ಜಾರಕಿಹೊಳಿ ಟೀಂ ಕಾಂಗೈಗೆ: ಅಂಬಿ ಪೌರೋಹಿತ್ಯ

ಹೀಗೆ ಕಾಂಗ್ರೆಸ್ಸಿಗೆ ಹಾರುವಾಗ ಜತೆಗಿರಲಿ ಎಂದು ತಮ್ಮ ನಿಷ್ಠಾವಂತ ಶಾಸಕರನ್ನು (10 ಮಂದಿ) ಮತ್ತು ಆರಂಭದಿಂದಲೂ ತಮಗೆ ನಿಷ್ಠರಾಗಿರುವ 5 ಮಂದಿ ಪಕ್ಷೇತರ ಶಾಸಕರನ್ನು ಕಾಂಗ್ರೆಸ್ ಅಂಗಳಕ್ಕೆ ಕರತೆದೊಯ್ಯಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಪಕ್ಷೇತರರು ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬಯಸಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಅವರಿಗೆಲ್ಲಾ ಟಿಕೆಟ್ ಕೊಡಿಸುವ ಭರವಸೆ ನೀಡಲಾಗಿದೆ. ಈ ಐದೂ ಮಂದಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗುವುದಕ್ಕೆ ಜಾರಕಿಹೊಳಿ ಜತೆಗೆ ಮಾಜಿ ಸಂಸದ, ಹಿರಿಯ ನಟ ಅಂಬರೀಷ್ ಪೌರೋಹಿತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜಾರಕಿಹೊಳಿ ಟೀಮಿನಿಂದ 11 ಮಂದಿ, 5 ಪಕ್ಷೇತರರು ಅಲ್ಲದೆ ಇನ್ನೂ ಹಲವಾರು ಬಿಜೆಪಿ ಶಾಸಕರು ಟಿಕೆಟ್ ಬಯಸಿ, ಕಾಂಗ್ರೆಸ್ ಕೈಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಅವರ ಸಂಖ್ಯೆ 16ರಷ್ಟಿದೆ. ಇವರು ಬಜೆಟ್ ಅಧಿವೇಶನ ಮುಕ್ತಾಯ ಆಗುವುದಕ್ಕೇ ಕಾಯುತ್ತಿದ್ದಾರೆ. ಆದಾದ ನಂತರ ತಮ್ಮ ರಾಜಕೀಯ ನಡೆ ಏನೋ ಎಂಥೋ ಎಂಬಂತಿದ್ದಾರೆ.
ಹಾಗಾಗಿ, ಕಾಂಗ್ರೆಸ್ ಸಹ ಇವರೆಲ್ಲ ತಮ್ಮ 'ಕೈ'ತಪ್ಪುವುದು ಬೇಡವೆಂಬುದು ಕಾಂಗ್ರೆಸ್ಸಿನ ಎಣಿಕೆಯೂ ಆಗಿದೆ. ಈ ಸಂಬಂಧ ಸಕಾಲಿಕ ನಿರ್ಧಾರ ತೆಗೆದುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರು ಕಾಂಗ್ರೆಸ್ ಸೇರುವವರ ಪಟ್ಟಿಯಲ್ಲಿ ಕೈಯಲ್ಲಿ ಹಿಡಿದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿಗಾಗಿ (ಫೆ. 15ರಂದು) ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications