ನೇತ್ರಾವತಿ ತಿರುವಿಗೆ ಹೆಗ್ಗಡೆ ಸಮ್ಮತಿ: ಕು.ಸ್ವಾಮಿ

ಆದರೆ ಮೊನ್ನೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಖುದ್ದು ಮಾತನಾಡಿ, 'ದಯವಿಟ್ಟು ಈ ವಿಷಯದಲ್ಲಿ ನನ್ನನ್ನು ಎಳೆಯಬೇಡಿ. ಸರ್ವಸಮ್ಮತ ನಿರ್ಧಾರಕ್ಕೆ ನಾನೂ ಒಪ್ಪಿಗೆ ಸೂಚಿಸುತ್ತೇನೆ. ಅಲ್ಲಿಯವರೆಗೂ ನೋ ಕಮೆಂಟ್ಸ್' ಎಂಬ ಧಾಟಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.
ಆದರೆ ನಿನ್ನೆ ಕೋಲಾರ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ನೇತ್ರಾವತಿ ನೀರು ಬಯಲುಸೀಮೆಗೆ ವೀರೇಂದ್ರ ಹೆಗ್ಗಡೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಘೋಷಿಸಿದ್ದಾರೆ.
ಚುನಾವಣೆ ಕಾಲದಲ್ಲಿ ಅದೇನು ಬಯಲುಸೀಮೆಯ ಮತಗಳನ್ನು ಬಾಚಿಕೊಳ್ಳಲು ಹೀಗೆ ಹೇಳಿದರೋ ಗೊತ್ತಿಲ್ಲ. ಅಂತೂ, ವೀರೇಂದ್ರ ಹೆಗ್ಗಡೆ ನೇತ್ರಾವತಿ ನೀರು ತಿರುವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದೇ ಪ್ರಕಟಿಸಿದ್ದಾರೆ.
ಕುಮಾರಸ್ವಾಮಿ ಏನು ಹೇಳಿದರೆಂದರೆ:
'ಬಯಲು ಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೇತ್ರಾವತಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ಕರಾವಳಿ ಪ್ರದೇಶಗಳಿಗೆ ತೊಂದರೆಯಾಗದ ರೀತಿ ನೀರು ಬಳಸಿಕೊಳ್ಳಲು ವೀರೇಂದ್ರ ಹೆಗ್ಗಡೆಯವರು ಒಪ್ಪಿಗೆ ನೀಡಿದ್ದಾರೆ'.












Click it and Unblock the Notifications