹಾರದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಒಂದೇ ಪ್ರಕರಣದ ಎರಡು ಬಾರಿ ದಾಖಲಾಗಿರುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ ಎನ್ನುವ ಆಧಾರದ ಮೇಲೆ ಅಧೀನ ನ್ಯಾಯಾಲಯದಲ್ಲಿ ಗಂಭೀರ ಅಪರಾಧ ತನಿಖಾ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ರದ್ದು ಮಾಡಲು ಪೀಠ ಆದೇಶ ಹೊಡಿಸಿದೆ.

ಮೆಗಾಸಿಟಿ ಯೋಜನೆಯ ಅವ್ಯವಹಾರದಲ್ಲಿ ಯೋಗೀಶ್ವರ್ ವಿರುದ್ಧ ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಗಂಭೀರ ಅಪರಾಧಗಳ ತನಿಖಾ ಅಧಿಕಾರಿಗಳು ಹಾಗೂ ರಿಜಿಸ್ಟರ್ಡ್ ಕಂಪನಿಗಳು ಒಂದೇ ರೀತಿಯ ಪ್ರಕರಣವನ್ನು ಅಧೀನ ನ್ಯಾಯಾಲಯದಲ್ಲಿ ದಾಖಲಿಸಿದ್ದರು.|

ಅಧೀನ ನ್ಯಾಯಾಲಯದಲ್ಲಿ ಒಟ್ಟು 19 ಪ್ರಕರಣಗಳು ಯೋಗೀಶ್ವರ್ ವಿರುದ್ಧ ದಾಖಲಾಗಿದ್ದವು. SFIO ವರದಿ (Serious Fraud Investigation Office) ಆಧಾರದ ಮೇಲೆ ಒಟ್ಟು 6 ಖಾಸಗಿ ಪ್ರಕರಣ ಹಾಗೂ 8 ಕ್ರಿಮಿನಲ್ ಪ್ರಕರಣಗಳು 2009ರಲ್ಲಿ ದಾಖಲಾಗಿತ್ತು.

ಮೆಗಾ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಯೋಜನೆಯಲ್ಲಿ ವಿಶ್ವದರ್ಜೆಯ ವಜ್ರಗಿರಿ ಟೌನ್‌ಶಿಪ್ ಅಡಿಯಲ್ಲಿ ಬೆಂಗಳೂರು-ಮೈಸೂರು ರಸ್ತೆಯ ಬಿಡದಿ ಬಳಿ 500 ಎಕರೆ ಭೂಮಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ 1995-2006ರ ವೇಳೆ ಸುಮಾರು 9 ಸಾವಿರ ಮಂದಿಯಿಂದ 64 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ.

ಇದರಲ್ಲಿ ಕಂಪನಿಯ 3.60 ಕೋಟಿ ರೂ.ಗಳನ್ನು ಯೋಗೀಶ್ವರ್ ಲಪಟಾಯಿಸಿದ್ದಾರೆ ಎಂಬ ಆರೋಪವಿದೆ. ಈ ವಂಚನೆ ಪ್ರಕರಣದಲ್ಲಿ ಸಿಐಡಿ 2010ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು ಇದಲ್ಲದೆ, ಬಿಡದಿ ಸಮೀಪದ ಅರ್ಚಕರಹಳ್ಳಿಯಲ್ಲಿ ವಜ್ರಗಿರಿ ಟೌನ್ ಶಿಪ್ ಗಾಗಿ ರೈತರ ಫಲವತ್ತಾದ ಬೆಲೆಬಾಳುವ ಖರೀದಿಸಿ, ಪರಿಹಾರ ನೀಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+