ಸ್ಪೀಕರ್, ಸಿಎಂ ಇಲ್ಲ; ಗವರ್ನರ್ ಒಬ್ರೇ ಇರೋದು!

kjp-mlas-resignation-speaker-cm-shettar-absent-jan-23
ಬೆಂಗಳೂರು, ಜ.23:ಸನ್ಮಾನ್ಯ ಯಡಿಯೂರಪ್ಪ ಅವರ ತುರ್ತು ಗಮನಕ್ಕೆ- 'ರಾಜ್ಯ ವಿಧಾನಸಭೆ ಸ್ಪೀಕರ್ ಕೆಜಿ ಬೋಪಯ್ಯ ಅವರು ದಿಢೀರನೆ ನೇಪಾಳ ಪ್ರವಾಸ ಕೈಗೊಂಡಿದ್ದಾರೆ. ಇನ್ನು, ಸಿಎಂ ಜಗದೀಶ್ ಶೆಟ್ಟರ್ ನಾಡಿನ ಸಂಚಾರಕ್ಕೆ ಹೊರಟಿದ್ದಾರೆ. ಹೆಡ್ ಕ್ವಾರ್ಟರ್ಸ್ ನಲ್ಲಿರುವವರು ಗವರ್ನರ್ ಭಾರದ್ವಾಜ್ ಅವರೊಬ್ಬರೇ! ಹಾಗಾಗಿ ನೀವು ಇಂದು ಅದೇನು ಮಾಡ್ಕೋತೀರೋ ಮಾಡ್ಕೊಳ್ಳಿ' ಎಂಬ ಸಂದೇಶ ರಾಜ್ಯ ಬಿಜೆಪಿಯಿಂದ ರವಾನೆಯಾಗಿದೆ.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಹಿರಿಯ ರಾಜಕಾರಣಿ ಉದಾಸಿ ನೇತೃತ್ವದಲ್ಲಿ ಇಂದು ಬಿಜೆಪಿಯ ಅನೇಕ ಶಾಸಕ/ಸಚಿವರು ಕರ್ನಾಟಕ ಜನತಾ ಪಕ್ಷವನ್ನು ಅಪ್ಪಿಕೊಳ್ಳಲು ತರಾತುರಿಯಲ್ಲಿದ್ದಾರೆ ಎಂದು ಅತ್ಯಂತ ಗುಪ್ತ ಮಾಹಿತಿ ಪಡೆದ ಬಿಜೆಪಿ ನಾಯಕರು ಶಸ್ತ್ರತ್ಯಾಗ ಮಾಡಿ, ಪರಾರಿಯಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಆದರೂ, ಹೀಗೆ ಸಿಎಂ ಶೆಟ್ಟರ್ ಅವರ ಸರಕಾರವನ್ನು ಉದುರಿಸಲು ಯಡಿಯೂರಪ್ಪಗೂ ಕಷ್ಟಕಷ್ಟವಾಗಿದೆ ಎನ್ನಲಾಗಿದೆ. ಏಕೆಂದರೆ ಈ ತಕ್ಷಣಕ್ಕೆ ಸರಕಾರವನ್ನು ಬೀಳಿಸಬೇಕು ಅಂದರೆ ಕನಿಷ್ಠ 15 ಶಾಸಕ ಮಿತ್ರರು ರಾಜೀನಾಮೆ ನೀಡಲೇಬೇಕು. ನೆಹರೂ ಓಲೇಕಾರ ಅವರ ಪ್ರಕಾರ 4 ಸಚಿವರು, 20 ಶಾಸಕರು ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ.

ಆದರೆ ಅಷ್ಟು ಮಂದಿ ಯಡಿಯೂರಪ್ಪ ಮನೆಯಲ್ಲಿ ಇಂದು ಬೆಳಗ್ಗೆ ಟಿಫಿನ್ ತಿನ್ನಲು ಬರುತ್ತಾರಾ ಎಂಬುದೇ ಸದ್ಯದ ಪ್ರಶ್ನೆ. 15 ಮಂದಿಯಾದರೂ ಯಡಿಯೂರಪ್ಪ ಅವರತ್ತ ಸುಳಿಯದಿದ್ದರೆ ಸರಕಾರ ಸೇಫ್. ಮತ್ತು ಪ್ರವಾಸಕ್ಕೆಂದು ಹೊರಟಿರುವ ಇಬ್ಬರೂ ಗಣ್ಯ ವ್ಯಕ್ತಿಗಳು ಸರಕಾರ ಸೇಫ್ ಆಗಿದೆ ಎಂಬ ಖಾತ್ರಿ ಸಿಕ್ಕಿದ ನಂತರವಷ್ಟೇ ವಾಪಸಾಗುವ ಲಕ್ಷಣಗಳಿವೆ.

ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧ ಮತ್ತು ಗವರ್ನರ್ ನಿವಾಸದ ಜತೆಗೆ ಕೆಜೆಪಿ ಹೈಕಮಾಂಡ್ ಧವಳಗಿರಿಯತ್ತ ಕಣ್ಣಿಡಲಾಗಿದ್ದು, ಇಡೀ ದಿನದ ಪ್ರಹಸನಗಳನ್ನು ಕಾಲಕಾಲಕ್ಕೆ 'ಒನ್ಒಂಡಿಯಾ ಕನ್ನಡ' ಓದುಗರಿಗೆ ತಲುಪಿಸಲು ನಾವೂ ಸಿದ್ಧವಾಗಿದೆ.

ಇಂದಿನ ವಿದ್ಯಮಾನಗಳ ಕೇಂದ್ರ ಬಿಂದು, ಮಾಜಿ ಸಿಎಂ ಯಡಿಯೂರಪ್ಪ ಅವರು ಶಿವಾನಂದ ಸರ್ಕಲ್ಲಿನಲ್ಲಿರುವ ಸಿಎಂ ಉದಾಸಿ ನಿವಾಸಕ್ಕೆ ಇದೀಗತಾನೆ ಧಾವಿಸಿದ್ದಾರೆ. ಅಲ್ಲಿ ಕೆಜೆಪಿ ಸೇರಲಿರುವ ಶಾಸಕ/ಸಚಿವರಿಗಷ್ಟೇ ಇಂದು ಉಪಾಹಾರ ಏರ್ಪಡಿಸಲಾಗಿದೆ.

ರಾಜಿನಾಮೆ ನೀಡುವ ಸಂಭವನೀಯರು:

ಸಚಿವರು- ಶೋಭಾ ಕರಂದ್ಲಾಜೆ, ಸಿಎಂ ಉದಾಸಿ.
ಶಾಸಕರು- ನೆಹರು ಓಲೇಕಾರ್‌, ಬಿಪಿ ಹರೀಶ್‌, ಎಂ ಚಂದ್ರಪ್ಪ, ಎಸ್‌.ಐ ಚಿಕ್ಕನಗೌಡ್ರ, ಹರತಾಳು ಹಾಲಪ್ಪ, ಡಿಎಸ್‌ ಸುರೇಶ್‌, ಬಸವರಾಜ ಪಾಟೀಲ ಅಟ್ಟೂರು, ಸುರೇಶ್‌ಗೌಡ ಪಾಟೀಲ, ಜಿ ಶಿವಣ್ಣ, ತಿಪ್ಪೇಸ್ವಾಮಿ (ಚಳ್ಳಕೆರೆ), ವಿಠಲ ಕಟಕದೋಂಡ.

ವಿಧಾನಸಭೆಯ ಸದ್ಯದ ಸಂಖ್ಯಾಬಲ

ಬಿಜೆಪಿ- 117
ಕಾಂಗ್ರೆಸ್ - 71
ಜೆಡಿಎಸ್- 26
ಪಕ್ಷೇತರರು- 07
ಸ್ಪೀಕರ್ - 01
ಖಾಲಿ ಸ್ಥಾನ- 02
ಒಟ್ಟು- 224

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+