ಫೆ.16ರಿಂದ ಅಂಬರ ಚುಂಬನ- ಗಡಿಯಾರ ಗೋಪುರ ನಾದ
ಬೆಂಗಳೂರು, ಫೆ.15: ನಗರದ ಆಕರ್ಷಣೆ ಮತ್ತೊಂದು ಬೃಹತ್ ಸ್ಥಾವರ ಸೇರ್ಪಡೆಯಾಗಿದೆ. ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಇರುವ ಪ್ರದೇಶಗಳಲ್ಲಿ ಒಂದಾದ ಜಯನಗರ ಸೌತ್ ಎಂಡ್ ಸರ್ಕಲ್ ನಲ್ಲಿ ಅತಿ ದೊಡ್ಡ ಗಡಿಯಾರ ಗೋಪುರ ತಲೆ ಎತ್ತಿ ನಿಂತಿದೆ.
ಆರು ರಸ್ತೆಗಳು ಕೂಡುವ ಈ ವೃತ್ತದ ನಡುವೆ ಖಾಲಿಯಾಗಿದ್ದ ಈ ಅನುಪಯುಕ್ತ ಜಾಗವನ್ನೇ ಬಳಸಿಕೊಂಡು ಬೃಹತ್ ಗಡಿಯಾರ ಗೋಪುರ ನಿರ್ಮಿಸುವ ಕನಸು ಹೊತ್ತಿದ್ದ ಬಿಬಿಎಂಪಿ ಸದಸ್ಯ ಎನ್.ಆರ್. ರಮೇಶ್ ಅವರ ಪ್ರಯತ್ನ ಸಾರ್ಥಕವಾಗಿದೆ. ಶನಿವಾರ (ಫೆ.16) ಬೆಳಗ್ಗೆ 9.30ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಉದ್ಘಾಟನೆ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
ಮುಖ್ಯ ಅತಿಥಿ: ಕೆಎಸ್ ಈಶ್ವರಪ್ಪ
ಉಪಸ್ಥಿತಿ: ಮೇಯರ್ ಡಿ ವೆಂಕಟೇಶ್ ಮೂರ್ತಿ
* ಅನಂತ ಕುಮಾರ್ ಸಂಸದರು
* ಎನ್.ಆರ್ ರಮೇಶ್, ಪಾಲಿಕೆ ಸದಸ್ಯರು
ಸ್ಥಳ: ಸೌತ್ ಎಂಡ್ ಸರ್ಕಲ್, ವಾರ್ಡ್ 167, ಯಡಿಯೂರು, ಬೆಂಗಳೂರು
ಮೆಟ್ರೋ ರೈಲು ಸೇತುವೆ, ಸಂಸದ ಅನಂತ್ ಕುಮಾರ್ ಕಚೇರಿ, ಹಿಂಬದಿಯಲ್ಲಿ ದಕ್ಷಿಣ ವಲಯ ಡಿಸಿಪಿ ಕಚೇರಿ ಜೊತೆ ಕಾಣ ಸಿಗುವ ಈ ಅಂಬರ ಚುಂಬನ 2011ರ ಏಪ್ರಿಲ್ ನಲ್ಲೇ ಉದ್ಘಾಟನೆಗೊಳ್ಳಬೇಕಿತ್ತು. ಸುಮಾರು 45 ಲಕ್ಷ ಇದ್ದ ಯೋಜನಾ ವೆಚ್ಚ ಈಗ ದ್ವಿಗುಣಗೊಂಡಿದೆ. ಗಡಿಯಾರ ಗೋಪುರ ಇರುವ ಜಾಗದಲ್ಲಿ ಸಣ್ಣ ಪಾರ್ಕ್, ಸುತ್ತ ಗಿಡಗಳು, ಬೆಂಚು ಎಲ್ಲವೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಎನ್ ಆರ್ ರಮೇಶ್ ಹೇಳಿದ್ದಾರೆ.
ಮೆಟ್ರೋಗಾಗಿ ಮರ ಉರುಳಿಸುವ ಕಾರ್ಯದಲ್ಲಿ ಇದೇ ತ್ರಿಕೋನ ಆಕಾರದ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ಇದ್ದ ಬೃಹತ್ ಮರವೊಂದು ಧರೆಗುಳಿತ್ತು. ಸ್ಥಳೀಯ ನಿವಾಸಿಗಳು, ಪರಿಸರವಾದಿಗಳು ಭಾರಿ ಪ್ರತಿಭಟನೆ ತೋರಿದ್ದರು.
ಇನ್ಮುಂದೆ ಗಂಟೆಗೊಮ್ಮೆ ವಿಶಿಷ್ಟ ರೀತಿಯಲ್ಲಿ ಘಂಟಾನಾದ ಹಾಗೂ ಶಂಖದ ಮಾರ್ದನಿ ಹೊರಡಿಸುವ ಈ ಅಂಬರ ಚುಂಬನ(ಗಡಿಯಾರ ಗೋಪುರ)ದ ಬಗ್ಗೆ ಮುಂದೆ ಓದಿ

ಅಂಬರ ಚುಂಬನ ಶಂಖನಾದ
ಈ ಅಂಬರ ಚುಂಬನದಲ್ಲಿ ಮೂರು ಮಾದರಿಯ ಅಂಕಿಯುಳ್ಳ ಬೃಹತ್ ಗಡಿಯಾರಗಳಿದ್ದು, ಇದರಿಂದ ಗಂಟೆಗೊಮ್ಮೆ 20 ಸೆಕೆಂಡ್ ವರೆಗೂ ಪಾಂಚಜನ್ಯದ ಶಬಟಛಿ ಕರ್ಣಾಮೃತಗೊಳಿಸಲಿದೆ. ನಿತ್ಯದ ಬದುಕಿಗೆ ಚೈತನ್ಯ ತುಂಬುವ ಈ ಪಾಂಚಜನ್ಯದ ಮಾರ್ದನಿಯೊಂದಿಗೆ ಸಮಯಕ್ಕೆ ತಕ್ಕಂತೆ ಗಂಟೆ ಬಾರಿಸಲಿದೆ. ಜತೆಗೆ ಗಡಿಯಾರದ ಗಾಜಿನೊಳಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಆಯಾ ವಾರಗಳಿಗೆ ಹೇಳಿರುವ ಏಳು ಬಣ್ಣಗಳು ಮಿಂಚಲಿವೆ.

ಅಂಬರ ಚುಂಬನ ರುವಾರಿ ರಮೇಶ್
ಯೂರೋಪ್‌ನ ಸ್ವೀಡನ್‌ನಲ್ಲಿ ಪ್ರಥಮ ಬಾರಿಗೆ 2 ಸ್ತಂಭಗಳಿಂದ ಕೂಡಿದ 48 ಅಡಿ ಎತ್ತರದ 7 ಅಡಿ ವ್ಯಾಸವುಳ್ಳ ಒಂದು ಗಡಿಯಾರದ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದೀಗ ಸ್ವೀಡನ್‌ನ ಗಡಿಯಾರವನ್ನೂ ಮೀರಿಸುವ ಮಟ್ಟಕ್ಕೆ ಬೆಂಗಳೂರಿನ ಸೌತ್‌ಎಂಡ್ ವೃತ್ತದಲ್ಲಿ ಮೂರು ಗಡಿಯಾರವುಳ್ಳ ಅಂಬರ ಚುಂಬನ ಗೋಪುರ ತಲೆ ಎತ್ತಿದೆ. ಭೂಮಿಯಿಂದ 61 ಅಡಿ ಎತ್ತರ, ಮೂರು ಕಾಲುಳ್ಳ ಸ್ತಂಭಗಳು, 8.2 ಅಡಿ ವ್ಯಾಸದ ಮೂರು ಗಡಿಯಾರಗಳಿದೆ

ಅಂಬರ ಚುಂಬನ ರುವಾರಿ ರಮೇಶ್
ಸೌರಶಕ್ತಿ ಚಾಲಿತ ಗಡಿಯಾರ: ಇದರ ಮತ್ತೊಂದು ವಿಶಿಷ್ಟತೆ ಎಂದರೆ, ಇದು ಸಂಪೂರ್ಣ ಹಾಸನ ಗ್ರೀನ್ ಗ್ರಾನೆಟ್‌ನಿಂದ ಕೂಡಿದ್ದು, ಮೈಕ್ರೋ ಕಂಟ್ರೋಲರ್ ಸಾಫ್ಟ್ ವೇರ್ ಟೆಕ್ನಾಲಜಿ ಅಳವಡಿಸಲಾಗಿದೆ. ಮೂರು ಗಡಿಯಾರಗಳು ಸಹ ಸೌರಶಕ್ತಿಯಿಂದ ಕಾರ್ಯ ನಿರ್ವಹಿಸುತ್ತದೆ. ಒಟ್ಟಾರೆ 90 ಲಕ್ಷ ರೂ. ವೆಚ್ಚದಲ್ಲಿ ಈ ಭವ್ಯಗೋಪುರ ತಲೆಎತ್ತಿದೆ

ಅಂಬರ ಚುಂಬನ ರುವಾರಿ ರಮೇಶ್
ಪಾಂಚಜನ್ಯ, ಗಂಟೆ ನಾದ: ಮುಂಜಾನೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಅಂಬರ ಚುಂಬನ ಕಾರ್ಯನಿರ್ವಹಿಸಲಿದೆ. ಪ್ರತಿ ಗಂಟೆಯಾದ ಕೂಡಲೇ 20 ಸೆಕೆಂಡ್‌ವರೆಗೂ ಶಂಖ ನಾದ ಮೊಳಗುತ್ತದೆ. ಬಳಿಕ 1 ಗಂಟೆಗೆ ಒಂದು ಬಾರಿ ಗಂಟೆ ನಾದ, 2 ಗಂಟೆಗೆ ಎರಡು ಬಾರಿ ಗಂಟೆ ನಾದ ಬಾರಿಸುವ ಮೂಲಕ ಆಯಾ ಗಂಟೆಗೆ ತಕ್ಕಂತೆ ಗಂಟೆಯ ನಾದ ಮೊಳಗಲಿದೆ. ಇದು ಸುಮಾರು 3 ಕಿ.ಮೀಟರ್ ವ್ಯಾಸದ ಅಳತೆಗೆ ಕೇಳಿಸಲಿದ್ದು, ಕಿವಿಗೆ ಮುದ ನೀಡಲಿದೆ. photo courtesy: suraj.shekar

ಅಂಬರ ಚುಂಬನ ರುವಾರಿ ರಮೇಶ್
ವಾರ ಹೇಳಲಿದೆ ಬಣ್ಣ :ಕನ್ನಡ, ರೋಮನ್ ಮತ್ತು ಅರೇಬಿಕ್ ಭಾಷೆಯ ಅಂಕಿಗಳಿಂದ ಒಳಗೊಂಡಿರುವ ಪ್ರತಿಗಡಿಯಾರಕ್ಕೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಡಿಯಾರಕ್ಕೆ ಬಣ್ಣದ ಬೆಳಕು ಅಳವಡಿಸಲಾಗಿದೆ.
ಸೋಮವಾರ ಬಿಳಿ ಬಣ್ಣ, ಮಂಗಳವಾರ-ಕೆಂಪು, ಬುಧವಾರ-ಹಸಿರು, ಗುರುವಾರ-ಹಳದಿ, ಶುಕ್ರವಾರ -ತಿಳಿ ನೀಲಿ, ಶನಿವಾರ-ಕಾಡ ನೀಲಿ ಹಾಗೂ ಭಾನುವಾರ ಗುಲಾಬಿ ಬಣ್ಣದ ಬೆಳಕು ಹೊರ ಸೂಸಲಿದೆ. ಪ್ರತಿ ದಿನ ಆಯಾ ದಿನಕ್ಕೆ ತಕ್ಕಂತೆ ಗಡಿಯಾರ ತನ್ನ ಮೈ ಬಣ್ಣ ಬದಲಾಯಿಸಿಕೊಳ್ಳುತ್ತದೆ.












Click it and Unblock the Notifications