ರಾಮ ಸೇತುಗೆ ಹಾನಿಯಾದರೆ ಪರಿಣಾಮ ನೆಟ್ಟಗಿರಲ್ಲ

ಸೇತುಸಮುದ್ರ ಯೋಜನೆಯಲ್ಲಿ ಮುಂದುವರಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಯುಪಿಎ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ ಹಾಗೂ ರಾಮ ಸೇತು ಕೋಟ್ಯಂತರ ಹಿಂದೂಗಳ ಭಾವನೆಗಳು ಈ ವಿಷಯದಲ್ಲಿ ಸಮ್ಮಿಳಿತವಾಗಿವೆ. ರಾಮ ಸೇತುವನ್ನು ಯಾವುದೇ ರೀತಿಯಲ್ಲಿ ಭಗ್ನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
'ರಾಮ ಸೇತುವೆ ಧ್ವಂಸಗೊಳಿಸಿ ಸೇತು ಸಮುದ್ರಂ ಯೋಜನೆ ಜಾರಿಗೆ ತರುವುದು ಆರ್ಥಿಕವಾಗಿ ಹಾಗೂ ಪರಿಸರ ದೃಷ್ಟಿಯಿಂದ ಕಾರ್ಯಸಾಧುವಲ್ಲ' ಎಂದು ಆರ್.ಕೆ. ಪಚೌರಿ ವರದಿಯನ್ನು ತಿರಸ್ಕರಿಸಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ಸೇತು ಸಮುದ್ರಂ ಯೋಜನೆಗೆ ಈಗಾಗಲೇ 800 ಕೋಟಿ ರೂ. ವೆಚ್ಚ ಮಾಡಿರುವುದರಿಂದ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿದೆ.
ರಾಮ ಸೇತು ವಿಷಯದಲ್ಲಿ ಸರಕರಕ್ಕೆ ನಾವು ಎಚ್ಚರಿಕೆ ನೀಡಲು ಬಯಸುತ್ತೇವೆ. ಆರ್.ಕೆ. ಪಚೌರಿ ಸಮಿತಿಯ ವರದಿಯನ್ನು ಸರಕಾರ ನಿರ್ಲಕ್ಷಿಸುತ್ತಿದೆ ಮತ್ತು ಯೋಜನೆಯಲ್ಲಿ ಮುಂದುವರಿಯುತ್ತಿದೆ. ಇದು ಹಿಂದೂ ಭಾವನೆಗಳು ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ತಿಳಿಸಿದರು. ಯೋಜನೆಯನ್ನು ಕೈ ಬಿಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ.
ಸೇತುಸಮುದ್ರ ನೌಕಾಯಾನ ಕಡಲ್ಗಾಲುವೆ ಯೋಜನೆ ಆರ್ಥಿಕ ಮತ್ತು ಭೌಗೋಳಿಕ ಕಾರಣಗಳಿಗಾಗಿ ಕಾರ್ಯಸಾಧ್ಯವಲ್ಲ ಎಂದು ಪಚೌರಿ ಸಮಿತಿ ಹೇಳಿತ್ತು. ಅದು ತನ್ನ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸರ್ಕಾರ ವರದಿಯನ್ನು ತಿರಸ್ಕರಿಸಿತ್ತು ಮತ್ತು ಯೋಜನೆಯಲ್ಲಿ ಮುಂದುವರಿಯುವ ಉದ್ದೇಶವಿದೆ ಎಂದು ತಿಳಿಸಿತ್ತು. ಆಡಂನ ಸೇತುವೆ ಎಂದು ಇದಕ್ಕೆ ಹೆಸರಿಟ್ಟಿದ್ದರೂ, ರಾಮ ಸೇತುವೆಂದೇ ಇದು ಜನಪ್ರಿಯವಾಗಿದೆ. ರಾಮ ಸೇತುವನ್ನು ಭಗ್ನಗೈದು ಕಡಲ್ಗಾಲುವೆ ನಿರ್ಮಿಸಲು ಸರಕಾರ ಉದ್ದೇಶಿಸಿದೆ.
ರಾಮ ಸೇತುವನ್ನು ಯಾವುದೇ ರೀತಿಯಲ್ಲಿ ಭಗ್ನಗೊಳಿಸುವುದನ್ನು ಬಿಜೆಪಿ ಮತ್ತು ದೇಶ ಸಹಿಸದು. ಸೇತುವನ್ನು ಭಗ್ನಗೊಳಿಸುವುದೇ ಏಕೈಕ ಪರಿಹಾರವೇ ಎಂದು ಪ್ರಸಾದ್ ಕೇಳಿದರು. ಯೋಜನೆಯಲ್ಲಿ ಈಗಾಗಲೇ 800 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ ಎಂಬ ಸರಕಾರದ ಪ್ರತಿಪಾದನೆಯನ್ನು ಅವರು ತಿರಸ್ಕರಿಸಿದರು. ಎಷ್ಟು ಮೊತ್ತ ವ್ಯಯಿಸಲಾಯಿತು ಎನ್ನುವುದು ಪ್ರಶ್ನೆಯಲ್ಲ. ವೆಚ್ಚದ ಆವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ರಾಮ ಸೇತು ವಿನಾ ನೀವು ರಾಮಾಯಣವನ್ನು ಕಲ್ಪಿಸಲಾರಿರಿ. ಕೋಟ್ಯಂತರ ಹಿಂದೂಗಳ ಭಾವನೆ, ನಂಬಿಕೆ ಈ ವಿಷಯದಲ್ಲಿ ಅಡಕಗೊಂಡಿದೆ ಎಂದು ಪ್ರಸಾದ್ ತಿಳಿಸಿದರು.ಸುಮಾರು 167 ಕಿ.ಮೀ ದೂರದ 12 ಮೀಟರ್ ಆಳದ 30 ಮೀ ವಿಸ್ತೀರ್ಣದ ಈ ಸೇತುಸಮುದ್ರ ನೌಕಾಯಾನ ಕಡಲ್ಗಾಲುವೆ ಯೋಜನೆ ಪಾಕ್ ಜಲಸಂಧಿ ದಾಟಿ ಭಾರತ ಹಾಗೂ ಶ್ರೀಲಂಕಾಕ್ಕೆ ಸಂರ್ಪಕ ಕಲ್ಪಿಸಲಿದೆ. (ಪಿಟಿಐ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications