ಬೇರೆ ಪಕ್ಷ ಸೇರಲ್ಲ, ಬೇಕಾದರೆ ರಾಜಕೀಯ ನಿವೃತ್ತಿ

Sadananda Gowda hits back at Dhananjay Kumar
ಬೆಂಗಳೂರು, ಫೆ. 18: ಕೆಜೆಪಿ ಹಾಗೂ ಬಿಜೆಪಿ ನಾಯಕರ ವಾಕ್ ಚಪಲ ಎಲ್ಲರಿಗೂ ಗೊತ್ತಿರುವ ವಿಷಯ. ಒಬ್ಬರು ಇನ್ನೊಬ್ಬರ ಮೇಲೆ ಹೇಳಿಕೆಗಳನ್ನು ನೀಡುವುದು, ಅಂಕಿ ಸಂಖ್ಯೆಗಳನ್ನು ಹೇಳುತ್ತಾ ಇವರು ಪಕ್ಷ ಬಿಡ್ತಾರೆ, ಇವರು ಬಂದು ಸೇರ್ತಾರೆ ಎಂಬ ಭವಿಷ್ಯವಾಣಿಗಳು ಅಧಿಕವಾಗಿಬಿಟ್ಟಿದೆ. ನಿನ್ನೆ ಇನ್ನೂ ಧನಂಜಯ್ ಕುಮಾರ್ ಅವರು ಡಿವಿಎಸ್ ಅವರು ಜೆಡಿಎಸ್ ಸೇರುವ ಸಾಧ್ಯತೆಯಿದೆ ಎಂದಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಸದಾನಂದ ಗೌಡರು ತಿರುಗಿ ಪ್ರತ್ಯುತ್ತರ ನೀಡಿದ್ದಾರೆ.

'ನಾನು ಏನು ಅನ್ನ ಸಿದ್ಧಾಂತ ಎಲ್ಲರಿಗೂ ಗೊತ್ತಿದೆ. ನನಗೆ ಯಾರ ಸರ್ಟಿಫಿಕೇಟ್ ಬೇಡ. ಯಾವುದೇ ಕಾರಣಕ್ಕೂ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಪಕ್ಷ ಬಿಡುವ ಸಂದರ್ಭದ ಬಂದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಹೊರತೂ ಪಕ್ಷ ದ್ರೋಹ ಮಾಡುವುದಿಲ್ಲ' ಎಂದು ಡಿವಿ ಸದಾನಂದ ಗೌಡರು ಪ್ರತಿಕ್ರಿಯಿಸಿದ್ದಾರೆ.

ಧನಂಜಯ್ ಕುಮಾರ್ ಅವರು ಇಲ್ಲ ಸಲ್ಲದ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಲಿ. ಬಿಜೆಪಿ ಈಗ ಸದೃಢವಾಗಿದ್ದು, ಯಾವುದೇ ಆಂತರಿಕ ಕಲಹ ನಮ್ಮಲ್ಲಿಲ್ಲ. ನನ್ನನ್ನು ಯಾರೂ ಕಡೆಗಣಿಸಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಇದನ್ನು ಧನಂಜಯ್ ಕುಮಾರ್ ಹೇಳಬೇಕಾದಿಲ್ಲ ಎಂದು ಡಿವಿಎಸ್ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸು ಕಾರ್ಯತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಅರಮನೆ ಮೈದಾನದಲ್ಲಿ ಮಂತ್ರಾಲೋಚನೆ ಸಭೆಗೆ ಸರಿಯಾದ ಆಹ್ವಾನ ಸಿಗದ ಕಾರಣ, ಮುನಿಸಿಕೊಂಡ ಸದಾನಂದ ಗೌಡರು ದಕ್ಷಿಣ ಕನ್ನಡದತ್ತ ಪ್ರವಾಸ ಕೈಗೊಂಡಿದ್ದರು.

ಸದಾನಂದ ಗೌಡ ಅವರಂಥ ಉತ್ತಮ ನಾಯಕರನ್ನು ಕಳೆದುಕೊಂಡ ಮೇಲೆ ಬಿಜೆಪಿ ಇನ್ನಷ್ಟು ಬಡವಾಗಲಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರಲಿದೆ. ಇದು ಕರ್ನಾಟಕ ಜನತಾ ಪಕ್ಷಕ್ಕೆ ವರದಾನವಾಗಲಿದೆ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ನಾಯಕರ ವರ್ತನೆಯಿಂದ ಸದಾನಂದ ಗೌಡರು ತುಂಬಾ ಬೇಸರಗೊಂಡಿದ್ದಾರೆ. ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿರುವ ಗೌಡರು ಬಿಜೆಪಿ ತೊರೆಯುವುದು ಬಹುತೇಕ ಖಚಿತ.ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ಸದಾನಂದ ಗೌಡರು ಪಕ್ಷ ತೊರೆಯುವ ಸ್ಥಿತಿಗೆ ಬಂದಿರುವುದು ಬಿಜೆಪಿಯ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+