ವಿಶ್ವರೂಪಂ ನಿಷೇಧದ ಬಗ್ಗೆ ಬಾಯ್ಬಿಟ್ಟ ಜಯಲಲಿತಾ
ಚೆನ್ನೈ, ಜ.31: ಪದ್ಮಶ್ರೀ ಕಮಲ್ ಹಾಸನ್ ಅವರ 'ವಿಶ್ವರೂಪಂ' ಪ್ರದರ್ಶನಕ್ಕೆ ಸರ್ಕಾರ ಏಕೆ ಅಡ್ಡಿಪಡಿಸಿದೆ ಎಂಬುದರ ಬಗ್ಗೆ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿ, ಮಾಜಿ ನಟಿ ಜಯಲಲಿತಾ ಅವರು ಬಾಯ್ಬಿಟ್ಟಿದ್ದಾರೆ.
ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಜಯಲಲಿತಾ ಅವರು 'ನಾನು ಕಮಲ್ ಹಾಸನ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಅದ್ಯ ಕರ್ತವ್ಯ' ಎಂದಿದ್ದಾರೆ. ವಿಶ್ವರೂಪಂ ಚಿತ್ರ ನಿಷೇಧಕ್ಕೆ ನಾನೇ ಕಾರಣ ಎಂದು ಹಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಂದ ನೋವಾಗಿದೆ. ಈ ರೀತಿ ವರದಿ ಎಲ್ಲವೂ ಸುಳ್ಳು ಎಂದಿದ್ದಾರೆ.
ವಿಶ್ವರೂಪಂ ಚಿತ್ರವನ್ನು ತಮಿಳುನಾಡಿನಲ್ಲಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ಫೆಬ್ರವರಿ 6ಕ್ಕೆ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಇತರೆ ರಾಜ್ಯಗಳಲ್ಲಿ ಚಿತ್ರ ನಿರಾಂತಕವಾಗಿ ಪ್ರದರ್ಶನ ಕಂಡಿದೆ.
ಸೆಲ್ವಿ ಜಯಲಲಿತಾ ಅವರ ಸುದ್ದಿಗೋಷ್ಠಿ ಮುಖ್ಯಾಂಶಗಳು:
* ಗುಪ್ತಚರ ಇಲಾಖೆ ಮಾಹಿತಿ ಪಡೆದ ನಂತರ ಚಿತ್ರಮಂದಿರಗಳಿಗೆ ಭದ್ರತೆ ಒದಗಿಸಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಆದರೆ, 524 ಚಿತ್ರಮಂದಿರಕ್ಕೆ ಭದ್ರತೆ ಕಷ್ಟಕರವಾಗಿದ್ದರಿಂದ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಯಿತು.
* ತಮಿಳುನಾಡಿನಲ್ಲಿ 91,000 ಪೊಲೀಸರಿದ್ದಾರೆ. ಸುಮಾರು 7 ಕೋಟಿ ಜನರಿಗೆ 87,000 ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ.
* ಟಿವಿ ರೈಟ್ಸ್ ಸಿಗದ ಕಾರಣ ಜಯಲಲಿತಾ ಅವರು ಗಲಾಟೆ ಮಾಡಿಸುತ್ತಿದ್ದರೆ ಎಂಬುದರಲ್ಲಿ ಸತ್ಯವಿಲ್ಲ. ಜಯ ಟಿವಿ ನನಗೆ ಸೇರಿಲ್ಲ. ಜಯಾ ಟಿವಿಯಲ್ಲಿ ನಾನು ಪಾಲು ಹೊಂದಿಲ್ಲ. ಎಐಎಡಿಎಂಕೆ ಬೆಂಬಲಿತ ಚಾನೆಲ್ ಎಂಬುದು ನಿಜ.
ಸುದ್ದಿಗೋಷ್ಠಿ ಮುಖ್ಯಾಂಶಗಳು ಮುಂದಿನ ದೃಶ್ಯಾವಳಿಗಳಲ್ಲಿ ಓದಿಕೊಳ್ಳಿ

ವಿಶ್ವರೂಪಂಬಗ್ಗೆ ಜಯಾ ಸುದ್ದಿಗೋಷ್ಠಿ
* ಆರಂಭದಲ್ಲೇ ಬಿಡುಗಡೆಗೂ ಮುನ್ನ ಮುಸ್ಲಿಂ ಸಂಘಟನೆಗಳಿಗೆ ಚಿತ್ರ ತೋರಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.
* ಸುಮಾರು 23ಕ್ಕೂ ಅಧಿಕ ಮುಸ್ಲಿಂ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಚಿತ್ರ ನಿಷೇಧಕ್ಕಾಗಿ ಆಗ್ರಹಿಸಿದಾಗ ಸರ್ಕಾರ ತಮಾಷೆ ನೋಡುತ್ತಾ ಕೂರಲು ಬರುವುದಿಲ್ಲ.

ವಿಶ್ವರೂಪಂಬಗ್ಗೆ ಜಯಾ ಸುದ್ದಿಗೋಷ್ಠಿ
* ಧೋತಿ ಉಟ್ಟ ರಾಜಕಾರಣಿ ಪ್ರಧಾನಿಯಾಗಬೇಕೆಂದು ಕಮಲ್ ಹಾಸನ್ ಹೇಳಿದ್ದರೆ ಅದು ಅವರ ಅಭಿಪ್ರಾಯ, ವಾಕ್ ಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತೇನೆ.
* ಪದ್ಮಶ್ರೀ ಕಮಲ್ ಹಾಸನ್ ಅವರು ಕಲಾವಿದರೇ ಹೊರತೂ ಪ್ರಧಾನಿ ಆಯ್ಕೆ ಮಾಡುವ ಹುದ್ದೆಯಲ್ಲಿಲ್ಲ ಎಂಬುದು ಗೊತ್ತಿದೆ.

ವಿಶ್ವರೂಪಂ ಬಗ್ಗೆ ಜಯಾ ಸುದ್ದಿಗೋಷ್ಠಿ
* ಕರ್ನಾಟಕದ ಮೈಸೂರು, ಭದ್ರಾವತಿ ಮುಂತಾದೆಡೆ ಗಲಾಟೆಗಳಾಗಿದೆ. ಆಂಧ್ರಪ್ರದೇಶ, ತಮಿಳುನಾಡಿನ ಕೆಲಭಾಗದಲ್ಲೂ ಪ್ರತಿಭಟನೆ ಮುಂದುವರೆದಿದೆ. ಇದಕ್ಕೆಲ್ಲ ನಾನೇ ಕಾರಣ ಎಂದರೆ ಹೇಗೆ?
* 524 ಥೇಟರ್ ಗಳ ಭದ್ರತೆ ಕನಿಷ್ಠ 31,440 ಸಿಬ್ಬಂದಿ ಅಗತ್ಯವಿದೆ. ಚಿತ್ರ ಬಿಡುಗಡೆಗಿಂತ ಜನರ ಶಾಂತಿ ನೆಮ್ಮದಿ ನಮಗೆ ಮುಖ್ಯ.

ವಿಶ್ವರೂಪಂ ಬಗ್ಗೆ ಜಯಾ ಸುದ್ದಿಗೋಷ್ಠಿ
* ಸುಮಾರು 23ಕ್ಕೂ ಅಧಿಕ ಮುಸ್ಲಿಂ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಗೃಹ ಕಾರ್ಯದರ್ಶಿಗಳ ಸಲಹೆಯಂತೆ ಚಿತ್ರ ನಿಷೇಧಕ್ಕೆ ಮುಂದಾಗಬೇಕಾಯಿತು.
* ಸರ್ಕಾರ ಸರಿಯಾದ ಸಮಯಕ್ಕೆ ಈ ನಿರ್ಣಯ ಕೈಗೊಳ್ಳದಿದ್ದರೆ ರಕ್ತಪಾತವಾಗುತ್ತಿತ್ತು. ನಾಡಿನ ಶಾಂತಿ ಕದಡಿ ಸಿನಿಮಾ ನೋಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ.

ವಿಶ್ವರೂಪಂ ಬಗ್ಗೆ ಜಯಾ ಸುದ್ದಿಗೋಷ್ಠಿ
* ಕಮಲ್ ಹಾಸನ್ ಅವರು ತಮ್ಮ ಸಮಸ್ತ ಆಸ್ತಿಯನ್ನು ಚಿತ್ರಕ್ಕೆ ಸುರಿದಿದ್ದು, ಚಿತ್ರ ಪ್ರದರ್ಶನವಾಗದಿದ್ದರೆ ಬೀದಿಗೆ ಬೀಳುತ್ತೇನೆ ಎಂದಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಹೊಣೆಯಾಗುತ್ತದೆ?
* ನನಗೆ ಚಿತ್ರದ ಬಗ್ಗೆ ಒಂದಿಷ್ಟು ಗೊತ್ತಿಲ್ಲ. ಮುಸ್ಲಿಂ ಸಂಘಟನೆ ನಾಯಕರನ್ನು ಭೇಟಿಯಾಗಿಲ್ಲ. ಗುಪ್ತಚರ ವರದಿ ಪ್ರಕಾರ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮ ಜರುಗಿಸಿದೆ. ಕಲಾವಿದರ ರಕ್ಷಣೆ ಹೊಣೆ ಬಗ್ಗೆ ಗೊತ್ತಿದೆ. ಆದರೆ, ವೈಯಕ್ತಿಕ ನಷ್ಟ ಭರಿಸುವುದು ಕಷ್ಟ

ವಿಶ್ವರೂಪಂ ಬಗ್ಗೆ ಜಯಾ ಸುದ್ದಿಗೋಷ್ಠಿ
* ಮುಸ್ಲಿಂ ಸಂಘಟನೆಗಳ ಜೊತೆ ಕಮಲ್ ಹಾಸನ್ ಚರ್ಚಿಸಿ ಒಂದು ಒಪ್ಪಂದಕ್ಕೆ ಬರಲಿ, ಸರ್ಕಾರ ನಿಷ್ಪಕ್ಷಪಾತವಾಗಿ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡುತ್ತೇನೆ.
* ತಮಿಳುನಾಡಿನ ಜನ ಶಾಂತಿಪ್ರಿಯರು, ಚಲನ ಚಿತ್ರಗಳು ಸಂಸ್ಕೃತಿಯ ಒಂದು ಭಾಗ ಎಂಬ ಅರಿವು ಸರ್ಕಾರಕ್ಕಿದೆ.












Click it and Unblock the Notifications