ಆಮ್ಲೆಟ್ ಜತೆ ಇಲಿ ಪಾಷಾಣ ತಿಂದ ಬಾಲಕನ ಸಾವು

Udupi- Rat poison in omelette 13-year Prajnesh Shetty dies
ಉಡುಪಿ, ಫೆ.27: ಮೊನ್ನೆ ಕೊಣಾಜೆಯ ಕೈರಂಗಲಾ ಗ್ರಾಮದಲ್ಲಿ ಅಪ್ಪನ ಎದುರೇ ಆಟವಾಡುತ್ತಿದ್ದ ಮಗುವಿನ ಮೇಲೆ ಒಣಗಿದ ತೆಂಗಿನ ಮರ ಬಿದ್ದು ಸಾವಿಗೀಡಾದ ಸುದ್ದಿ ಕೇಳಿಬಂದಿತ್ತು. ಈಗ ಅಂತಹುದೇ ಮತ್ತೊಂದು ದುರಂತ ನಡೆದಿದೆ.

ಆಮ್ಲೆಟ್ ತಿನ್ನುತ್ತಿದ್ದ ಬಾಲಕ ರುಚಿಗೆ ಇರಲಿ ಅಂತ ಮೆಣಸು ಪುಡಿಯನ್ನು ಅದರ ಮೇಲೆ ಚಿಮುಕಿಸಿಕೊಂಡು ತಿಂದಿದ್ದಾನೆ. ಇದರಿಂದ ಅಸ್ವಸ್ತಗೊಂಡ ಬಾಲಕ ಒಂದು ವಾರ ಕಾಲ ಾಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ, ಅಸುನೀಗಿದ್ದಾನೆ. 13 ವರ್ಷದ ಪ್ರಜ್ಞೇಶ ಶೆಟ್ಟಿ ಮೃತಪಟ್ಟ ದುರ್ದೈವಿ.

ಮೂಲತಃ ತೀರ್ಥಹಳ್ಳಿ ಸತೀಶ್ ಮತ್ತು ಲತಾಕುಮಾರಿ ಶೆಟ್ಟಿ ದಂಪತಿಯ ಪುತ್ರನೇ ಪ್ರಜ್ಞೇಶ. ಪಾರ್ಕಾಲಾ ಹೆರಗೆಯವರಾದ ಲತಾಕುಮಾರಿ ಶೆಟ್ಟಿ ಆಸ್ಪತ್ರೆಯೊಂದರಲ್ಲಿ ಕೆಲಸದಲ್ಲಿದ್ದಾರೆ.

ತನ್ನ ತಾಯಿ ಉದ್ಯೋಗನಿಮಿತ್ತ ಹೊರಹೋಗಿದ್ದಾಗ ಪ್ರಜ್ಞೇಶ, ತಾನೇ ಆಮ್ಲೆಟ್ ಮಾಡಿಕೊಂಡು ತಿನ್ನಲು ಮನಸ್ಸು ಮಾಡಿದ್ದಾನೆ. ಆದರೆ ಆಮ್ಲೆಟ್ ಮಾಡಿದ ಬಳಿಕ ಪ್ರಜ್ಞೇಶ, ತನಗರಿವಿಲ್ಲದಂತೆ ಇಲಿ ಪಾಷಾಣವನ್ನು pepper powder ಅಂದುಕೊಂಡು ಆಮ್ಲೆಟ್ ಮೇಲೆ ಚಿಮುಕಿಸಿಕೊಂಡು ತಿಂದಿದ್ದಾನೆ.

ಫೆಬ್ರವರಿ 21ರ ಗುರುವಾರ ಈ ಘಟನೆ ನಡೆದಿತ್ತು. ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಜ್ಞೇಶ, ನಿನ್ನೆ ಮಂಗಳವಾರ ಕೊನೆಯುಸಿರೆಳೆದಿದ್ದಾನೆ.

ಮತ್ತೊಂದು ಘಟನೆ: ಮಂಗಳೂರಿನ ಎಡಮಂಗಲ ಗ್ರಾಮದಲ್ಲಿ ಮಕ್ಕಳಿಬ್ಬರು ಹಲ್ಲುಜ್ಜುವ ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣವನ್ನು ಬಾಯಿಗೆ ಹಾಕಿಕೊಂಡ ಪರಿಣಾಮ ಒಬ್ಬಳು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಎರಿಂಬಿಲ ಮೋಹನ ಗೌಡ ಅವರ ಮೂರೂವರೆ ವರ್ಷದ ದೊಡ್ಡ ಮಗು ಧೃತಿ ಮೃತಪಟ್ಟವಳು. ಮೋಹನ ಗೌಡ ಹಾಗೂ ಅವರ ಪತ್ನಿ ಮಂಜುಳಾ ತಮ್ಮ ಮನೆಯ ಪಕ್ಕದಲ್ಲಿ ಹೊಸ ಮನೆಯ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅವರ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ಆಗ ಕೈಗೆ ಸಿಕ್ಕಿದ ಇಲಿ ಪಾಷಾಣವನ್ನು ಹಲ್ಲುಜ್ಜುವ ಪೇಸ್ಟ್ ಎಂದು ಭಾವಿಸಿದ ಧೃತಿ ತಾನೂ ಹಲ್ಲುಜ್ಜಿಕೊಂಡಿದ್ದಲ್ಲದೇ 8 ತಿಂಗಳ ಚಿಕ್ಕ ಮಗುವಿಗೂ ಅದರಿಂದಲೇ ಹಲ್ಲುಜ್ಜಿಸಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+