ಕಾಂಗ್ರೆಸ್‌ಗೆ ಶಿವರಾಮೇಗೌಡ, ನರೇಂದ್ರ ಸ್ವಾಮಿ?

ಬಿಜೆಪಿ ನಾಯಕ ಮಾಜಿ ಸಚಿವ ಎಲ್.ಆರ್.ಶಿವರಾಮೇಗೌಡ ಮತ್ತು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ (ಪಕ್ಷೇತರ) ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿವೆ. ಮುಂದಿನ ವಾರದಲ್ಲಿ ಈ ಇಬ್ಬರು ನಾಯಕರು ಕೈ' ಹಿಡಿಯಲು ತಯಾರಿ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಬಿಜೆಪಿಯೊಳಗಿನ ಆಂತರಿಕ ಕಚ್ಚಾಟಗಳಿಂದ ಬೇಸತ್ತು ಕಾಂಗ್ರೆಸ್ ಕದ ತಟ್ಟುತ್ತಿರುವ ಶಿವರಾಮೇ ಗೌಡರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಎರಡು ದಿನಗಳ ಹಿಂದೆ ಫೆ.12ರಂದು ನಗರದ ಏಟ್ರಿಯಾ ಹೋಟೆಲ್ ನಲ್ಲಿ ನಡೆದ ಮಂಡ್ಯ, ಮೈಸೂರು ಭಾಗದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಗೌಡರು ಭಾಗವಹಿಸಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಿರಿಯ ಮುಖಂಡ ಅಂಬರೀಶ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಂತಾದವರು ಶಿವರಾಮೇಗೌಡರ ಮತ್ತು ನರೇಂದ್ರ ಸ್ವಾಮಿ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಶಿವರಾಮೇಗೌಡರು ಕಾಂಗ್ರೆಸ್ ಗೆ ಬಂದರೆ, ಅಂಬರೀಶ್ ಮಂಡ್ಯ ಅಥವ ಶ್ರೀರಂಗಪಟ್ಟಣದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದು, ಎಲ್.ಆರ್.ಶಿವರಾಮೇಗೌಡ ಮಂಡ್ಯದಿಂದ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.












Click it and Unblock the Notifications