ಏನಾಯ್ತು ಯೋಗೇಶಪ್ಪ ನಿನ್ನ ಶಪಥ : ಬಿಜೆಪಿ

Channapatna Taluk BJP on CP Yogeshwar Migration
ಚನ್ನಪಟ್ಟಣ, ಫೆ. 25: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿದ್ದ ಯೋಗೇಶ್ವರ್ ಇಂದು ಏನು ಮಾಡಿದ್ದಾರೆ. ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದಿದ್ದ ಯೋಗೇಶ್ವರ್ ಅವರು ಹೇಳಿ ಈಗ ಪಕ್ಷಾಂತರಿ ಆಗುತ್ತಿರುವುದು ಎಷ್ಟು ಸರಿ? ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಪ್ರಶ್ನಿಸಿದ್ದಾರೆ.

ತಾಲೂಕಿನ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನಂದಸ್ವಾಮಿ ಅವರು, ತಾಲೂಕು ಮಟ್ಟದ ನಾಯಕರಾಗಿದ್ದ ಯೋಗೇಶ್ವರ್ ರಾಜ್ಯಮಟ್ಟದ ನಾಯಕರಾಗಿ ಬೆಳೆಯಲು, ಸಚಿವರಾಗಲು ಬಿಜೆಪಿ ಕಾರಣ ಎಂಬುದನ್ನು ಮರೆತಿದ್ದಾರೆ. ಈಗ ಬೆಳೆಸಿದವರನ್ನೇ ಕಾಲಿನಿಂದ ಒದ್ದು, ಬಿಜೆಪಿ ವಿರುದ್ಧವೇ ಮಾತನಾಡುವ ಮೂಲಕ ಯೋಗೀಶ್ವರ್ ನಯವಂಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಡಿಕೆಶಿ ಅವರನ್ನು ಜೈಲಿಗಾಕ್ತಾರಾ?: ಶಾಸಕ ಡಿ.ಕೆ.ಶಿವಕುಮಾರ್ ಅವರು ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಾರೆ, ಅವರನ್ನು ಜೈಲಿಗೆ ಕಳುಹಿಸುವವರೆಗೂ ತಮಗೆ ಸಮಾಧಾನವಿಲ್ಲ, ಜೈಲಿಗೆ ಕಳುಹಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿದ್ದ ಯೋಗೀಶ್ವರ್, ಇಂದು ಅದೇ ಡಿ.ಕೆ. ಶಿವಕುಮಾರ್ ಅವರ ಬಳಿ ಸ್ಥಾನಮಾನಕ್ಕೆ ಅಂಗಲಾಚುತ್ತಿದ್ದಾರೆ.

ರಾಜ್ಯದ ಗಣಿ ಅಕ್ರಮಗಳ ಮೂಲ ಡಿಕೆ ಶಿವಕುಮಾರ್ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಎಸ್ ಆರ್ ಹಿರೇಮಠ್ ಅವರು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರ ಅಕ್ರಮದ ಜೊತೆಗೆ ಸಿಪಿ ಯೋಗೇಶ್ವರ್ ಅವರ ಅಕ್ರಮಗಳು ಬಹಿರಂಗವಾಗಲಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆಶಿಸಿದರು.

ಈ ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವಾಗ ಕಾಂಗ್ರೆಸ್ ಪಕ್ಷವನ್ನು ವಾಚಾಮಗೋಚರ ನಿಂದಿಸಿದ್ದರು, ಅಲ್ಲಿದ್ದರೆ ಏನೂ ಅಭಿವೃದ್ಧಿ ಮಾಡಲಾಗುವುದಿಲ್ಲ
ಎಂದು ಜರಿದಿದ್ದರು, ಇದೀಗ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಕಾರಕ್ಕೆ ಬರುತ್ತದೆ ಎಂಬ ಹಗಲುಗನಸು ಕಾಣುತ್ತಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ,
ಮುಂದಿನ ದಿನಗಳಲ್ಲಿ ಜನತೆಯೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆನಂದ್ ಸ್ವಾಮಿ ಅಭಿಪ್ರಾಯಪಟ್ಟರು.

ಹಗರಣದ ಭೀತಿ: ಯೋಗೇಶ್ವರ್ ಅವರ ಮೇಲೆ ಹಲವಾರು ಪ್ರಕರಣಗಳು ಸುತ್ತಿಕೊಂಡಿದ್ದೆ. ಹಗರಣದಿಂದ ಹೊರಗೆ ಬರುವ ಆತಂಕ ಅವರನ್ನು ಹೀಗೆ ಮಾಡಿಸಿದೆ. ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮೆಗಾಸಿಟಿ ಹಗರಣದ ಬಗ್ಗೆ ಎಲ್ಲಿ ತನಿಖೆ ಆರಂಭಿಸಿ ತಮ್ಮ ಬುಡ ಅಲ್ಲಾಡಿಸುತ್ತದೆ ಎಂಬ ಭಯ ಆವರಿಸಿದೆ. ತಮ್ಮ ವಂಚನೆ ಬಯಲಾಗಿ ಜೈಲುಪಾಲಾಗುವ ಭಯ ಅವರಿಗೆ ಕಾಡಿದ್ದರಿಂದ ಕೂಡಲೇ ಕಾಂಗ್ರೆಸ್ ನಾಯಕರ ಕಾಲಿಗೆ ಯೋಗೇಶ್ವರ್ ಬಿದ್ದಿದ್ದಾರೆ.

ಬಿಜೆಪಿಯಲ್ಲಿ ರಾಜ್ಯಮಟ್ಟದ ನಾಯಕರಾಗಿ ಮೆರೆದ ಯೋಗೇಶ್ವರ್, ಇದೀಗ ಯಕಶ್ಚಿತ್ ನಗರಸಭೆ ಬಿ ಫಾರಂಗಾಗಿ ಕಾಂಗ್ರೆಸ್ ಜಿಲ್ಲಾ ಮುಖಂಡರ ಅಂಗಲಾಚಿ ನಿಂತಿದ್ದಾರೆ. ರಾತ್ರೋರಾತ್ರಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ, ಅವರಿಗೆ ಈಗಲೇ ಬೇಡುವ ಸ್ಥಿತಿ ಬಂದಿರುವುದು ನಿಜಕ್ಕೂ
ನಾಚಿಕೆಗೇಡಿನ ವಿಚಾರವಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+