ಪಾಕೆಟ್ ಮನಿಯನ್ನು ಕಟ್ ಮಾಡಿದ ಪಳನಿಯಪ್ಪ
ಸೂಪರಾಗಿರೋ ಬೈಕ್ ಕೊಂಡ್ಕೊಂಡು, ಬಾಯಿಗೆ ಒಂದು ಕಿಂಗ್ ಸಿಕ್ಕಿಸಿಕೊಂಡು, ದುಬಾರಿಯಾದ ಸ್ಮಾರ್ಟ್ ಫೋನ್ ಕಿಸೆಯಲ್ಲಿ ಮಡಗಿಕೊಂಡು, ಹಿಂಬದಿಗೆ ಸುಂದರಿಯೊಬ್ಬಳನ್ನು ಕೂಡಿಸಿಕೊಂಡು, ಎಸಿ ಹೋಟೆಲಿಗೆ ಕರೆದುಕೊಂಡು ಹೋಗಿ, ಒಂದು ಸಿನೆಮಾ ತೋರಿಸಿಕೊಂಡು ಸಖತ್ ಮಜಾ ಉಡಾಯಿಸಬೇಕು... ಸಾಧ್ಯವಾದರೆ ಪ್ರಪೋಸ್ ಮಾಡಬೇಕು ಎಂದು ಕನಸು ಕಾಣುತ್ತಿರುವ ಹುಡುಗರೆ ಸ್ವಲ್ಪ ತಾಳಿ.
ಹುಡುಗಿಯರ ಜೊತೆ ಲಲ್ಲೆ ಹೊಡೆಯುವ ಕನಸು ಕಾಣುವುದು ಒತ್ತಟ್ಟಿಗಿರಲಿ, "ಸಾರಿ ಗರ್ಲ್ಸ್, ನಾವಿನ್ನು ಸ್ಮೋಕಿಂಗ್ ಬಿಡ್ತೀವಿ, ಬೈಕ್ ಕೊಳ್ಳೋದನ್ನು ಡ್ರಾಪ್ ಮಾಡ್ತೀವಿ. ಅಷ್ಟೇ ಅಲ್ಲ, ಎಸಿ ಹೋಟೆಲಿಗೆ ಹುಡುಗಿಯರನ್ನು ಕರೆದುಕೊಂಡು ಹೋಗುವುದನ್ನೂ ಬಿಟ್ಟುಬಿಡ್ತೀವಿ" ಎಂದು ಪಡ್ಡೆಗಳು ಶಪಥ ಮಾಡುವಂತೆ ನಮ್ಮ ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ ಅವರು ಮಾಡಿದ್ದಾರೆ.
ಶುಕ್ರವಾರ ಮಂಡಿಸಲಾದ 2013-14ನೇ ಸಾಲಿನ ಬಜೆಟ್ಟಿನಲ್ಲಿ ಸಿಗರೇಟ್ ಮೇಲೆ ಶೇ.18ರಷ್ಟು ಅಬಕಾರಿ ತೆರಿಗೆ ಹೇರಿದ್ದಾರೆ, 2 ಸಾವಿರ ರು.ಗಿಂತ ಹೆಚ್ಚಿರುವ ಮೊಬೈಲ್ ಮೇಲೆ ಶೇ.6ರಷ್ಟು ತೆರಿಗೆ ಹೆಚ್ಚು ಮಾಡಿದ್ದಾರೆ. ಅಲ್ಲದೆ, ಹವಾನಿಯಂತ್ರಿತ ಹೋಟೆಲಿನ ಸೇವಾ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಅಲ್ಲಿಗೆ, ಸಿಗರೇಟು, ಮೊಬೈಲ್, ಬೈಕ್ ಹುಚ್ಚಿರುವ ಹುಡುಗರ ಕೋಪವನ್ನು ಪಿಸಿ ಕಟ್ಟಿಕೊಂಡಿದ್ದಾರೆ ಮತ್ತು ನೇರವಾಗಿ ಅವರ ಜೇಬಿಗೆ ಕೈ ಹಾಕಿದ್ದಾರೆ.
ಈ ಕುರಿತಂತೆ ಟ್ವಿಟ್ಟರ್ ವೇದಿಕೆಯಲ್ಲಿ ಸಖತ್ ತಮಾಷೆಯ, ಕೋಪದ, ಕುಹಕದ, ವ್ಯಂಗ್ಯದ ಟ್ವೀಟ್‌ಗಳು ಹರಿದಾಡುತ್ತಿವೆ. ಅವುಗಳಲ್ಲಿ ಕೆಲವೊಂದು ಹೀಗಿವೆ. ಓದಿಯಾದ ಮೇಲೆ ಸಾಧ್ಯವಾದರೆ, ಸಿಗರೇಟ್ ಸೇವನೆ ಬಿಟ್ಟುಬಿಡಿ.

ಈಗ ಸಿಗರೇಟೇ ಒತ್ತಡ ಹೇರುತ್ತಿದೆ!
"ಮೊದಲು ಸಿಗರೇಟ್ ಒತ್ತಡವನ್ನು ಕೊಲ್ಲುತ್ತಿತ್ತು. ಈಗ ಸಿಗರೇಟೇ ಒತ್ತಡ ಹೇರುತ್ತಿದೆ. ವಿಡಂಬನೆ ಅಂದ್ರೆ ಇದೇ ಅಲ್ಲವೆ? ಸ್ಮೋಕಿಂಗ್ ಹೆಲ್ತಿಗೆ ಮಾತ್ರವಲ್ಲ, ವೆಲ್ತಿಗೂ ಹಾನಿಕರ, ಎಚ್ಚರ!"

ಕಿಂಗ್ ಫಿಷರ್ ಕುಡಿಯುವುದೇ ಒಳ್ಳೆಯದು
"ಎಸಿ ಹೋಟೆಲಿಗೆ ಹೋಗಿದ್ದೂ ಕುಡಿಯದಿರುವುದರಿಂದ ಯಾವುದೂ ಪ್ರಯೋಜನವಾಗುವುದಿಲ್ಲ. ಕನಿಷ್ಠಪಕ್ಷ ಕಿಂಗ್ ಫಿಷರ್ ಕುಡಿಯುವುದೇ ಒಳ್ಳೆಯದು. ಈಗಲಾದರೂ ಪ್ರಾರಂಭಿಸಿ!"

ನಾವು ಸಿಗರೇಟ್ ಸ್ಮೋಕಿಂಗ್ ಬಿಡುತ್ತೇವೆ
"ಬ್ಯೂಟೀಸ್, ನಾವು ಸಿಗರೇಟ್ ಸ್ಮೋಕಿಂಗ್ ಬಿಡುತ್ತೇವೆ. ಅಲ್ಲದೆ, ಹೋಟೆಲಿಗೆ ಮತ್ತು ಸಿನೆಮಾಗೆ ಕರೆದುಕೊಂಡು ಹೋಗುವುದನ್ನೂ ನಿಲ್ಲಿಸುತ್ತೇವೆ. ದರ ಏರಿಕೆಯಾಗಿದೆ ಅಲ್ವಾ?"

ಮಚ್ಚಾ, ಚುಟ್ಟಾ ಸೇದಿಕೊಂಡು ಬರೋಣ
"ಸಿಗರೇಟು ರೇಟ್ ಜಾಸ್ತಿ ಮಾಡಿಬಿಟ್ರು ಕಣ್ಲಾ! ಟೆನ್ಶನ್ ಜಾಸ್ತಿ ಆಗ್ತಾ ಇದೆ. ಮಚ್ಚಾ ನಡಿಯಲೋ, ಚುಟ್ಟಾ ಸೇದಿಕೊಂಡು ಬರೋಣ!"

ಎಲ್ಲಿಂದ ನಗಬೇಕು ಎಂಬುದೇ ತಿಳಿಯುತ್ತಿಲ್ಲ
"ನಿಜ ಹೇಳಬೇಕಂದ್ರೆ ನನಗೆ ಜೋಕ್ ಹೇಗೆ ಕತ್ತರಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೇಗೆ ಮತ್ತು ಎಲ್ಲಿಂದ ನಗಬೇಕು ಎಂಬುದೂ ತಿಳಿಯುತ್ತಿಲ್ಲ!"

ಟೆನ್ಶನ್ ಕಡಿಮೆ ಮಾಡಿಕೊಂಡು ಬರೋಣ
"ಇಷ್ಟೊತ್ತಿನ ತನಕ ಒತ್ತಡ ತಡೆದುಕೊಂಡು ಕುಳಿತಿದ್ದ ಸ್ನೇಹಿತರೆ ನಡೆಯಿರಿ ಎಲ್ಲರೂ ಹೋಗಿ, ಟಾಯ್ಲೆಟ್ಟಿಗೆ ಹೋಗಿ ಟೆನ್ಶನ್ ಕಡಿಮೆ ಮಾಡಿಕೊಂಡು ಬರೋಣ. (ಆದಾಯ ತೆರಿಗೆ ಮಿತಿಯನ್ನು ಅಲ್ಲಾಡಿಸದಿರುವ ಬಗ್ಗೆ ಪ್ರತಿಕ್ರಿಯೆ)

ನನ್ನ ಹುಡುಗಿಯನ್ನಾಗಿ ಮಾಡು ದೇವರೆ
"ಕನಿಷ್ಠ ಮುಂದಿನ ಜನ್ಮದಲ್ಲಾದರೂ ನನ್ನ ಹುಡುಗಿಯನ್ನಾಗಿ ಮಾಡು ದೇವರೆ... ಭಾರತದಲ್ಲಿ ಮಹಿಳೆಯಾಗಿ ಇರುವುದರಿಂದಲೇ ಹೆಚ್ಚು ಪ್ರಯೋಜನ. (ಮಹಿಳೆಯರಿಗೆ ನೀಡಲಾಗಿರುವ ಹಲವಾರು ಅನುಕೂಲಗಳಿಗೆ ಪ್ರತಿಯಾಗಿ ಪ್ರತಿಕ್ರಿಯೆ)"

ಸಿಗರೇಟ್ ಸೇವನೆ ಬಜೆಟ್ಟಿಗೆ ಹಾನಿಕರ
"ಸಿಗರೇಟ್ ತುಟ್ಟಿಯಾಗಿರುವುದರಿಂದ ಸಿನೆಮಾ ಮಂದಿರಗಳಲ್ಲಿ, "ಸಿಗರೇಟ್ ಸೇವನೆ ಆರೋಗ್ಯಕ್ಕೆ ಮತ್ತು ಬಜೆಟ್ಟಿಗೆ ಹಾನಿಕರ" ಎಂಬ ಸಂದೇಶವನ್ನು ಬಿತ್ತರಿಸಬೇಕು!

ಇಂಡಿಯಾ ಗೇಟ್ ಮುಂದೆ ಪ್ರತಿಭಟನೆ ಮಾಡಿ
"ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರತಿಭಟಿಸಿದ ಸಿಗರೇಟ್ ಸ್ಮೋಕರ್‌ಗಳು ಈಗ, ಸಿಗರೇಟ್ ಬೆಲೆ ಕಡಿಮೆ ಮಾಡಬೇಕೆಂದು ಇಂಡಿಯಾ ಗೇಟ್ ಮುಂದೆ ಪ್ರತಿಭಟನೆ ಮಾಡಬೇಕು."

1,900 ರು.ಗೆ ಸ್ಮಾರ್ಟ್ ಫೋನ್
"ಕಪಿಲ್ ಸಿಬಲ್ 1,900 ರು.ಗೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದ್ದಾರೆ!"

ಚಿದಂಬರಂ ಅವರೇ ಸ್ವತಃ ತಂದೆ-ತಾಯಿ
"ಹೊರಗಡೆ ತಿನ್ನಬೇಡಿ, ಸಿಗರೇಟ್ ಸೇವಿಸಬೇಡಿ, ಸ್ಮಾರ್ಟ್ ಫೋನ್ ಬಳಸಬೇಡಿ. ಇದನ್ನೆಲ್ಲ ತಂದೆ-ತಾಯಿ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ, ಫೈನಾನ್ಸ್ ಮಿನಿಸ್ಟರ್ ಪಿ ಚಿದಂಬರಂ ಅವರೇ ಸ್ವತಃ ತಂದೆ-ತಾಯಿಯ ಸ್ಥಾನದಲ್ಲಿ ನಿಂತಿದ್ದಾರೆ. ಏರಿದೆ ತೆರಿಗೆಗೆ ಶಭಾಸ್‌ಗಿರಿ ನೀಡಿರಿ."
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications