ಕಾವೇರಿ ಹರಿಸಿದರೆ, ರಕ್ತಕ್ರಾಂತಿಯಾಗುತ್ತದೆ ಎಚ್ಚರ

Cauvery Basin Mandya is tense
ಮಂಡ್ಯ, ಫೆ.8: ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕದ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿದರೆ ರಕ್ತಕ್ರಾಂತಿ ಮಾಡಬೇಕಾಗುತ್ತದೆ ಎಂದು ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣ ಸೇರಿದಂತೆ ಕೆಲವು ಕಡೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.

ರಾಜ್ಯದ ಜನತೆಯ ತಾಳ್ಮೆಗೂ ಒಂದು ಮಿತಿ ಇದೆ.ಒಂದು ಹಂತದವರೆಗೆ ಮಾತ್ರ ಅನ್ಯಾಯವನ್ನು ಸಹಿಸಲು ಸಾಧ್ಯ. ಅದನ್ನು ಮೀರಿದರೆ ಜನರು ಉಘ್ರ ಹೋರಾಟಕ್ಕೆ ಮುಂದಾಗುತ್ತಾರೆ ಎಂದರು.

ವಾಸ್ತವತೆ ಇಲ್ಲದ ತೀರ್ಪು ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳಿಗೆ ತಜ್ಞರ ತಂಡವನ್ನು ಕಳುಹಿಸಿ ನೀರಿನ ಪರಿಸ್ಥಿತಿಯ ವಾಸ್ತವಾಂಶವನ್ನು ತಿಳಿದು ತೀರ್ಪು ಪ್ರಕಟಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ 2.44 ಟಿಎಂಸಿ ನೀರು ಹರಿಸಲು ಆದೇಶಿಸಿದರೆ ನೀರನ್ನು ಎಲ್ಲಿಂದ ತರಲು ಸಾಧ್ಯ ಎಂದು ಪುಟ್ಟಣ್ಣಯ್ಯ ಪ್ರಶ್ನಿಸಿದರು.

ತಮಿಳುನಾಡಿನ ಸಾಂಬಾ ಬೆಳೆಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ನೀರಿಲ್ಲದೆ ಸಾಂಬಾ ಬೆಳೆ ನಷ್ಟವಾದರೆ ತಮಿಳುನಾಡು ಸರ್ಕಾರ ರೈತರಿಗೆ ಪರಿಹಾರ ಕೊಡಬೇಕು. ಅದಕ್ಕೆ ಕರ್ನಾಟಕವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದರು. ಈಗಾಗಲೇ ತಮಿಳುನಾಡಿಗೆ 20 ರಿಂದ 25 ಟಿಎಂಸಿ ನೀರನ್ನು ಹರಿಸಿದ್ದೇವೆ. ಇದರಿಂದ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶದಲ್ಲಿ 6 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. 18 ಲಕ್ಷ ಜನರು ಜೀವನ ಭದ್ರತೆ ಕಳೆದುಕೊಂಡಿದ್ದಾರೆ.

ತಮಿಳುನಾಡಿಗೆ ನಮಗೆ ಆಗಿರುವ ನಷ್ಟವನ್ನು ತಮಿಳುನಾಡಿನಿಂದ ಪರಿಹಾರ ಕೇಳಲು ಸಾಧ್ಯವೇ ಎಂದರು. ಕಾವೇರಿ ನ್ಯಾಯಮಂಡಳಿ ರಚನೆಯಾಗಿ ತಮಿಳುನಾಡಿಗೆ 205 ಟಿಎಂಸಿ ನೀರು ಹರಿಸುವಂತೆ ತೀರ್ಪು ನೀಡಿದಾಗಲೇ ರಾಜ್ಯದ ಪಾಲಿನ ಮರಣಶಾಸನ ಬರೆದಿದ್ದಾಗಿದೆ. ಅದನ್ನು ಹೊಸದಾಗಿ ಬರೆಯುವ ಅಗತ್ಯವಿಲ್ಲ ಎಂದರು.

ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ 2.44 ಟಿ.ಎಂ.ಸಿ. ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ವಿರೋಧಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಹಾಗೂ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಜಮಾಯಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ, ನ್ಯಾಯಾಲಯದ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಾಸ್ತವ ಸ್ಥಿತಿಯನ್ನು ಅವಲೋಕಿಸಿದೆ ಕೇವಲ ಒಂದು ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್‌ನ ಅವೈಜ್ಞಾನಿಕ ತೀರ್ಪು ನೀಡುವುದರಿಂದ ಜನತೆಗೆ ನ್ಯಾಯಾಲಯಗಳ ಮೇಲಿನ ಗೌರವ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕಡಿಮೆ ಇದೆ. ಈಗಾಗಲೇ ಕೆಲ ಜಲಾಶಯಗಳಲ್ಲಿ ಡೆಡ್ ಸ್ಟೋರೇಜ್‌ಗೆ ಸಂಗ್ರಹ ಇಳಿದಿದೆ. ಇನ್ನು ಒಂದು ತಿಂಗಳಿಗೆ ಮಾತ್ರ ಸಾಕಾಗುವಷ್ಟು ಕುಡಿಯುವ ನೀರಿದೆ. ಅದನ್ನು ಬಿಡುವಂತೆ ನ್ಯಾಯಾಲಯ ಆದೇಶ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ನ್ಯಾಯಾಲಯಗಳು ಆದೇಶ ನೀಡುವ ಮುನ್ನ ವಸ್ತು ಸ್ಥಿತಿಯನ್ನು ಅರಿಯುವಂತಹ ಪ್ರಯತ್ನ ಮಾಡಬೇಕು. ನಿಟ್ಟನಲ್ಲಿ ರಾಜ್ಯಕ್ಕೂ ತಂಡವನ್ನು
ಕಳುಹಿಸಿ ಅಧ್ಯಯನ ಮಾಡಬೇಕೆಂದು ಆಗ್ರಹಿಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವಾಸಿಗರಿಗೆ ಸೂಚನೆ ಕಾವೇರಿ ಕೊಳ್ಳದ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ವೀಕೆಂಡ್ ಮೋಜಿಗಾಗಿ ಮೈಸೂರು ಕಡೆ ತೆರಳುವವರು ಬೇರೆ ಮಾರ್ಗ ಹಿಡಿಯುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+