ಸರಕಾರ ಉಳಿಸಿಕೊಳ್ಳಲು ಬಿಜೆಪಿಗೆ ಜೆಡಿಎಸ್ ಬೆಂಬಲ !

BJP may seek JDS suppoort if ministers gets Congress ticket
ಬೆಂಗಳೂರು, ಫೆ 20: ಅತ್ತ ಕಾವೇರಿ ನದಿ ನೀರು ಹಂಚಿಕೆಯ ಸಂಬಂಧ ಇಂದು (ಫೆ 20) ಹೊರಬೀಳಲಿರುವ ಅಂತಿಮ ಅಧಿಸೂಚನೆ ರಾಜ್ಯಕ್ಕೆ ಯಾವ ಮಟ್ಟದಲ್ಲಿ ಮುಳುವಾಗಲಿದೆಯೋ ಎಂದು ರಾಜ್ಯದ ಜನತೆ ಆತಂಕ ವ್ಯಕ್ತ ಪಡಿಸುತ್ತಿದ್ದರೆ, ಇತ್ತ ಆಡಳಿತ ಬಿಜೆಪಿ ಪೂರ್ಣಾವಧಿ ಮುಗಿಸಲು ಸಂಖ್ಯಾಬಲದ ಕೊರತೆ ಕಂಡುಬಂದಲ್ಲಿ ಜೆಡಿಎಸ್ ಬೆಂಬಲ ಪಡೆದುಕೊಂಡರೆ ಹೇಗೆ ಎನ್ನುವ ಚರ್ಚೆಯಲ್ಲಿ ಮುಳುಗಿದೆ.

ಹತ್ತಕ್ಕೂ ಹೆಚ್ಚಿನ ಸಚಿವರು/ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿರುವುದರಿಂದ ಅವರಿಂದ ಯಾವ ಕ್ಷಣದಲ್ಲಾದರೂ ತೊಂದರೆ ಬರಬಹುದೆಂದು ಅರಿತಿರುವ ಬಿಜೆಪಿ ಮುಖಂಡರು ಉಪಮುಖ್ಯಮಂತ್ರಿ ಅಶೋಕ್ ಮುಖೇನಾ ದೇವೇಗೌಡ ಕುಟುಂಬದ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷದ ಕದ ತಟ್ಟತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಚಿವರ ಮತ್ತು ಶಾಸಕರ ರಾಜೀನಾಮೆ ಪರ್ವ ಆರಂಭವಾದಲ್ಲಿ ಸರ್ಕಾರವನ್ನು ವಿಸರ್ಜಿಸುವ ಬದಲು ಜೆಡಿಎಸ್‌ ಪಕ್ಷದ ಪರೋಕ್ಷ ನೆರವು ಪಡೆದುಕೊಂಡರೆ ಹೇಗೆ ಎನ್ನುವ ಬಗ್ಗೆ ಗಾಢ ಚರ್ಚೆಯಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ.

ನಗರದ ರಾಯಲ್‌ ಆರ್ಕಿಡ್‌ ಹೋಟೇಲಿನಲ್ಲಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಈಶ್ವರಪ್ಪ ಮತ್ತು ಸದಾನಂದ ಗೌಡ ಜೆಡಿಎಸ್ ಬೆಂಬಲ ಪಡೆಯುವುದರ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಆದರೆ ಮುಖ್ಯಮಂತ್ರಿ ಶೆಟ್ಟರ್‌, ಅಶೋಕ್‌ ಮತ್ತು ಅನಂತಕುಮಾರ್‌ ಅವರು ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌ ಬೆಂಬಲ ಪಡೆಯುವ ಬಗ್ಗೆ ತಮ್ಮ ಒಲವು ತೋರಿದ್ದರಿಂದ ಜೆಡಿಎಸ್ ನಾಯಕರ ಜೊತೆ ಅಶೋಕ್‌ ಮಾತುಕತೆ ನಡೆಸಲಿ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳ ಬಿಜೆಪಿ ಶಾಸಕರ ಪಟ್ಟಿಯೊಂದಿಗೆ ರಾಜ್ಯ ಕಾಂಗ್ರೆಸ್‌ ನಾಯಕರು ದೆಹಲಿಗೆ ತೆರಳಿದ್ದು ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಸದ್ಯದಲ್ಲೇ ಹೊರಬೀಳಲಿದ್ದು, ಮುಂದಿನ ಕಾರ್ಯತಂತ್ರ ರೂಪಿಸಲು ಬಿಜೆಪಿ ಸನ್ನದ್ದವಾಗುತ್ತಿದೆ ಎನ್ನಲಾಗಿದೆ.

ಸಂಭಾವ್ಯ ಕಾಂಗ್ರೆಸ್ ಟಿಕೆಟ್ ಪಡೆಯಲಿರುವ ಬಿಜೆಪಿ ಶಾಸಕರು/ಸಚಿವರು ಯಾರು ನಿರೀಕ್ಷಿಸಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+