ಕುಂಭಮೇಳದಲ್ಲಿ ಬೆಂಕಿ ಆಕಸ್ಮಿಕ, ಓರ್ವನ ಸಾವು

ಅಗ್ನಿ ಆಕಸ್ಮಕದಿಂದಾಗಿ ಸುಮಾರು ಇಪ್ಪತ್ತು ಡೇರೆಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕಾಗಮಿಸಿದ ವಿಭಾಗೀಯ ಪೊಲೀಸ್ ಆಯುಕ್ತ ದಿವೇಶ್ ಚರ್ತುರ್ವೇದಿ, ಆಕಸ್ಮಕವಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಶುಕ್ರವಾರ ಕುಂಭಮೇಳದಲ್ಲಿ ಬಸಂತ ಪಂಚಮಿ ದಿನವಾಗಿದ್ದು, ಮೂರನೇ ಶಾಹಿ ಸ್ನಾನಕ್ಕೆ ಕೋಟ್ಯಾಂತರ ಭಕ್ತರು ಆಗಮಿಸಿದ್ದರು.
ಕುಂಭಮೇಳದಲ್ಲಿ ಇದು ಎರಡನೇ ಬೆಂಕಿ ಆಕಸ್ಮಿಕವಾಗಿದ್ದು, ಜ.25ರಂದು ಬೆಂಕಿ ಅವಘಡ ಸಂಭವಿಸಿ 19 ಜನರು ಗಾಯಗೊಂಡಿದ್ದರು. ಅವರಲ್ಲಿ 6 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅಂದು ಕೆಲವು ಸಾಧುಗಳ ಡೇರೆಗಳು ಸುಟ್ಟು ಭಸ್ಮವಾಗಿದ್ದವು. ಆದರೆ, ಯಾವುದೇ ಸಾವುನೋವು ಸಂಭವಿಸಿರಲಿಲ್ಲ.
ಅಲಹಾಬಾದ್ ಕುಂಭಮೇಳದಲ್ಲಿ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಪದೇ ಪದೇ ದುರಂತಗಳು ಸಂಭವಿಸುತ್ತಿವೆ. ಎರಡನೇ ಮಹಾಸ್ನಾನದ ದಿನವಾದ ಫೆ.10 ಶುಕ್ರವಾರರಂದು ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದು, ಕಾಲ್ತುಳಿತ ಸಂಭವಿಸಿ 36 ಜನ ಮೃತಪಟ್ಟಿದ್ದರು. ಜನವರಿ 27ರಿಂದ ಆರಂಭವಾಗಿರುವ ಕುಂಭಮೇಳ 55 ದಿನಗಳ ಕಾಲ ನಡೆಯಲಿದ್ದು, ಮಾರ್ಚ್ 10ರಂದು ಕೊನೆಗೊಳ್ಳಲಿದೆ.












Click it and Unblock the Notifications