ಯಡಿಯೂರಪ್ಪನ್ನೇ ಅನರ್ಹಗೊಳ್ಸಿ: ಪದ್ಮನಾಭ ಪ್ರಸನ್ನ

'ತಾನು ಕೆಜೆಪಿಯನ್ನು ಯಡಿಯೂರಪ್ಪ ಹೆಸರಿಗೆ ಬರೆದುಕೊಟ್ಟಿದ್ದೇನೆ' ಎಂಬ ಒಕ್ಕಣೆಯಿರುವ ದಾಖಲೆಗಳಿಗೆ ತಮ್ಮ ನಕಲಿ ಸಹಿ ಹಾಕಿ ಯಡಿಯೂರಪ್ಪ ಮತ್ತು ಧನಂಜಯ ಕುಮಾರ್ ಅವರುಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಸಹಿ ಹಾಕಿದ ದಿನ ತಾವು ಬೆಂಗಳೂರಿನಲ್ಲೆ ಇರಲಿಲ್ಲ. ಚೆನ್ನೈನಲ್ಲಿದೆ. ಅದೇ ರೀತಿ ನಕಲಿ ಸಹಿ ಹಾಕಿ, ಮೋಸ ಮಾಡಿರುವ ಬಗ್ಗೆ ಅವರ ವಿರುದ್ಧ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿಯೂ ದೂರು ದಾಖಲಿಸಲಾಗುವುದು ಎಂದು ಪ್ರಸನ್ನ ಕುಮಾರ್ ಹೇಳಿಕೊಂಡಿದ್ದಾರೆ.
ಪದ್ಮನಾಭ ಬಾಂಬ್: ತಮ್ಮ ವಿರುದ್ಧ ಕ್ಷುಲ್ಲಕವಾಗಿ ಮಾತನಾಡಿದ ಮತ್ತು (ಕೆಜೆಪಿ) ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕಾಗಿ ವಿ. ಧನಂಜಯ್ ಕುಮಾರ್ ಅವರನ್ನು ಫೆ. 4ರಂದು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪದ್ಮನಾಭ ಪ್ರಸನ್ನ ಇದೇ ವೇಳೆ ಪ್ರಕಟಿಸಿದ್ದಾರೆ.
ಯಡಿಯೂರಪ್ಪ ಮತ್ತು ಧನಂಜಯ್ ಕುಮಾರ್‌ರಿಗೆ ಕೆಜೆಪಿಯಲ್ಲಿ ಯಾವುದೇ ಸ್ಥಾನವಿಲ್ಲ, ಈಶ್ವರಪ್ಪನವರೇ, ಇವರಿಬ್ಬರನ್ನು ಮರಳಿ ಬಿಜೆಪಿಗೆ ಸೇರಿಸಿ ಒಳ್ಳೆಯ ಹುದ್ದೆ ನೀಡಿ ಎಂದೂ ಪ್ರಸನ್ನ ಸಲಹೆ ನೀಡಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಪುತ್ರರಿಂದ ತಮಗೆ ಜೀವ ಬೆದರಿಕೆಯಿದ್ದು ರಕ್ಷಣೆ ನೀಡಬೇಕು ಎಂದು ಮಂಗಳವಾರ ರಾಷ್ಟ್ರಪತಿ, ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಅವರು ತಿಳಿಸಿದರು.












Click it and Unblock the Notifications