ಬಿಜೆಪಿ ಭ್ರಮನಿರಸನ: ಕಟ್ಟೆಯೊಡೆದ ಸದಾನಂದರ ದುಃಖ

ಬಿಜೆಪಿ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಂದ ಸದಾನಂದರಿಗೆ ಹೃದಯವೊಡೆದು ಚೂರುಚೂರಾದಂತಿದೆ. 'ಅದೇನೋ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವಂತಲ್ಲಾ ಅದರಲ್ಲಿ ನಾನು ಭಾಗವಹಿಸುವುದಿಲ್ಲ ಹೋಗಿ' ಎಂದು ಸದಾನಂದ ಸಾಹೇಬರು ಮುನಿಸುಕೊಂಡಿದ್ದಾರೆ.
ಉಲ್ಕಾಪಾತದಂತೆ ಎದುರಾದ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸು ಕಾರ್ಯತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಅರಮನೆ ಮೈದಾನದಲ್ಲಿ ಮಂತ್ರಾಲೋಚನೆ ಸಭೆ ಆಯೋಜಿಸಿದೆ. ಆದರೆ ಅದರಲ್ಲಿ ನಾನು ಬಿಲ್ಕುಲ್ ಪಾಲ್ಗೊಳ್ಳುವುದಿಲ್ಲ ಎಂದು ಸದಾನಂದರು ಪ್ರತಿಜ್ಞೆ ಮಾಡಿದ್ದಾರೆ.
ಅಷ್ಟೇ ಅಲ್ಲ ಪಕ್ಷದ ಕೆಲ ನಾಯಕರ ಏಕಪಕ್ಷೀಯ ಧೋರಣೆಯಿಂದ ಬೇಸತ್ತು ಎಂಎಲ್ ಸಿ ಸ್ಥಾನಕ್ಕೂ ಗುಡ್ ಬೈ ಹೇಳೋದಾಗಿ ಬೆದರಿಕೆ ಹಾಕಿದ್ದಾರೆ.
ಯಾಕೆ ಗೌಡರೇ ಇಷ್ಟು ಬೇಗ ಭ್ರನಿರಸನಗೊಂಡಿರಾ? ಎಂದು ಕೇಳಿದರೆ 'ಎಲ್ಲ ಅನಂತಮಯ' ಎಂದು ವೈಯಾಳಿಕಾವಲ್ ಮತ್ತು ಬಸವನಗುಡಿ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ.
ಇನ್ನೂ ಮೊನ್ನೆಮೊನ್ನೆಯೆಂಬಂತೆ ಪಾಪ ಗೌಡರು ಮಾಜಿ ಮುಖ್ಯಮಂತ್ರಿ ಅನ್ನಿಸಿಕೊಂಡ ದಿನ ತಮಗೆ ಸಿಕ್ಕಿದ ಸಹಾನುಭೂತಿಯನ್ನು ಮಿಸ್ಟೇಕ್ ಮಾಡಿಕೊಂಡು, ಬಿಎಸ್ ಯಡಿಯೂರಪ್ಪ ವಿರುದ್ಧ ಹಾರಾಡಿದ್ದನ್ನು ನೋಡಿದರೆ ಸದಾನಂದರಿಗೆ ಇಷ್ಟು ಬೇಗ ಇಂತಹ ಪರಿಸ್ಥಿತಿ ಬರಬಾರದಿತ್ತು. ಅಥವಾ ಬಿಜೆಪಿಯಾದರೂ ಅವರನ್ನು ಹಾಗೆ ನಡೆಸಿಕೊಳ್ಳಬಾರದಿತ್ತು.
ಇನ್ನೇನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸುವ ಬಗ್ಗೆ ಮಾತನಾಡಿರುವಾಗ ಗೌಡರಿಗೆ ಹೀಗಾಗಬಾರದಿತ್ತು. ಅಥವಾ ರಾಜ್ಯ ಬಿಜೆಪಿಯ ಆ ನೂತನ ರಾಜ್ಯಾಧ್ಯಕ್ಷ ತಾವಂತೂ ಅಲ್ಲ ಎಂಬುದರ ಸುಳಿವು ಸಿಕ್ಕಿ ಸದಾನಂದ ಗೌಡರು ಹೀಗೆ ಮನೆ ಬಿಟ್ಟ ಮಗನಂತೆ...












Click it and Unblock the Notifications