ಬೆಂಗಳೂರಿಂದ ಮೈಸೂರಿಗೆ ಸೈಕಲ್ ಜಾಥಾ

ಗ್ರಾಮೀಣ ಭಾಗದ ಜನತೆಯನ್ನು ತಲುಪಿ ಅವರಲ್ಲಿ ಸ್ವರಾಜ್ಯ ಅಥವಾ ಸ್ವದೇಶದ ಕಲ್ಪನೆಯನ್ನು ಬಿತ್ತಿ, ಉತ್ತಮ ಅಭ್ಯರ್ಥಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಮತ ಹಾಕುವಂತೆ ಪ್ರೇರೇಪಿಸುವುದಾಗಿದೆ. ಆಮ್ ಆದ್ಮಿ ಪಕ್ಷದ ಬಗ್ಗೆ ಪ್ರಚಾರ ಮಾಡುವುದರ ಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಪ್ರೋತ್ಸಾಹಿಸುವುದಾಗಿದೆ
ಜ.23ರಂದು ಬೆಳಿಗ್ಗೆ 9 ಗಂಟೆಗೆ ಕೆಂಗೇರಿ ಬಸ್ ನಿಲ್ದಾಣದಿಂದ 8 ಯುವಕರ ಪಯಣ ಆರಂಭವಾಗಲಿದ್ದು, ಜ.27ರಂದು ರೈಲಿನ ಮುಖಾಂತರ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಈ ವಿನೂತನ ಅಭಿಯಾನಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಸೈಕಲ್ ಜಾಥಾಗೆ ಚಾಲನೆ ನೀಡಲಿದ್ದಾರೆ.
ಸೈಕಲ್ ಪಯಣದ ವಿವರಗಳು ಕೆಳಗಿನಂತಿವೆ
* ಜ. 23 - ಕೆಂಗೇರಿ ಬಸ್ ನಿಲ್ದಾಣದಿಂದ 9 ಗಂಟೆಗೆ ಪಯಣ ಆರಂಭ.
* ಜ. 23 - ಚನ್ನಪಟ್ಟಣ ತಲುಪಿ ಅಲ್ಲಿ ರಾತ್ರಿ ವಾಸ.
* ಜ. 24 - ಚನ್ನಪಟ್ಟಣದಿಂದ ಆರಂಭಿಸಿ ಮಂಡ್ಯ ತಲುಪುವುದು ಮತ್ತು ಅಲ್ಲಿ ರಾತ್ರಿ ವಾಸ.
* ಜ. 25 - ಮಂಡ್ಯದಿಂದ ಹೊರಟು ರಾತ್ರಿ ಮೈಸೂರು ತಲುಪುವುದು.
* ಜ. 26 - ಮೈಸೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ.
* ಜ. 27 - ಮೈಸೂರಿನಿಂದ ರೈಲು ಮುಖಾಂತರ ಸಂಜೆ ಹೊರಟು ರಾತ್ರಿ ಬೆಂಗಳೂರು ತಲುಪುವುದು.
ಈ ಅಭಿಯಾನದಲ್ಲಿ ಭಾಗವಹಿಸುತ್ತಿರುವವರು
1. ಆದರ್ಶ ಕುಮಾರ್ ಎಚ್.ಎನ್.
2. ಸಂತೋಷ್ ಎಸ್. ಶೇಖರ್
3. ಕೆ. ಜೋಶುವಾ
4. ನಿಶ್ಚಿತ್ ಶೆಟ್ಟಿ
5. ರಕ್ಷಿತ್ ಆರ್. ಭಟ್
6. ನಿತಿನ್ ಎಮ್.ಎಸ್.
7. ಪ್ರಯಾಗ್ ಐ.ಪಿ.
8. ಪವನ್ ಹೆಗಡೆ












Click it and Unblock the Notifications