ಸ್ಪೀಕರ್ ಕಚೇರಿಯಲ್ಲಿ ಬೀಡುಬಿಟ್ಟ 13 ಶಾಸಕರು

ಈ ಮಧ್ಯೆ, ಸ್ಪೀಕರ್ ಕಚೇರಿಯಲ್ಲಿಲ್ಲ ಎಂಬುದನ್ನು ತಿಳಿದ 'ಶಾಸಕರ ರಾಜೀನಾಮೆಯ ಸೂತ್ರಧಾರ' ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧಕ್ಕೆ ದೌಡಾಯಿಸಿದ್ದಾರೆ. ಶೆಟ್ಟರ್ ಸರಕಾರದ ವಿರುದ್ಧ ಕಿಡಿಕಾರಿದ ಅವರು ತಕ್ಷಣ ಸರಕಾರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಸಚಿವ ಉದಾಸಿ (ಹಾನಗಲ್) ಮತ್ತು ಶೋಭಾ ಕರಂದ್ಲಾಜೆ (ಯಶವಂತಪುರ) ಸೇರಿದಂತೆ 13 ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಪತ್ರ ಹಿಡಿದು ಕುಳಿತಿದ್ದಾರೆ. ಆದರೆ ಅಲ್ಲಿ ಬೋಪಯ್ಯ ಅವರು ಕಚೇರಿಯಲ್ಲಿಲ್ಲ.
'ಶಾಸಕರ ರಾಜೀನಾಮೆ ಸ್ವೀಕರಿಸುವ ಅಧಿಕಾರ ಸ್ಪೀಕರ್ ಅವರಿಗೆ ಮಾತ್ರವೇ ಇರುತ್ತದೆ' ಎಂದು ವಿಧಾನಸಭೆ ಜಂಟಿ ಕಾರ್ಯದರ್ಶಿ ಗಲಗಲಿ ಅವರು ಸ್ಪಷ್ಟಪಡಿಸಿದ್ದಾರೆ.
ಸ್ಪೀಕರ್ ಬೋಪಯ್ಯ ನಾಪತ್ತೆ: 'ರಾಜೀನಾಮೆ ನೀಡುತ್ತೇವೆ' ಎಂದು ಸ್ಪೀಕರ್ ಬೋಪಯ್ಯ ಆವರಿಗೆ ಮುನ್ಸೂಚನೆ ನೀಡಿದ್ದೆವು. ಪರ್ಯಾಯ ವ್ಯವಸ್ಥೆ ಮಾಡದೇ ನಗರ ಬಿಟ್ಟು ಹೋಗಿರುವುದು ತಪ್ಪು. ಇದು ಸಂವಿಧಾನದ ಕಗ್ಗೊಲೆ ಎಂದು ಶಾಸಕ ನೆಹರೂ ಓಲೇಕಾರ್ ಸ್ಪೀಕರ್ ವಿರುದ್ದ ಕೆಂಡಕಾರಿದ್ದಾರೆ.
ರಾಜೀನಾಮೆ ಪತ್ರ ಸ್ಪೀಕರ್ ಅವರಿಗೆ ನೀಡುವುದು ಸಂವಿಧಾನದ ಕ್ರಮ. ರಾಜ್ಯಪಾಲರು ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ. ಅವರು ಈ ಸಂಬಂಧ ಸೂಕ್ತ ಕ್ರಮ ಕೈಗೊಂಡು ಸಂವಿಧಾನ ಕಗ್ಗೊಲೆಯಾಗದಂತೆ ನೋಡಿಕೊಳ್ಳಬೇಕು ಎಂದು ಓಲೇಕಾರ್ ಮನವಿ ಮಾಡಿದ್ದಾರೆ.
ಶೋಭಾ ಕರಂದ್ಲಾಜೆ (ಯಶವಂತಪುರ)
ಸಿಎಂ ಉದಾಸಿ (ಹಾನಗಲ್)
ನೆಹರು ಓಲೇಕಾರ್ (ಹಾವೇರಿ ಮೀಸಲು),
ಜಿ ಶಿವಣ್ಣ (ರಾಣೆಬೆನ್ನೂರು),
ಬಿಪಿ ಹರೀಶ್ (ಹರಿಹರ),
ಸುರೇಶ್‌ಗೌಡ ಪಾಟೀಲ (ಬ್ಯಾಡಗಿ),
ಎಂ ಚಂದ್ರಪ್ಪ (ಹೊಳಲ್ಕೆರೆ ಮೀಸಲು, ಚಿತ್ರದುರ್ಗ)
ಬಸವರಾಜ ಪಾಟೀಲ ಅಟ್ಟೂರು (ಬಸವಕಲ್ಯಾಣ).
ಎಸ್.ಐ ಚಿಕ್ಕನಗೌಡ್ರ (ಕುಂದಗೋಳ),
ಹರತಾಳು ಹಾಲಪ್ಪ (ಸೊರಬ),
ಡಿಎಸ್ ಸುರೇಶ್ (ತರೀಕೆರೆ),
ತಿಪ್ಪೇಸ್ವಾಮಿ (ಚಳ್ಳಕೆರೆ)
ವಿಠಲ ಕಟಕದೋಂಡ (ನಾಗಠಾಣಾ. ಬಿಜಾಪುರ )












Click it and Unblock the Notifications