ಈಶ್ವರಪ್ಪ ಅಕ್ರಮ ಆಸ್ತಿ ಪ್ರಕರಣ ತನಿಖೆ ಚುರುಕು
ಬೆಂಗಳೂರು/ಶಿವಮೊಗ್ಗ, ಫೆ. 5: ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರ ಕುಟುಂಬದ ಮೇಲಿನ ಆಕ್ರಮ ಆಸ್ತಿ ಪ್ರಕರಣದ ತನಿಖೆ ಚುರುಕುಗೊಳಿಸುವಂತೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ವಕೀಲ ವಿನೋದ್ ನೀಡಿದ್ದ ದೂರು ಪ್ರಕರಣ ರದ್ದುಗೊಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎ.ಎಸ್ ಪಶ್ಚಾಪುರೆ ಅವರು ತನಿಖೆ ಪ್ರಗತಿ ಬಗ್ಗೆ ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ತನಿಖೆ ಮುಂದುವರೆಸುವಂತೆ ಸೂಚಿಸಿದರು.
ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಪುತ್ರ ಕೆ.ಇ.ಕಾಂತೇಶ್ ಹಾಗೂ ಸೊಸೆ ಶಾಲಿನಿಯವರ ಅಕ್ರಮ ಸಂಪತ್ತು ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಮೇ 20ರೊಳಗೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೋಮವಾರ(ಫೆ.4) ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯ ಆದೇಶ ಹೊರಡಿಸಿದೆ.
ತನಿಖಾಧಿಕಾರಿಯಾದ ಲೋಕಾಯುಕ್ತ ಡಿವೈಎಸ್‌ಪಿ ಶಿವಕುಮಾರ್, ಪ್ರಕರಣದ ತನಿಖೆ ನಡೆಸಿ, ಸಾಕಷ್ಟು ಮಾಹಿತಿ ಸಂಗ್ರಹಿಸ ಲಾಗಿದ್ದು, ಇನ್ನೂ ಹಲವು ದಾಖಲೆ ಸಂಗ್ರಹಿಸಬೇಕಾಗಿದೆ. ಸುಮಾರು ಆರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದ್ದರು. ಇದನ್ನು ತಿರಸ್ಕರಿಸಿದ ನ್ಯಾಯಾಲಯ ಮೇ 20ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಆದೇಶ ನೀಡಿದೆ.

ಈಶ್ವರಪ್ಪ ಆಕ್ರಮ ಆಸ್ತಿ ಪ್ರಕರಣ
ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್ ಹಾಗೂ ಸೊಸೆ ಶಾಲಿನಿ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ 2012ರ ಡಿಸೆಂಬರ್ 13ರಂದು ನಗರದ ವಕೀಲ ಬಿ.ವಿನೋದ್ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾ ಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಈಶ್ವರಪ್ಪ ಆಕ್ರಮ ಆಸ್ತಿ ಪ್ರಕರಣ
ಡಿ. 15ರಂದು ತನಿಖೆಗೆ ಆದೇಶಿಸಿದ ನ್ಯಾಯಾಧೀಶರು ಶಿವಮೊಗ್ಗ ಲೋಕಾ ಯುಕ್ತ ಡಿವೈಎಸ್‌ಪಿಗೆ ತನಿಖೆಯ ಜವಾಬ್ದಾರಿ ವಹಿಸಿ, 2013ರ ಫೆ. 4ರೊಳಗೆ ದೂರಿನ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಡಿ.17ರಂದು ಲೋಕಾಯುಕ್ತ ಡಿವೈಎಸ್‌ಪಿ ಶಿವಕುಮಾರ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13 (1) (ಡಿ) (ಇ), 120 (ಬಿ) ಹಾಗೂ ಐಪಿಸಿ ಕಲಂ 420ರ ಅಡಿ ಎಫ್‌ಐಆರ್ ದಾಖಲಿಸಿ ಕೊಂಡಿದ್ದರು.
ಈಶ್ವರಪ್ಪ ಆಕ್ರಮ ಆಸ್ತಿ ಪ್ರಕರಣ
ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿಂದ ಡಿ. 18ರಂದು ವಕೀಲರಾದ ಅಶೋಕ್ ಭಟ್ ಹಾಗೂ ಎ.ಎಂ.ಶ್ರೀಧರ್‌ರ ಮೂಲಕ ನ್ಯಾಯಾಲಯಕ್ಕೆ ಸಿಆರ್‌ಪಿಸಿ ಕಲಂ 438ರ ಅಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈಶ್ವರಪ್ಪ, ಪುತ್ರ, ಹಾಗೂ ಸೊಸೆ ಸಲ್ಲಿಸಿದ್ದರು.

ಈಶ್ವರಪ್ಪ ಆಕ್ರಮ ಆಸ್ತಿ ಪ್ರಕರಣ
ಡಿ. 19ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ತಕರಾ ರರು ಅರ್ಜಿ ಸಲ್ಲಿಸಲು ಲೋಕಾ ಯುಕ್ತ ಪೊಲೀಸರಿಗೆ ಸೂಚಿಸಿ, ಡಿ. 21ಕ್ಕೆ ವಿಚಾರಣೆ ಮುಂದೂಡಿದ್ದರು. ಅಂದು ಲೋಕಾಯುಕ್ತ ಪೊಲೀಸರು ತಕರಾರು ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಾಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಡಿ. 27ಕ್ಕೆ ನ್ಯಾಯಾಲಯ ಮುಂದೂಡಲಾಗಿತ್ತು.

ಈಶ್ವರಪ್ಪ ಆಕ್ರಮ ಆಸ್ತಿ ಪ್ರಕರಣ
ಈ ನಡುವೆ ಲೋಕಾಯುಕ್ತ ಪೊಲೀಸರು ಶಿವಮೊಗ್ಗದ 7 ಹಾಗೂ ಬೆಂಗಳೂರಿನ 1 ಕಡೆ ಸೇರಿದಂತೆ 8 ಕಡೆ ಈಶ್ವರಪ್ಪಗೆ ಸಂಬಂಧಿಸಿದ ಮನೆ, ಕಚೇರಿ, ಶಿಕ್ಷಣ ಸಂಸ್ಥೆ, ಆಪ್ತರ ಮನೆಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿ, ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು.

ಈಶ್ವರಪ್ಪ ಆಕ್ರಮ ಆಸ್ತಿ ಪ್ರಕರಣ
ಡಿ. 27ರಂದು ಈಶ್ವರಪ್ಪ ನಿರೀಕ್ಷಣಾ ಜಾಮೀನಿಗೆ ಲೋಕಾಯುಕ್ತ ಪೊಲೀಸರು ತಕರಾರು ಅರ್ಜಿ ಸಲ್ಲಿಸಿದ್ದರು. ಡಿ. 31ರಂದು ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟಿನಲ್ಲಿ ಈಶ್ವರಪ್ಪ ಅವರು ಮೇಲ್ಮನವಿ ಸಲ್ಲಿಸಿದ್ದರು. ಈಗ ಲೋಕಾ ಪೋಲೀಸರು ತನಿಖೆ ವರದಿ ಮೇ.20ರೊಳಗೆ ಸಲ್ಲಿಸಬೇಕಿದೆ.











Click it and Unblock the Notifications