Get Updates
Get notified of breaking news, exclusive insights, and must-see stories!

ಅಷ್ಟಮಂಗಲ ಪ್ರಶ್ನೆ: ಉಡುಪಿ ಕ್ಷೇತ್ರಕ್ಕೆ ಕಾದಿದೆ ವಿಪತ್ತು

ಉಡುಪಿ, ಫೆ 27: ಶ್ರೀಕೃಷ್ಣನ ನೆಲೆಬೀಡು ಉಡುಪಿ ಕ್ಷೇತ್ರಕ್ಕೆ ಕಂಟಕ ಕಾದಿದೆ ಎನ್ನುವ ಸುದ್ದಿಯೊಂದು ಅಷ್ಟಮಂಗಲ ಪ್ರಶ್ನೆಯ ವೇಳೆ ಹೊರಬಿದ್ದಿದೆ.

ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ನಡೆದು ಕೊಂಡು ಬರಬೇಕಾಗಿರುವ ಧಾರ್ಮಿಕ ಆಚರಣೆಯಲ್ಲಿ ಕಂಡು ಬರುತ್ತಿರುವ ಲೋಪ ದೋಷಗಳಿಂದಾಗಿ ಕ್ಷೇತ್ರಕ್ಕೆ ಏನಾದರೂ ವಿಪತ್ತು ತೋರಿಬರಲಿದೆ ಎನ್ನುವುದು ಪ್ರಶ್ನೆಯ ವೇಳೆ ಹೊರಬಿದ್ದ ಫಲಿತಾಂಶ.

ಅಷ್ಟಮಂಗಲ ಪ್ರಶ್ನೆಯ ವೇಳೆ ಕಂಡುಬಂದತೆ ಸೋಮವಾರ ಮೇ 13ರಂದು ಉಡುಪಿ ಕ್ಷೇತ್ರಕ್ಕೆ ಆಪತ್ತು ಕಾದಿದೆ. ಶತಮಾನದಿಂದ ನಡೆದುಕೊಂಡು ಬರುತ್ತಿರುವ ಪೂಜಾ ಕೈಂಕರ್ಯಗಳು ಸರಿಯಾಗಿ ನಡೆದುಕೊಂಡು ಬರದೇ ಇರುವುದರಿಂದ ಕ್ಷೇತ್ರದಲ್ಲಿ ಅಂದು ಏನಾದರೂ ಅವಗಢ ಸಂಭವಿಸಲಿದೆ.

ಕೇರಳದ ಪುದುವಾಳ್ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿರುವ 'ಅಷ್ಟಮಂಗಲ ಪ್ರಶ್ನೆ ಅಥವಾ ದೇವ ಪ್ರಶ್ನೆ ಧಾರ್ಮಿಕ ಪ್ರಕ್ರಿಯೆ" ಮಂಗಳವಾರ (ಫೆ 26) ರಥಬೀದಿ ಆವರಣದಲ್ಲಿರುವ ಮುಜರಾಯಿ ವ್ಯಾಪ್ತಿಗೆ ಸೇರಿರುವ ಮಹಾತೋಭಾರ ಶ್ರೀ ಮದನಂತೇಶ್ವರ ದೇವಾಲಯದಲ್ಲಿ ಸಂಪನ್ನಗೊಂಡಿದೆ.

ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಮಾಡಬೇಕಾಗಿರುವ ಹೋಮ, ಹವನಾದಿ ಧಾರ್ಮಿಕ ಕ್ರಿಯೆಗಳನ್ನು ದೇವಾಲಯದ ಸಂಬಂಧ ಪಟ್ಟವರಿಗೆ ಅಷ್ಟಮಂಗಲ ಪ್ರಶ್ನೆ ನೇತೃತ್ವ ವಹಿಸಿದ್ದವರು ವಿವರಿಸಿದ್ದಾರೆ.

ಪ್ರಶ್ನೆಯ ಸಂದರ್ಭದಲ್ಲಿ ಉಡುಪಿ ಕ್ಷೇತ್ರದಲ್ಲಿ ತೋರಿಬಂದ ಪ್ರಮುಖ ಲೋಪದೋಷಗಳು, ಅಷ್ಟಮಂಗಲ ಪ್ರಶ್ನೆ ನಡೆದ ಪ್ರಮುಖ ದೇವಾಲಯಗಳು, ಅಷ್ಟಮಂಗಲ ಪ್ರಶ್ನೆ ಅಂದರೇನು? ಮುಂದಿನ ಸ್ಲೈಡಿನಲ್ಲಿ..

ಉಡುಪಿ ಕ್ಷೇತ್ರದ ಪ್ರಮುಖ ಲೋಪದೋಷಗಳು

ಉಡುಪಿ ಕ್ಷೇತ್ರದ ಪ್ರಮುಖ ಲೋಪದೋಷಗಳು

> ಶ್ರೀಕೃಷ್ಣನ ಗರ್ಭಗುಡಿಯಲ್ಲಿರುವ ಇನ್ನೊಂದು ಶ್ರೀಕೃಷ್ಣನ ವಿಗ್ರಹಕ್ಕೆ (ಎಣ್ಣೆ ಕೃಷ್ಣ ಎಂದು ಕರೆಯಲ್ಪಡುತ್ತದೆ) ಸರಿಯಾಗಿ ಪೂಜಾ ವಿಧಿ ವಿಧಾನಗಳು ನಡೆಯದೇ ಇರುವುದು.

> ಮದನಂತೇಶ್ವರ ದೇವಾಲಯದಲ್ಲಿ ನಡೆಯುವ ರಂಗಪೂಜೆ ಸಂದರ್ಭದಲ್ಲಿಡುವ ನೈವೇದ್ಯದಲ್ಲಿನ ಲೋಪದೋಷ.

> ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರಿಗೆ ಅಭಿಷೇಕ ನಡೆಯುವುದು ಮಠದ ಆವರಣದಲ್ಲಿರುವ ಮಧ್ವ ಸರೋವರದ ತೀರ್ಥದಿಂದ. ಸರೋವರಕ್ಕೆ ಹೊಂದಿಕೊಂಡು ಅಷ್ಟ ಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಅಧೀನದ ವಾಣಿಜ್ಯ/ವಸತಿ ಸಂಕೀರ್ಣದ ಶೌಚಾಲಯವಿರುವುದು.

> ಮದನಂತೇಶ್ವರ ದೇವಾಲಯದಲ್ಲಿ ಶುಚಿತ್ವಕ್ಕೆ ಆದ್ಯತೆ ಇಲ್ಲದೇ ಇರುವುದು.

ಏನಿದು ಅಷ್ಟಮಂಗಲ ಪ್ರಶ್ನೆ?

ಏನಿದು ಅಷ್ಟಮಂಗಲ ಪ್ರಶ್ನೆ?

ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಕೇರಳದಲ್ಲಿ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯುತ್ತದೆ. ದೇವಾಲಯದ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತಿದೆಯೇ, ಅಲ್ಲಿರುವಂಥ ನೌಕರರು, ಅರ್ಚಕರು, ಆಡಳಿತ ಮೊಕ್ತೇಸರರ ನಡವಳಿ ಹೇಗಿದೆ, ದೇವ ಆಚರಣೆಗಳಲ್ಲಿ ಏನಾದರೂ ದೋಷಗಳಾಗಿದೆಯೇ? ದೋಷಗಳು ಕಂಡು ಬಂದರೆ ಅದಕ್ಕೆ ಸೂಕ್ತ ಪರಿಹಾರವೇನು? ಮುಂತಾದವುಗಳನ್ನು ಅರಿಯುವುದಕ್ಕೆ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯುತ್ತದೆ.

ಅಷ್ಟಮಂಗಲ ಪ್ರಶ್ನೆ ಹೇಗೆ ನಡೆಯುತ್ತದೆ?

ಅಷ್ಟಮಂಗಲ ಪ್ರಶ್ನೆ ಹೇಗೆ ನಡೆಯುತ್ತದೆ?

ಅಷ್ಟಮಂಗಲ ಪ್ರಶ್ನೆಗೆ ಪ್ರಮುಖವಾಗಿ ಎಂಟು ವಸ್ತುಗಳು ಬೇಕಾಗುತ್ತದೆ. ಬಿಳಿ ಬಟ್ಟೆ, ಕನ್ನಡಿ, ತೆಂಗಿನಕಾಯಿ, ಕುಂಕುಮ, ವೀಳ್ಯದೆಲೆ, ಭತ್ತ, ಅಕ್ಕಿ, ಹೂವಿನ ಅಕ್ಷತೆ. ಒಬ್ಬರಿಗಿಂತ ಹೆಚ್ಚು (ಹೆಚ್ಚಾಗಿ ಎಂಟು ಮಂದಿ) ದೈವಜ್ಞರು ಇರುತ್ತಾರೆ. ಪ್ರಶ್ನೆ ಪ್ರಕ್ರಿಯೆ ಮುಗಿಯಲು ಕಾಲ ಮಿತಿಯಿಲ್ಲ. ದೈವಜ್ಞರ ಬಳಿ ಪ್ರಶ್ನೆ ಕೇಳಲು ಬರುವ ಸಮಯದಿಂದ ಲೆಕ್ಕಚಾರ ಆರಂಭವಾಗುತ್ತದೆ. ಸಂಖ್ಯಾಶಾಸ್ತ್ರದಿಂದ ಮಾತ್ರವೇ ಅಲ್ಲದೇ, ಬಾಡಿ ಲಾಂಗ್ವೇಜ್ ಮುಖಾಂತರವೂ ಸಮಸ್ಯೆಗಳನ್ನು ಅರಿಯಲಾಗುತ್ತದೆ.

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಮುಜರಾಯಿ ವ್ಯಾಪ್ತಿಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಉದ್ಭವ ಲಿಂಗವಿರುವ ಮೂಲ ಕುದ್ರುವಿನ ಅಭಿವೃದ್ಧಿ ಕಾರ‍್ಯಗಳ ಹಿನ್ನಲೆಯಲ್ಲಿ ಅಷ್ಟಮಂಗಳ ಪ್ರಶ್ನೆ ಜನವರಿ 27. 2013ರಿಂದ ಆರಂಭವಾಗಿತ್ತು.

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಉಡುಪಿ ಕಲ್ಯಾಣಪುರದ ವೀರಭದ್ರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಜನವರಿ 24, 2013ರಲ್ಲಿ ನಡೆಯಿತು. ದೇವಸ್ಥಾನದ ವಿವಿಧ ವಿಭಾಗಗಳಲ್ಲಿ, ಭಕ್ತಾದಿಗಳಲ್ಲಿ ಅನಿಷ್ಠಗಳು ಸಂಭವಿಸಿದ ಕಾರಣ ಈ ಅಷ್ಟಮಂಗಳ ಪ್ರಶ್ನೆ ಪ್ರಕ್ರಿಯೆ ನಡೆದಿತ್ತು.

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಪಿಲಿಚಾಮುಂಡೇಶ್ವರಿ, ಮೈಸಂದಾಯ, ಪಂಜುರ್ಲಿ ಸಾನಿಧ್ಯವಿರುವ ಪಿಲಿಪಂಜರ ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನೆ ಪ್ರಕ್ರಿಯೆ ಫೆಬ್ರವರಿ 21, 2013 ರಂದು ನಡೆದಿತ್ತು.

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಾಮರಾಜ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಸೆಪ್ಟೆಂಬರ್‌ 4, 2012 ರಂದು ಅಷ್ಟಮಂಗಲ ನಡೆದಿತ್ತು.

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ಈ ಪ್ರಕ್ರಿಯೆ ನಡೆದ ಪ್ರಮುಖ ದೇವಾಲಯಗಳು?

ತಿರುವಂತನಪುರದ ಅನಂತ ಪದ್ಮನಾಭ ದೇವಾಲಯದಲ್ಲಿ 'ಅನಂತ ಸಂಪತ್ತು' ಸಂಬಂಧ ಆಗಸ್ಟ್ 2012 ತಿಂಗಳಲ್ಲಿ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+