ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ಅಲಹಾಬಾದ್, ಫೆ.24: ಸುರಕ್ಷತೆಯ ದೃಷ್ಟಿಯಿಂದ ಮಹಾ ಕುಂಭಮೇಳದ ಎಲ್ಲಾ ಸ್ನಾನಘಟ್ಟಗಳಲ್ಲಿ ಫೋಟೋಗ್ರಾಫಿ ನಿಷೇಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ. ಸ್ನಾನ ಘಟ್ಟಗಳ ಬಳಿ ಕಾವಲು ಕಾಯುವ ಪೊಲೀಸರಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಯಾರಾದರೂ ಫೋಟೋ ತೆಗೆಯುವುದು ಕಂಡು ಬಂದರೆ ವಶಕ್ಕೆ ತೆಗೆದುಕೊಂಡು ವಿಚಾರಿಸುವಂತೆ ಸೂಚಿಸಲಾಗಿದೆ.
ಸಾಮಾನ್ಯ ಜನರ ಜೊತೆಗೆ ವಿಶ್ವದೆಲ್ಲೆಡೆಯಿಂದ ಬಂದಿರುವ ಫೋಟೊ ಜರ್ನಲಿಸ್ಟ್ ಗಳ ಕೆಮೆರಾಗಳಿಗೆ ಕುಂಭಮೇಳ ಎಂದರೆ ದೊಡ್ಡ ಹಬ್ಬ. ಆದರೆ, ಆಡಳಿತ ಪೊಲೀಸರಿಗೆ ಕಳಿಸಿರುವ ಪತ್ರ ST/SSP/C-14/2013 ಹಾಗೂ 1940ರ ಸಂಯುಕ್ತ ಮೇಳ ಪ್ರಾಂತ್ ಅಧಿನಿಯಮದ ಪ್ರಕಾರ ಛಾಯಾಗ್ರಹಣ ನಿಷೇಧ ಹೇರುವ ಅಧಿಕಾರ ಸ್ಥಳೀಯ ಆಡಳಿತಕ್ಕೆ ಇದೆ ಎಂದು ಹೈಕೋರ್ಟ್ ಕೂಡಾ ಹೇಳಿದೆ.
ಆದರೆ, ಈ ಬಗ್ಗೆ ಪೂರ್ವ ಮಾಹಿತಿ ಇಲ್ಲದೆ ಸ್ನಾನ ಘಟ್ಟದ ಬಳಿ ಬಂದ ಫೋಟೋ ಜರ್ನಲಿಸ್ಟ್, ಮಾಧ್ಯಮ ಪ್ರತಿನಿಧಿಗಳು, ಉತ್ಸಾಹಿ ಫೋಟೋಗ್ರಾಫರ್ ಗಳು 'ಫೋಟೋಗ್ರಾಫಿ ನಿಷೇಧ' ಬೋರ್ಡ್ ನೋಡಿ ಕಂಗಾಲಾಗಿದ್ದಾರೆ. ಮಾಧ್ಯಮ ಕೇಂದ್ರದಿಂದ ನೂರಾರು ಪತ್ರಕರ್ತರಿಗೆ ಪಾಸ್ ಗಳನ್ನು ನೀಡಲಾಗಿದೆ. ಆದರೆ, ಫೋಟೊ ನಿಷೇಧವನ್ನು ಅಲಹಾಬಾದ್ ವಿಭಾಗದ ಆಯುಕ್ತ ದಿವೇಶ್ ಚತುರ್ವೇದಿ ಸಮರ್ಥಿಸಿಕೊಂಡಿದ್ದಾರೆ.

ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ಸ್ನಾನ ಘಟ್ಟದ ಪ್ರದೇಶಗಳನ್ನು ಬಿಟ್ಟು ಉಳಿದೆಡೆ ಫೋಟೊ ತೆಗೆಯಬಹುದಾಗಿದೆ. ಹೈಕೋರ್ಟ್ ಆದೇಶದಂತೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ದಿವೇಶ್ ಹೇಳಿದ್ದಾರೆ.

ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ರೈಲ್ವೆ ನಿಲ್ದಾಣದಲ್ಲಿ ಅದ ಕಾಲ್ತುಳಿತ ದುರ್ಘಟನೆ ಚಿತ್ರಗಳು ಪ್ರಸಾರವಾಗಿದ್ದು, ಹೆಲಿ ಕಾಪ್ಟರ್ ಬಳಸಿ ಹತ್ತಿರದಿಂದ ಫೋಟೊ ಹೊಡೆಯಲು ಫ್ರೆಂಚ್ ಜರ್ನಲಿಸ್ಟ್ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಎಲ್ಲವೂ ಪತ್ರಕರ್ತರಿಗೆ ಮುಳುವಾಗಿದೆ.

ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ಸಂಗಮದಲ್ಲಿ ಹರ್ಯಾಣ ಸಿಎಂ ಭೂಪೆಂದರ್ ಸಿಂಗ್ ಹೂಡಾ, ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮ ಹಾಗೂ ಇನ್ನಿತರರು

ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ಅಲಹಾಬಾದಿನ ಕುಂಭಮೇಳದ ಸಂಗಮದಿಂದ ತೆರಳುತ್ತಿರುವ ಭಕ್ತಸಮೂಹ

ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ರೈಲ್ವೆ ನಿಲ್ದಾಣದಲ್ಲಿ ಅದ ಕಾಲ್ತುಳಿತ ದುರ್ಘಟನೆ ಚಿತ್ರಗಳು ಪ್ರಸಾರವಾಗಿದ್ದು, ಹೆಲಿ ಕಾಪ್ಟರ್ ಬಳಸಿ ಹತ್ತಿರದಿಂದ ಫೋಟೊ ಹೊಡೆಯಲು ಫ್ರೆಂಚ್ ಜರ್ನಲಿಸ್ಟ್ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಎಲ್ಲವೂ ಪತ್ರಕರ್ತರಿಗೆ ಮುಳುವಾಗಿದೆ.

ಕುಂಭಮೇಳದಲ್ಲಿ ಫೋಟೋಗ್ರಾಫಿ ನಿಷೇಧ
ಫೆ.25ರ ನಂತರ ಮಾ.10ರ ಮಹಾಶಿವರಾತ್ರಿಯಂದು ಭಕ್ತಾದಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದ್ದು, ಪ್ರತಿದಿನ ಹೊಸ ಹೊಸ ನಿಯಮಗಳನ್ನು ಪೊಲೀಸರು ಹೇರುತ್ತಿದ್ದಾರೆ. ಅದರೆ, ಪವಿತ್ರ ದಿನಗಳಂದು ದೀಕ್ಷಾ ಕಾರ್ಯಗಳು ಹೆಚ್ಚುತ್ತಲೇ ಇದೆ.












Click it and Unblock the Notifications