ವೈಫಲ್ಯ ಭೀತಿ, ತಾಯಿಯನ್ನೇ ಕೊಂದ ಮಗ

ಪಶ್ಚಿಮ ಬಂಗಾಳದ ಉತ್ತರ ಭಾಗದ 24 paragana ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮೌಸುಮಿ ಖೈಲರಿ (45) ಎಂದು ಗುರುತಿಸಲಾಗಿದೆ. ಈಕೆಯ ಪುತ್ರ 19 ವರ್ಷದ ಸೌರವ್ ಖೈಲರಿ ಕೊಲೆ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ.
ಪ್ರೌಢಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಪೂರ್ವಭಾವಿ ಟೆಸ್ಟ್‌ನಲ್ಲಿ ಫೇಲ್ ಆಗಿ, ಮುಖ್ಯ ಪರೀಕ್ಷೆಗೆ ಹಾಜರಾಗುವ ಅರ್ಹತೆ ಕಳೆದುಕೊಂಡಿದ್ದಾನೆ. ಈತನ ಸ್ನೇಹಿತರು ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಶಾಲೆಯಿಂದ ಪಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿ ಸುಳ್ಳು ಹೇಳಿದ್ದರಿಂದ ಆತಂಕಕ್ಕೆ ಒಳಗಾದ ಸೌರವ್ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ದೊರೆಯದೆ ಇದ್ದರೆ ಸತ್ಯ ಎಲ್ಲಿ ಗೊತ್ತಾಗುತ್ತದೆ ಎಂದು ಹೆದರಿ ತಾಯಿಯನ್ನೇ ಕೊಲ್ಲುವ ಸಂಚು ರೂಪಿಸಿದ್ದ.
ರೈಲ್ವೆ ಉದ್ಯೋಗಿಯಾದ ತಂದೆ ಕೆಲಸಕ್ಕೆ ಹೋಗಿದ್ದಾಗ ತಾಯಿ ಮನೆಯಲ್ಲಿ ಒಬ್ಬರೆ ಇದ್ದ ಸಮಯ ಸಾಧಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಸ್ಕಿಪಿಂಗ್ ವ್ಯಾಯಾಮಕ್ಕೆ ಬಳಸುತ್ತಿದ್ದ ಹಗ್ಗದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಆಕ್ರಮಣ ನಡೆದ ಸಂದರ್ಭದಲ್ಲಿ ಮೌಸುಮಿ ಫ್ಲಾಟ್‌ನ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ತಕ್ಷಣ ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೆಲ್ಗಾರಿಯಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಹೊಡೆದು ನೋಡಿದಾಗ ಮೌಸಮಿ ಕೊಲೆಯಾಗಿರುವುದು ಕಂಡು ಬಂದಿದೆ. ಶಂಕೆಗೊಂಡ ಪೊಲೀಸರು ಸೌರವ್‌ನನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಸತ್ಯಾಂಶ ಬಯಲಿಗೆ ಬಂದಿದೆ.
ಘಟನೆ ನಡೆದಾಗ ಸೌರವ್ ಅವರ ತಂದೆ ಕಚೇರಿಯಲ್ಲಿದ್ದರು. ವಿಷಯ ತಿಳಿದು ಮನೆಗೆ ಓಡಿ ಬಂದರು, ಘಟನೆ ಬಗ್ಗೆ ತಿಳಿದು ಶಾಕ್ ಗೆ ಒಳಗಾಗಿದ್ದಾರೆ.ಆರೋಪಿ ಸೌರವ್ ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ತನಿಖಾಧಿಕಾರಿ ಹೇಳಿದ್ದಾರೆ.












Click it and Unblock the Notifications