ಸಲಾಯಾ ಮುಸ್ಲಿಮರು ಮೋದಿಗೆ ಒಲಿದಿದ್ದು ಏಕೆ, ಹೇಗೆ?
ಅಹಮದಾಬಾದ್, ಫೆ.14: 'ಮೋದಿ ನಾಡಿನಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಗೆಲುವೋ ಗೆಲುವು' ಅಂದಿದ್ದಕ್ಕೆ ದಟ್ಸ್ ಕನ್ನಡ ವಾಚಕರು 'ಸಿಕ್ಕಾಪಟ್ಟೆ ಇಷ್ಟಪಟ್ಟೆ' ಎಂದಿದ್ದಾರೆ. ಜತೆಗೆ ಸಿಕ್ಕಾಪಟ್ಟೆ pun ಸಹ ಮಾಡಿದ್ದಾರೆ. ಆದರೆ ವಿಷಯ ಅದಲ್ಲ. so-called ಕೋಮುವಾದಿ ಮೋದಿಗೆ ಮುಸ್ಲಿಮರು ಒಲಿದಿದ್ದಾರೂ ಹೇಗೆ ಎಂಬುದು. ಐದು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿ ಬೆಂದಿರುವ ಕರ್ನಾಟಕ ಜನ, ಮೋದಿ ಅಭಿವೃದ್ಧಿ ಮಂತ್ರ ಹೇಗಿದೆ ಎಂಬುದನ್ನು ಕೇಳಿಸಿಕೊಳ್ಳುವುದು ಒಳಿತು.
ಬಂದರು ಪ್ರದೇಶವಾದ ಸಲಾಯಾ ಪಟ್ಟಣದಲ್ಲಿ ಜನರ ಬದುಕನ್ನು ಹಸನು ಮಾಡಲು ಒಂದು ಎಸ್ಸಾರ್ ಕಂಪನಿಯ ಒಂದು ಬಹುದೊಡ್ಡ ವಿದ್ಯುತ್ ಯೋಜನೆ ಸಾಕು. ಆದರೆ ಈ ಮೋದಿ ಅಷ್ಟಕ್ಕೇ ತೃಪ್ತಿ ಪಡದೆ ಏನೆಲ್ಲಾ ಮಾಡಿದ್ದಾರೋ ನೋಡಿ...

ಈ Essar Energy Comopanyದು ಈಗಾಗಲೇ 1.1 ಶತಕೋಟಿ ಡಾಲರ್ ವೆಚ್ಚದ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ ಕಾರ್ಯಗತವಾಗಿದೆ. ಸದ್ಯದಲ್ಲೇ ಇದು 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವಷ್ಟು ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ. ಮತ್ತು ಅಷ್ಟೂ ವಿದ್ಯುತ್ ಗುಜರಾತ್ ರಾಜ್ಯಕ್ಕೇ ಬಳುವಳಿ. ಈ ಎಸ್ಸಾರ್ ಕಂಪನಿ ಸ್ಥಳೀಯರ ಕ್ಷೇಮಾಭ್ಯುದಯಕ್ಕೆ ಅನೇಕ ಸಾಮಾಜಿಕ ಯೋಜನೆಗಳನ್ನು ಕಾರ್ಯಗತಗೊಳಿಸಿದೆ.
ಸದ್ಯದಲ್ಲೇ ವಿಶ್ವ ದರ್ಜೆಯ ಬಂದರು ಮೂಲಸೌಕರ್ಯ ಇಲ್ಲಿ ಅಭಿವೃದ್ಧಿಗೊಳ್ಳಲಿದ್ದು, 20 MMTPA ಕಾರ್ಗೊ ಬಟವಾಡೆಗೆ ಸಿದ್ಧವಾಗಲಿದೆ. ಕಲುಭಾರ್ ತಪು ಮತ್ತು ಧಾನಿ ಬೆ ದ್ವೀಪಗಳು ನಿಸರ್ಗಸಹಜವಾಗಿ ಸಲಾಯಾ ಬಂದರು ಪ್ರದೇಶಕ್ಕೆ ಆಧಾರವಾಗಿದೆ.
ಮನೆಯಲ್ಲಿ ಕುಳಿತು ಸುಮ್ಮನೆ ಕಾಲಹರಣ ಮಾಡುವುದು ಬೇಡವೆಂದು ಇಲ್ಲಿನ ಮಹಿಳೆಯರಿಗೂ ಜೀವನೋಪಾಯ ಕಲಿಸಲಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಬಟ್ಟೆ ಹೊಲೆಯುವುದನ್ನು ಕಲಿಸಲಾಗಿದೆ. ಇದರಿಂದ ವಾಗೇರ್ ಮುಸ್ಲಿಂ ಸಮುದಾಯವಾದ ಜಮಾತ್ ಗೆ ಹೇಳತೀರದಷ್ಟು ಆನಂದವಾಗಿದೆ.
ಇನ್ನು ರಾಜಕೀಯವಾಗಿಯೂ ಅಷ್ಟೇ ಮೊನ್ನೆ ಜಯಭೇರಿ ಬಾರಿಸಿದ ಅನೇಕ ಮುಸ್ಲಿಂ ಪುರಸಭೆ ಸದಸ್ಯರು ಈ ಹಿಂದೆಯೂ ರಾಜಕೀಯ ಮಾಡಿದವರೇ. ಕಾಂಗ್ರೆಸ್ಸು, ಸಮತಾ ಪಾರ್ಟಿ ಅದೂ ಇದೂ ಅಂತ. ಆದರೆ ಬಿಜೆಪಿ ಅವರ ರಾಜಕೀಯ ದಿಕ್ಕನ್ನೇ ಬದಲಿಸಿದೆ.
ದಶಕಗಳಿಂದ ಅಭಿವೃದ್ಧಿ ಕಾಣದೆ ಕುಳಿತಿದ್ದ ಇಲ್ಲಿನ ಮುಸ್ಲಿಮರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಏನಂದರೆ 'ಮೋದಿ ಅಂದರೆ ಅಭಿವೃದ್ಧಿ, ಅಷ್ಟೇ'. 33,000 ಜನರಿರುವ ಈ ಮುಸ್ಲಿಂ ಪುರ ದಶಕಗಳ ಹಿಂದೆ ಬಂದರು ಪ್ರದೇಶದ ದುರ್ಲಾಭ ಪಡೆದು ಕಳ್ಳಸಾಗಣೆಗೆ ಕುಖ್ಯಾತಿ ಪಡೆದಿತ್ತು. ಸರಿಯಾದ ರಸ್ತೆಗಳಿಲ್ಲದ, ಕಣ್ಣುಗುರುಡಿನ ವಿದ್ಯುತ್ ಕಣ್ಣಾಮುಚ್ಚಾಲೆಯಲ್ಲಿ ಭಯೋತ್ಪಾದನೆ ನಿಗ್ರಹ ದಳವಷ್ಟೇ ಇಲ್ಲಿ ಅಡ್ಡಾಡುತ್ತಿತ್ತು.
ಈಗ ಸಿಮೆಂಟ್ ರಸ್ತೆಗಳು, ನಿರಂತರ ವಿದ್ಯುತ್ ಬಂದರು ಉದ್ಯಮದಲ್ಲಿ ಸಲಾಯಾ ಪಟ್ಟಣಕ್ಕೆ ವಿಶೇಷ ಸ್ಥಾನಮಾನ ಗಳಿಸಿಕೊಟ್ಟಿದೆ. 'ಅಭಿವೃದ್ಧಿ, ಮೂಲಸೌಕರ್ಯ ಕಲ್ಪಿಸುವುದು ನನ್ನ ಜವಾಬ್ದಾರಿ ದುಡಿದು ಬದುಕುಕಟ್ಟಿಕೊಳ್ಳಿ' ಎಂದು ಮೋದಿ ಸ್ಥಳೀಯರಿಗೆ ಸೂಕ್ಷ್ಮವಾಗಿ ಹೇಳಿದ್ದಾರೆ.
ಗುಜರಾತಿನಲ್ಲಿ ಇದು ಒಂದು ಸಲಾಯಾದ ಕಥೆ. ಇಂಥದ್ದು ಇನ್ನೂ ಎಷ್ಟೋ ಇವೆ. 'ಅಯ್ಯೋ ಅದೆಲ್ಲಾ ಯಾಕೆ ಹೇಳ್ತೀರಿ ಬಿಡಿ. ನಮ್ಮ ಕರ್ನಾಟಕ ಕಳೆದೈದೇ ವರ್ಷಗಳಲ್ಲಿ ಶತಮಾನಗಳಷ್ಟು ಹಿಂದೆಬಿದ್ದಿದೆ' ಎಂದು ಯಾರೋ ಪಿಸುಗುಟ್ಟುತ್ತಿರುವಂತಿದೆ.












Click it and Unblock the Notifications