ರಾಜುಗೌಡಗೆ ದೇವರು ಬುದ್ಧಿ ಕೊಡಲಿ : ಅಶೋಕ್

ಚುನಾವಣೆ ಪ್ರಚಾರದ ನಿಮಿತ್ತ ಸೇಡಂಗೆ ತೆರಳುವ ಮಾರ್ಗ ಮಧ್ಯೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿಯ ಆಸ್ತಿ ಕಾರ್ಯಕರ್ತರು, ಲೀಡರ್ಸ್ ಅಲ್ಲ. ಇದನ್ನು ನಂಬಿ ನಾವು ಚುನಾವಣೆಗೆ ಹೋಗುತ್ತೇವೆ. ಯಾರು ಪಕ್ಷ ಬಿಟ್ಟು ಹೋಗಿದ್ದಾರೋ ಅವರಿಗೆಲ್ಲರಿಗೂ ಮುಂದೆ ಪಶ್ಚಾತ್ತಾಪ ಪಡುವ ಸಂದರ್ಭ ಬರುತ್ತೆ ಎಂದರು.
ಬಿಜೆಪಿಯಲ್ಲಿ ಯಾರು-ಯಾರು ಸಮಸ್ಯೆ ಉಂಟು ಮಾಡುತ್ತಿದ್ದಾರೋ ಅವರೆಲ್ಲರೂ ಪಕ್ಷ ಬಿಟ್ಟು ಹೋಗಿದ್ದಾರೆ. ಹೀಗಾಗಿ ಪಕ್ಷ ಒಗ್ಗಟ್ಟಾಗಿ ಇದೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ತೋರಿಸುತ್ತೇವೆ. ಇನ್ನು ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ, ಪಕ್ಷದಲ್ಲೇ ಉಳಿಯುವ ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಮೊನ್ನೆ ಒಳ್ಳೆ ಬಜೆಟ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮಗೆ ಗೆಲುವು ಕಟ್ಟಿಟ್ಟ ಬುತ್ತಿ. ಯಾರು ಪಕ್ಷ ಬಿಟ್ಟು ಹೋಗಿದ್ದಾರೋ ಅವರೆಲ್ಲರೂ ಪರಿತಪಿಸುತ್ತಾ, ರಾಜೀನಾಮೆ ವಾಪಸ್ಸು ಪಡೆಯುವ ಹಂತದಲ್ಲಿ ಇದ್ದಾರೆ. ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಹಾಗೂ ಇನ್ನಿತರೆ ಪಕ್ಷಗಳು ಒಡೆದ ಮನೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿ ಒಗ್ಗಟ್ಟಾಗಿದೆ. ನಮ್ಮಲ್ಲಿ ಇದ್ದ ಎಲ್ಲಾ ಸಮಸ್ಯೆಗಳು ಈಗ ಪರಿಹಾರವಾಗಿವೆ. ಆದರೆ, ಕಾಂಗ್ರೆಸ್ ಪಕ್ಷ ನಾಯಕತ್ವದ ಗೊಂದಲದಲ್ಲಿ ಮುಳುಗಿದೆ. ಅದರಿಂದ ಅವರು ಆಚೆ ಬರುವ ಸೂಚನೆಯೂ ಕಾಣುತ್ತಿಲ್ಲ. ಈ ಬಾರಿ ಗೆಲವು ನಮ್ಮದೆ, ಗೆದ್ದು ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಅಂತ ನಾವು ಈಗಾಗಲೇ ಘೋಷಣೆ ಮಾಡಿದ್ದರಿಂದ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ನಮಗೇ ಸಿಗುವುದು ಖಡಾಖಂಡಿತ. ಯಾಕೆಂದರೆ ಆ ತರಹದ ನಾಯಕತ್ವ ಬೇರೆ ಯಾವ ಪಕ್ಷದಲ್ಲೂ ಇಲ್ಲ ಎಂದು ಅವರು ಆತ್ಮವಿಶ್ವಾಸದಿಂದ ನುಡಿದರು.












Click it and Unblock the Notifications