ನಾಗಾ ದೀಕ್ಷೆ ಸ್ವೀಕರಿಸಿದ 2000 ಸಾಧುಗಳು
ಅಲಹಾಬಾದ್, ಫೆ.4 : ಈ ಬಾರಿಯ ಮಹಾ ಕುಂಭಮೇಳ ಹಲವು ವಿಶೇಷತೆಗಳ ಜೊತೆಗೆ ಯಾವುದೇ ವಿಘ್ನವಿಲ್ಲದೆ ಸಾಗಿರುವುದು ಸಂತೋಷದ ಸಂಗತಿ.
ಉತ್ತರ ಪ್ರದೇಶದ ಅಲಹಾಬಾದಿನ ಗಂಗಾ ನದಿ ತಟದಲ್ಲಿ ಜ.14ರಿಂದ ನಡೆದಿರುವ 55 ದಿನಗಳ ಈ ಮಹಾ ಮೇಳದಲ್ಲಿ ನಾಗಾ ಸಾಧುಗಳೇ ಪ್ರಮುಖ ಆಕರ್ಷಣೆ.
ಹೊಸದಾಗಿ ಸೇರ್ಪಡೆಗೊಂಡ ನಾಗಾ ಸಾಧುಗಳ ಆಚರಣೆ, ಪವಿತ್ರ ಸ್ನಾನ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜನರನ್ನು ಸೆಳೆಯುತ್ತಿದೆ.
ಸುಮಾರು 2,000 ಅಧಿಕ ನಾಗಾ ಸಾಧುಗಳು ದೀಕ್ಷೆ ತೆಗೆದುಕೊಂಡ ದೃಶ್ಯಗಳು ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಲಭ್ಯವಾಗಿದೆ. ನಾಗಾಗಳ ಆಚರಣೆ ಅದರಲ್ಲೂ ಹೊಸ ಸಾಧುಗಳಿಗೆ ದೀಕ್ಷೆ ನೀಡುವ ಕಾರ್ಯಕ್ರಮ ಸಾಮಾನ್ಯವಾಗಿ ರಹಸ್ಯವಾಗಿಯೇ ನಡೆಯುತ್ತದೆ.
ಇನ್ನಷ್ಟು ಚಿತ್ರಗಳು ತಪ್ಪದೇ ನೋಡಿ
ಜುನಾ ಅಖಾರ ಕ್ಯಾಂಪ್ ನಲ್ಲಿ ಮಹಿಳಾ ಸಾಧುಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಕುಂಭ ಮೇಳದಲ್ಲಿ ಮಾತ್ರ ಶಾಕ್ತ ಸಂಪ್ರದಾಯಸ್ಥ ಮಹಿಳಾ ಸಾಧುಗಳು ಕಾಣಿಸಿಕೊಳ್ಳುತ್ತಾರೆ. ಮುಂದಿನ ಕುಂಭಮೇಳ 2016ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯಲಿದೆ.

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ದೀಕ್ಷೆ ಪಡೆದ ನಂತರ ಮೊದಲ ಬಾರಿಗೆ ಪವಿತ್ರ ಮುಳುಗು ಹಾಕಿ ಆನಂದಿಸಿದ ನಾಗಾ ಸಾಧುಗಳು

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಕುಂಭಮೇಳದಲ್ಲಿ ಸ್ವಾಮಿ ವಾಸುದೇವನಂದಜಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಮಹಾಮಂಡಲೇಶ್ವರ ಮಹೇಶ್ವರನಂದ ಪುರಿ ಕ್ಯಾಂಪ್ ನಲ್ಲಿ 'ದಯಾ ಪುರಿ' ಎಂಬ ಹೆಸರು ಪಡೆದು ದೀಕ್ಷೆ ಪಡೆದ ಕೆನಡಾ ಮೂಲದ ಕ್ಯಾಥರೀನ್ ಯುತ್ಮಿಂಗ್ ಫು

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಕುಂಭಮೇಳದಲ್ಲಿ ವಿದೇಶಿ ಭಕ್ತಾದಿಗಳಿಂದ ಹೋಮ ಹವನ ಆಚರಣೆ

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಮಹಾ ಕುಂಭಮೇಳದಲ್ಲಿ ಸಂಧ್ಯಾ ಸಮಯದಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಸಾಧು

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಸಂಗಮದ ಆದಿನಾಥ ಅಖಾರದಲ್ಲಿ ಹೊರಟ ಮೆರವಣಿಗೆಯಲ್ಲಿ ಕಹಳೆ ಊದುತ್ತಿರುವ ಸಾಧು ಮಹಾರಾಜ್

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಕುಂಭಮೇಳದಲ್ಲಿ ವಿದೇಶಿ ಭಕ್ತಾದಿಗಳಿಂದ ಹೋಮ ಹವನ ಆಚರಣೆ

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಪವಿತ್ರ ಮುಳುಗು ಹಾಕಿದ ನಂತರ ಪುರ ಬೀದಿಗಳಲ್ಲಿ ಮೆರವಣಿಗೆ ಹೊರಟ ಸಾಧುಗಳು

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ಭಕ್ತಾದಿಗಳಿಂದ ಪವಿತ್ರ ನದಿ ಗಂಗೆಗೆ ಆರತಿ, ಪೂಜೆ ಸಲ್ಲಿಕೆ

ನಾಗಾ ಸಾಧುಗಳು, ಭಕ್ತಾದಿಗಳ ಆಚರಣೆಗಳು
ನಾಗಾ ದೀಕ್ಷೆ ನಂತರ ಸಂಗಮದಲ್ಲಿ ಭಕ್ತಾದಿಗಳ ಪವಿತ್ರ ಮುಳುಗು












Click it and Unblock the Notifications