ಅರ್ಚಕರ ಪತ್ನಿ ಹಿಟ್ ಅಂಡ್ ರನ್ ಕೇಸಲ್ಲಿ ಫಿಟ್

ಹಿಟ್ ಅಂಡ್ ರನ್ ಕೇಸ್ ಎಂದರೆ ರಾಷ್ಟ್ರೀಯ ಮಾಧ್ಯಮಗಳ ಗಮನ ಚಕ್ಕನೆ ಅತ್ತ ತಿರುಗುತ್ತದೆ ಎಂಬ ಮಾತಿಗೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಜಯನಗರದ ಹಿಂಟ್ ಅಂಡ್ ರನ್ ಕೇಸ್ ಎನ್ ಡಿಟಿವಿ, ಸಿಎನ್ ಎನ್ ಐಬಿಎನ್ ಲೈವ್ ವಾಹಿನಿಗಳಲ್ಲೂ ನಿನ್ನೆ ಸದ್ದು ಮಾಡಿತ್ತು.
28 ವರ್ಷ ವಯಸ್ಸಿನ ರಾಜೇಶ್ವರಿ ಅವರಿಗೆ ಕಾರು ಚಾಲನೆ ಮಾಡಲು ಬರುತ್ತಿರಲಿಲ್ಲ. ಇನ್ನೂ ಲರ್ನಿಂಗ್ ಲೈಸನ್ ಅಷ್ಟೇ ಪಡೆದಿದ್ದರು. ರಾತ್ರಿ ವೇಳೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದ ಅವರ ಕುಟುಂಬ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ.
ಜಯನಗರದ 6ನೇ ಬ್ಲಾಕಿನ 2ನೇ ಬಿ ಮುಖ್ಯರಸ್ತೆಯಲ್ಲಿ ಮುಂದೆ ಚಲಿಸುತ್ತಿದ್ದ ವಾಹನ ಸಡನ್ ಆಗಿ ಬ್ರೇಕ್ ಹಾಕಿದಾಗ ಗಾಬರಿಗೊಂಡ ಚಾಲಕಿ ರಾಜೇಶ್ವರಿ, ಗಾಡಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಪಾರ್ಕ್ ಮಾಡಿದ್ದ ವಾಹನಗಳಿಗೆ ಗುದ್ದಿದ್ದಾರೆ ನಂತರ ಪಾದಚಾರಿಗಳ ಮೇಲೆ ಕಾರು ಬಿಟ್ಟಿದ್ದಾರೆ.
KA 05 MB **** ಸಂಖ್ಯೆಯ ಮಾರುತಿ ವ್ಯಾಗನ್ ಆರ್ ಕಾರು ಗುದ್ದಿದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ತಿಂದ 22 ವರ್ಷ ವಯಸ್ಸಿನ ಫಾರೂಖ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಿಯಾಜ್(18), ಅಬ್ದುಲ್(25) ಹಾಗೂ ಖಲೀಲ್(19) ಎಂಬುವರು ಗಾಯಗೊಂಡಿದ್ದಾರೆ. ಎಲ್ಲರನ್ನು ದೀಪಕ್ ನರ್ಸಿಂಗ್ ಹೋಂ ಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಂಧ್ರಪ್ರದೇಶದ ಕರ್ನೂಲು ಮೂಲದವರಾದ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಜಯನಗರ ಠಾಣಾಧಿಕಾರಿ ಹೇಳಿದ್ದಾರೆ.
ಘಟನೆ ನಂತರ ಗಾಬರಿಗೊಂಡ ರಾಜೇಶ್ವರಿ ಗಾಡಿ ನಿಲ್ಲಿಸಿದೆ ತಮ್ಮ ಸವಾರಿ ಮುಂದುವರೆಸಿದ್ದಾರೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಆಕೆ ಗಾಯಗೊಂಡವರನ್ನು ಕೂಡಾ ನೋಡದೆ ಪರಾರಿಯಾದರು. ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು ಎಂದಿದ್ದಾರೆ. ನಂತರ ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ಮಾಡಿಕೊಂಡು ಮನೆಗೆ ಬಂದು ಸ್ಕೂಟರ್ ಏರಿ ಪರಾರಿಯಾಗಿದ್ದರು. ರಾಜೇಶ್ವರಿ ಹಾಗೂ ಅವರ ಪತಿ ವೆಂಕಟರಮಣಪ್ಪ ಅವರು ಸೋಮವಾರ ಬೆಳಗ್ಗೆ ಜಯನಗರ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಡಿಸಿಪಿ ಮಹದೇವಯ್ಯ ಹೇಳಿದ್ದಾರೆ.
ಹಿಟ್ ಅಂಡ ರನ್ ಕೇಸ್ ಹಿಡಿಯುವುದು ಹೇಗೆ?: ಕಾರಿನ ನಂಬರ್, ಸ್ಥಳದಲ್ಲಿ ಆರೋಪಿಗೆ ಸಂಬಂಧಿಸಿದ ವಸ್ತುಗಳ ಪರಿಶೀಲನೆ, ಪ್ರತ್ಯಕ್ಷ ದರ್ಶಿಗಳ ಹೇಳಿಕೆ, ಆರ್ ಟಿಒ ಮಾಹಿತಿ ಪಡೆದು ಆರೋಪಿಯನ್ನು ಹುಡುಕಲಾಗುತ್ತದೆ. ಈ ಹಿಂದೆ 2011ರಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಇರುವ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ಆಧಾರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಮಾಹಿತಿ ಕೋರಲಾಗಿತ್ತು. ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ ತನ್ನದೇ ಆದ ಫೇಸ್ ಬುಕ್ ಪುಟ ಹೊಂದಿದ್ದು, ಸದಾ ಕಾಲ ಜನ ಸಂಪರ್ಕದಲ್ಲಿದೆ ಎಂದು ಡಿಸಿಪಿ ಮಹದೇವಯ್ಯ ಹೇಳಿದರು.












Click it and Unblock the Notifications