ಕುಂಭಮೇಳದಲ್ಲಿ ಅಮರ್ ಸಿಂಗ್ ಪುಣ್ಯ ಸ್ನಾನ

ಅಲಹಾಬಾದ್, ಫೆ.7: ಹಿಂದೂ ಭಕ್ತಾದಿಗಳ ಪವಿತ್ರ ಮೇಳವಾದ ಮಹಾ ಕುಂಭ ಮೇಳ 2013 ನಿಧಾನವಾಗಿ ರಾಜಕೀಯ ಪಕ್ಷಗಳ ಮೇಳವಾಗಿ ಪರಿವರ್ತನೆಗೊಳ್ಳತೊಡಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ಭೇಟಿ ನಂತರ ಗುಜರಾತ್ ಸಿಎಂ ನರೇಂದ್ರ ಮೋದಿ ಆಗಮನಕ್ಕೆ ವೇದಿಕೆ ಸಜ್ಜಾಗಿದೆ.

ಗುರುವಾರ (ಫೆ.7) ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಅವರು ಸಂಗಮದಲ್ಲಿ ಮುಳುಗೆದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಜೆಪಿಯ ಅಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಫೆ.12 ಅಥವಾ ಫೆ.14ರ ನಂತರ ಅಲಹಾಬಾದಿಗೆ ಬರುವ ಸಾಧ್ಯತೆಯಿದೆ.

ಈ ನಡುವೆ ಗುರುವಾರದ ಧರ್ಮ ಸಂಸದ್ ನ ಮೂಲಕ ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ತನ್ನ ಚುನಾವಣ ಅಭಿಯಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.ಕುಂಭಮೇಳಕ್ಕೆ ನಟ ನಟಿಯರಲ್ಲದೆ, ಗಣ್ಯಾತಿಗಣ್ಯರು ಭೇಟಿ ನೀಡುವುದು ವಿಶೇಷ ಸಂಗತಿಯಲ್ಲ. ಇದಕ್ಕೆ ಯಾರೂ ಅಡ್ಡಿಪಡಿಸಲಾರರು.

ಆದರೆ, ಧಾರ್ಮಿಕ ಮೇಳದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದು, ರಾಜಕೀಯ ವೇದಿಕೆಯಾಗಿ ಪರಿವರ್ತಿಸುವುದನ್ನು ಆಡಳಿತಾರೂಢ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ನರೇಂದ್ರ ಮೋದಿ ಅವರು ಈ ಹಿಂದೆ ಕುಂಭಮೇಳಕ್ಕೆ ಬಂದಿರಲಿಲ್ಲ. ಅಯೋಧ್ಯೆಗೂ ಕಾಲಿಟ್ಟಿಲ್ಲ, ಈಗ ಬರುತ್ತಿರುವುದು ರಾಜಕೀಯ ಉದ್ದೇಶದಿಂದ ಮಾತ್ರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಬಿಜೆಪಿ ರಾಜಕಾರಣಿಗಳು ಕುಂಭಮೇಳದ ಪವಿತ್ರತೆಯನ್ನು ಹಾಳುಗೆಡುವುದು ಬೇಡ ಎಂದು ಸಮಾಜವಾದಿ ಪಕ್ಷ ಹೇಳಿಕೆ ನೀಡಿದೆ.

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

ಕುಂಭಮೇಳದಲ್ಲಿ ಪುಣ್ಯ ಸ್ನಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+