ಶಾಸಕಿ, ನಟಿಗೆ ಅಶ್ಲೀಲ SMS: ಚಾಲಕನ ಬಂಧನ

ಬೋವನಪಲ್ಲಿಯ ಬಾಪೂಜಿ ನಗರದ ನಿವಾಸಿ, ಕೆ ಕೃಷ್ಣ (25) ಬಂಧಿತ ವ್ಯಕ್ತಿ. ಈತನನ್ನು ಚಿಲ್ಕಲಗೂಡ ಪೊಲೀಸರು ಬಂಧಿಸಿದ್ದಾರೆ. 2012 ನವೆಂಬರ್‌ನಿಂದ ಕೃಷ್ಣ 57 ಮಂದಿಗೆ ಅಶ್ಲೀಲ ಮತ್ತು ಬೆದರಿಕೆಯ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ಈತನ SMS ಹಾವಳಿಗೆ ಸಿಲುಕಿದವರು ಹಿರಿಯ ತೆಲುಗು ನಟಿ, ಕಾಂಗ್ರೆಸ್ ಶಾಸಕಿ ಡಾ. ಜಯಸುಧಾ ಕಪೂರ್ @ ಸುಜಾತ. 55 ವರ್ಷದ ಹಿರಿಯ ನಟಿ ಜಯಸುಧಾಗೆ ಇಬ್ಬರು ಪುತ್ರರು ಇದ್ದಾರೆ.
ಜಯಸುಧಾ ಅವರಲ್ಲದೆ ಇನ್ನೂ ಕೆಲ ಸಂಪುಟ ಸಚಿವರು, ಶಾಸಕರು ಮತ್ತು ಸರಕಾರಿ ಅಧಿಕಾರಿಗಳು ಸೇರಿದ್ದಾರೆ. ಈ ಹಿಂದೆ ಕೃಷ್ಣ ಸಂಪುಟ ದರ್ಜೆ ಸಚಿವರೊಬ್ಬರ ಬಳಿ ಕೆಲಸ ಮಾಡುತ್ತಿದ್ದ. ಆಗ ಗಣ್ಯ ವ್ಯಕ್ತಿಗಳ ಫೋನ್ ಸಂಖ್ಯೆಗಳನ್ನು ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣನ ವೈವಾಹಿಕ ಜೀವನ ಸರಿಯಾಗಿರಲಿಲ್ಲ ಹಾಗೂ ಆತನ ವಿರುದ್ಧ ಬಾಲನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 498 (ಎ) ಪರಿಚ್ಛೇದದನ್ವಯ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಹೇಳಿದರು.
SMSಗಳನ್ನು ಕಳುಹಿಸುವುದರ ಜತೆಗೆ ಕೃಷ್ಣ ಬೆಳ್ಳಂಬೆಳಗ್ಗೆಯೇ ನಿರಂತರವಾಗಿ ಕರೆಗಳನ್ನು ಮಾಡಿ ಕಿರುಕುಳ ನೀಡುತ್ತಿದ್ದನು. ಸಿಕಂದರಾಬಾದ್ ಶಾಸಕಿ ಜಯಸುಧಾ ಅವರ ಆಪ್ತ ಕಾರ್ಯದರ್ಶಿ ಬಿ ವೆಂಕಟ ಕೃಷ್ಣರಾವ್ ಸಲ್ಲಿಸಿದ ದೂರಿನ ಆಧಾರದಲ್ಲಿ ಚಿಲ್ಕಲಗೂಡ ಪೊಲೀಸ್ ಠಾಣೆಯಲ್ಲಿ ಐಪಿಸಿಯ 507 ಮತ್ತು 509ನೆ ವಿಧಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ನೆ ವಿಧಿಯನ್ವಯ ಕಳೆದ ವಾರ ಪ್ರಕರಣ ದಾಖಲಾಗಿತ್ತು.












Click it and Unblock the Notifications