Get Updates
Get notified of breaking news, exclusive insights, and must-see stories!

ಎಚ್‌ ಡಿ ರೇವಣ್ಣ ಮೊದಲ ಪತ್ನಿ ನಾನಲ್ಲ: ಭವಾನಿ

ಹಾಸನ, ಜ.31: ದೊಡ್ಡ ಗೌಡ್ರ ಕುಟುಂಬದಲ್ಲಿ ದೊಡ್ಡ ಕೋಲಾಹಲ ಎದ್ದಿದೆಯಾ? ಏಕೆಂದರೆ ದೇವೇಗೌಡರ ಚೊಚ್ಚಲ ಮಗ ಎಚ್‌ ಡಿ ರೇವಣ್ಣ ಅವರ ಧರ್ಮ ಪತ್ನಿ ಭವಾನಿ ಅವರು 'ರೇವಣ್ಣಗೆ ನಾನು ಮೊದಲ ಪತ್ನಿ ಅಲ್ಲ, ಎರಡನೇ ಪತ್ನಿ' ಎಂದಿದ್ದಾರೆ.

ವಸಿ ತಡಕೊಳ್ಳಿ. ಆ ಹೆಣ್ಣುಮಗಳು ಹೇಳಿರುವುದು ನೀವು ಯೋಚಿಸುತ್ತಿರುವ ಭಾವದಲ್ಲಿ ಹೇಳಿಲ್ಲ. ಅಭಾವ ವೈರಾಗ್ಯದಿಂದ ಭವಾನಿ ಮೇಡಂ ಹಾಗೆ ಹೇಳಿದ್ದಾರೆ. ವಿಷಯ ಏನಪ್ಪಾ ಅಂದರೆ ಜೆಡಿಎಸ್ ಶಾಸಕರೂ ಆದ ರೇವಣ್ಣನರು ರಾಜಕೀಯದ ಜತೆಗೆ ಕರ್ನಾಟಕ ಡೇರಿ ಉದ್ಯಮಕ್ಕೆ ಸದಾ ನೀರೆರೆಯುವ ಕಾಯಕದಲ್ಲಿ ತೊಡಗಿರುತ್ತಾರೆ.

ಹಾಗಾಗಿ, ಕೆಎಂಎಫ್ ಅರ್ಥಾತ್ ನಂದಿನಿ ಹಾಲು ಒಕ್ಕೂಟದ ಸೇವೆಗೆ ಅವರು ಕಟಿಬದ್ಧರಾಗಿದ್ದು, ಅದನ್ನೇ ತಮ್ಮ ಮೊದಲ ಪತ್ನಿಯಂತೆ ನೋಡಿಕೊಳ್ಳುತ್ತಾರೆ ಎಂದು ಭವಾನಿ ಮೇಡಂ ತಮ್ಮ ಪತಿಯ ಜನಸೇವೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬುಧವಾರ ಇಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸದಸ್ಯರಿಗೆ ಸ್ವಸಹಾಯ ಸಂಘಗಳ ಮಹತ್ವ ಮತ್ತು ಸ್ವಸಹಾಯ ಸಂಘಗಳ ಮಹಾಮಂಡಳ ರಚನೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಭವಾನಿ ಮಾತನಾಡಿದರು.

ಹಸುವಿನಂತಹ ಮನಸು

ಹಸುವಿನಂತಹ ಮನಸು

ಈ ವೇಳೆ ಎಚ್ ಡಿ ರೇವಣ್ಣನವರಿಗೆ ನಾನು ಎರಡನೇ ಪತ್ನಿ. ಮನೆಗಿಂತಲೂ ಡೇರಿ ಅಭಿವೃದ್ಧಿಗೆ ರೇವಣ್ಣ ಹೆಚ್ಚು ಶ್ರಮಿಸುತ್ತಾರೆ. ದೇಶದ ಕ್ಷೀರ ಕ್ರಾಂತಿಯ ಹರಿಕಾರ ಪಿಜೆ ಕುರಿಯನ್‌ ಅವರ ಶಕ್ತಿಯನ್ನು ಪಡೆದುಕೊಂಡಿರುವ ರೇವಣ್ಣನವರು ಕರ್ನಾಟಕದಲ್ಲಿ ಡೇರಿ ಉದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪತಿಯನ್ನು ಭವಾನಿ ಮುಕ್ತ ಕಂಠದಿಂದ, ತುಂಬಿದ ಸಭೆಯಲ್ಲಿ ಹಾಡಿ ಹೊಗಳಿದರು.

ಕಾಮಧೇನು ಆರಾಧಕ ಕುಟುಂಬ

ಕಾಮಧೇನು ಆರಾಧಕ ಕುಟುಂಬ

ಇದನ್ನು ಕೇಳಿ ವರ್ಗಿಸ್ ಕುರಿಯನ್‌ ಸ್ವರ್ಗದಲ್ಲಿ ಸಂತಸದ ಹೊಳೆ ಹರಿಸಿರಲೂಬಹುದು. ಏಕೆಂದರೆ, ಇದ್ದಕ್ಕಿದ್ದಂತೆ ದೇಶದ ಪ್ರಧಾನಿಯಾದ ದೇವೇಗೌಡರು ಕುರಿಯನ್‌ ಅವರ ಕೈಹಿಡಿದು ಮೊದಲು ಬೆಂಗಳೂರಿಗೆ, ಬಳಿಕ ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಹಾಲು ಕ್ರಾಂತಿಗೆ ಚಾಲನೆ ನೀಡಿದರು. ಆ ಸಂದರ್ಭದಲ್ಲೇ ಗೌಡರು ತಮ್ಮ ಪುತ್ರ ರೇವಣ್ಣರನ್ನು ಮುಂಚೂಣಿಗೆ ಬಿಟ್ಟಿದ್ದು. ಅಲ್ಲಿಂದ ಮುಂದಕ್ಕೆ ಗೌಡರ ಕುಟುಂಬದವರು ಕೆಎಂಎಫ್, ಎನ್ ಡಿಡಿಬಿ ಸಂಸ್ಥೆಗಳನ್ನು ಅಕ್ಷರಶಃ ಕಾಮಧೇನುವಿನಂತೆ ಆರಾಧಿಸುತ್ತಿದ್ದಾರೆ.

ಭವಾನಿಯಕ್ಕ ಹಾಸನಕ್ಕೇ ಮೊದಲು

ಭವಾನಿಯಕ್ಕ ಹಾಸನಕ್ಕೇ ಮೊದಲು

ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮಹಿಳೆ ತಾವಾಗಿದ್ದು, 20 ಹಸುಗಳನ್ನು ಸಾಕಿದ್ದೇನೆ ಎಂದು ಹೇಳಿಕೊಂಡ ಭವಾನಿ, ನನ್ನನ್ನು ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ನಾನು ವಿದೇಶ ಪ್ರವಾಕ್ಕೆ ಹೋಗಲಿಲ್ಲ. ಮುಂದೆಯೂ ಹೋಗುವುದಿಲ್ಲ. ನನಗೆ ಮನೆ ಕೆಲಸ ಮಾಡಿಕೊಂಡಿರುವುದೇ ಖುಷಿ ಎಂದರು. ಪದವಿ ಪಡೆದವರಷ್ಟೇ ಬುದ್ಧಿವಂತರಲ್ಲ. ನಾನು SSLCವರೆಗೆ ಮಾತ್ರ ಓದಿದ್ದರೂ ನನ್ನ ಶಕ್ತಿ ಏನು ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದರು.

ನಮಗೆ ಇಂದಿರಾಗಾಂಧಿ ಮಾದರಿಯಾಗಲಿ

ನಮಗೆ ಇಂದಿರಾಗಾಂಧಿ ಮಾದರಿಯಾಗಲಿ

ಮಹಿಳೆಯರಿಗೆ ಮನೆ ಮುನ್ನೆಡೆಸುವುದೂ ಗೊತ್ತು. ಮನೆ ಮುಳುಗಿಸುವುದೂ ಗೊತ್ತು. ಇಂದಿರಾಗಾಂಧಿ ದೇಶ ಮುನ್ನೆಡೆಸಿದ ಉದಾಹರಣೆ ನಮ್ಮ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಹೆಣ್ಣು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿವೆ. ಎಂತಹ ಸಂದರ್ಭ ಬಂದರೂ ಮಹಿಳೆಯರು ಸಂಸಾರದ ಚೌಕಟ್ಟು ಬಿಟ್ಟು ಹೋಗಬಾರದು ಎಂದೂ ಭವಾನಿ ರೇವಣ್ಣ ಸಲಹೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+