ಜೈಲಿನಿಂದ ಹೊರಬಿದ್ದ ಓವೈಸಿಗೆ ಭರ್ಜರಿ ಸ್ವಾಗತ
ಅದಿಲಾಬಾದ್, ಫೆ.17: ಕೋಮುಪ್ರಚೋದಕ ಭಾಷಣ, ನಿಂದನೆ ಪ್ರಕರಣ ಎರಡರಲ್ಲೂ ಮುಕ್ತಿ ಪಡೆದಿರುವ ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಜೈಲಿನಿಂದ ಹೊರಬಿದ್ದ ರೀತಿ ಎಲ್ಲರನ್ನು ದಂಗುಬಡಿಸಿತು. ಸುಮಾರು ನಲವತ್ತು ದಿನಗಳ ಜೈಲುವಾಸ ನಂತರ ಹೊರ ಬಂದ ಓವೈಸಿಗಾಗಿ ಬುಲೆಟ್ ಪ್ರೂಫ್ ಕಾರು ಸಿದ್ಧವಾಗಿತ್ತು.
'ನನಗೆ ಯಾರ ಭಯವೂ ಇಲ್ಲ ಎನ್ನುತ್ತಿದ್ದ ಓವೈಸಿಗೂ ಜೀವ ಭಯ ಕಾಡುತ್ತಿದೆಯೇ? ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ಓವೈಸಿಗೆ ದೇಹಾರೋಗ್ಯ ಕಾಡುತ್ತಿದೆಯೇ?ಎಂಬ ಪ್ರಶ್ನೆ ಹಾಗೆ ಮಾಧ್ಯಮಗಳಲ್ಲಿ ತೇಲಿ ಬಂದಿತು. ಓವೈಸಿಗೆ ಭರ್ಜರಿ ಸ್ವಾಗತವನ್ನು ಸಿಕ್ಕಿತು.
ಓವೈಸಿ ಅಭಿಮಾನಿಗಳು, ಮಜ್ಲಿಸ್ ಇ ಇತ್ತೆಹದುಲ್ ಮುಸ್ಲಿಮೀನ್(ಎಂಐಎಂ) ನ ನೂರಾರು ಕಾರ್ಯಕರ್ತರು ಅಕ್ಬರುದ್ದೀನ್ ಓವೈಸಿ ಅವರನ್ನು ಸ್ವಾಗತಿಸಿದರು. ಜನದಟ್ಟಣೆಯನ್ನು ಚದುರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಲಘು ಲಾಠಿ ಚಾರ್ಚ್ ಕೂಡಾ ನಡೆಸಬೇಕಾಯಿತು. ಓವೈಸಿ ಪರ ಘೋಷಣೆಗಳು, ಪಕ್ಷದ ಬಾವುಟಗಳು ಎಲ್ಲೆಡೆ ಕಾಣುತ್ತಿತ್ತು.

ಆಂಧ್ರಪ್ರದೇಶದ ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಶನಿವಾರ(ಫೆ.17) ಕೊನೆಗೂ ಬಿಡುಗಡೆಯಾಗಿದ್ದಾರೆ. ನಿರ್ಮಲ್ ಹಾಗೂ ನಿಜಾಮಾಬಾದ್‌ನಲ್ಲಿನ ಎರಡು ಕೋರ್ಟ್‌ಗಳು ಶುಕ್ರವಾರವಷ್ಟೇ ಒವೈಸಿಗೆ ಜಾಮೀನು ನೀಡಿತ್ತು. ಇದಕ್ಕೂ ಮುನ್ನ 2005ರ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಮೇದಕ್ ಜಿಲ್ಲಾ ನ್ಯಾಯಾಲಯ ಗುರುವಾರ (ಜ.24) ಜಾಮೀನು ಮಂಜೂರು ಮಾಡಿತ್ತು.
ಆಂಧ್ರಪ್ರದೇಶದ ಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಶನಿವಾರ(ಫೆ.17) ಕೊನೆಗೂ ಬಿಡುಗಡೆಯಾಗಿದ್ದಾರೆ. ನಿರ್ಮಲ್ ಹಾಗೂ ನಿಜಾಮಾಬಾದ್‌ನಲ್ಲಿನ ಎರಡು ಕೋರ್ಟ್‌ಗಳು ಶುಕ್ರವಾರವಷ್ಟೇ ಒವೈಸಿಗೆ ಜಾಮೀನು ನೀಡಿತ್ತು. ನಿರ್ಮಲ್ ನಗರ ಪೊಲೀಸ್ ಠಾಣೆಯಲ್ಲಿ ಪಾಸ್ ಪೋರ್ಟ್ ಗಳನ್ನು ನೀಡಬೇಕು ಎಂಬ ಷರತ್ತು ಹಾಕಲಾಗಿತ್ತು. ಇದಕ್ಕೂ ಮುನ್ನ 2005ರ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಮೇದಕ್ ಜಿಲ್ಲಾ ನ್ಯಾಯಾಲಯ ಗುರುವಾರ (ಜ.24) ಜಾಮೀನು ಮಂಜೂರು ಮಾಡಿತ್ತು.
ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತೆ ಭಾಷಣ ಮಾಡಿದ್ದ ಚಂದ್ರಯಾನಗುಟ್ಟ ಶಾಸಕ ಅಕ್ಬರುದ್ದಿನ್ ಓವೈಸಿಯನ್ನು ಜ.8, ಮಂಗಳವಾರ ಬಂಧಿಸಲಾಗಿತ್ತು. ಆದಿಲಾಬಾದ್ ಜೈಲಿನಲ್ಲಿ ಇಡಲಾಗಿತ್ತು. ಓವೈಸಿ ಬಂಧಮುಕ್ತನಾಗುವಂತೆ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಕೂಡ ನಡೆಸಲಾಗುತ್ತು. ಹಲವೆಡೆ ಪ್ರತಿಭಟನೆ ಕೂಡಾ ನಡೆದಿತ್ತು. ನಿರ್ಮಲ್ ಠಾಣೆಯ ಪ್ರಕರಣದ ಜೊತೆಗೆ ನಿಜಾಮಾಬಾದಿನಲ್ಲೂ ಇದೇ ರೀತಿ ಆರೋಪವನ್ನು ಓವೈಸಿ ಎದುರಿಸುತ್ತಿದ್ದರು.
ಸಾಮಾಜಿಕ ಜಾಲ ತಾಣಗಳಲ್ಲಿ ಓವೈಸಿ ಭಾಷಣ ಪ್ರಸಾರವಾದ ಮೇಲೆ ಎಚ್ಚೆತ್ತುಕೊಂಡ ಪೊಲೀಸರು ಕ್ರಮ ಕೈಗೊಂಡಿದರು. ಈ ನಡುವೆ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದ ಓವೈಸಿ, ಜ.7 ರಂದು ಭಾರತಕ್ಕೆ ಮರಳಿದ್ದರು.












Click it and Unblock the Notifications