ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷರು ಯಾರು?

who-is-karnataka-janatha-party-president-yeddyurapa-cec
ನವದೆಹಲಿ, ಜ. 17: 'ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಅಧ್ಯಕ್ಷ ಯಾರು? A. ಧನಂಜಯ ಕುಮಾರ್‌, B. ಪದ್ಮನಾಭ ಪ್ರಸನ್ನಕುಮಾರ C. ಬಿಎಸ್ ಯಡಿಯೂರಪ್ಪ D. ಯಾರೂ ಇಲ್ಲ' ಎಂದು ಕೆಬಿಸಿಯಲ್ಲಿ ಅಮಿತಾಭ್ ಬಚ್ಚನ್ ಏನಾದರೂ ಕೇಳಿದರೆ ನೀವು ನಿಸ್ಸಂಶಯವಾಗಿ ನಮ್ಮ ಯಡಿಯೂರಪ್ಪನವೇ ಆ ಪಕ್ಷ ಅಧಿನಾಯಕ ಎಂದು ಸೀದಾ C ಗುಂಡಿಯನ್ನೇ ಒತ್ತುತ್ತೀರಿ, ಅಲ್ವಾ? ಆದರೆ ಹುಷಾರು ಹಾಗೆ C ಗುಂಡಿಯನ್ನೊತ್ತಿದರೆ ನೀವು ಗುಂಡಿಗೆ ಬಿದ್ದಿರಿ ಅಂತಲೇ ಅರ್ಥ.

ಏಕೆಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು KJP ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಪ್ರಕ್ರಿಯೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತಕರಾರು ತೆಗೆದಿದೆ. ಈ ಮಧ್ಯೆ, ಆ ಪಕ್ಷಕ್ಕೆ ಆಯೋಗವು ಇನ್ನೂ ಚಿಹ್ನೆಯನ್ನೂ ದಯಪಾಲಿಸಿಲ್ಲ.

ಹಿಂದಿಲ್ಲ-ಮುಂದಿಲ್ಲ. ಚಿಹ್ನೆಯೂ ಇಲ್ಲ-ನಾಯಕನ್ಯಾರೋ ಗೊತ್ತಿಲ್ಲ... ಪರಿಸ್ಥಿತಿ ಹೀಗಿರುವುದರಿಂದಲೇ 70 + ಶಾಸಕರು ಯಡಿಯೂರಪ್ಪ ಜತೆ ಹೋಗಲು ಹಿಂದೇಟು ಹಾಕುತ್ತಿದ್ದಾರಾ? ಎಂಬುದು ಶುದ್ಧ ಕುಹಕವಷ್ಟೇ. ಹಾಗಾದರೆ ವಿಷಯ ಏನು ಅಂದಿರಾ?

ಏನಿಲ್ಲ. ಚುನಾವಣೆ ಆಯೋಗವು ಕೆಜೆಪಿಗೆ ಪತ್ರ ಬರೆದಿದ್ದು, ಪಕ್ಷದ ಅಧ್ಯಕ್ಷರ ಬದಲಾವಣೆಯ ಬಗ್ಗೆ ಈವರೆಗೂ ಆಯೋಗಕ್ಕೆ ಮಾಹಿತಿ ನೀಡಿಲ್ಲ. ಅಧ್ಯಕ್ಷರ ಬದಲಾವಣೆ ಸಂಬಂಧ ನಡೆದ ಸಭೆಯ ವಿವರ ಸಲ್ಲಿಸಬೇಕು ಎಂದು ಸೂಚಿಸಿದೆ.

ಇತ್ತೀಚೆಗೆ ಯಡಿಯೂರಪ್ಪ ಅಧ್ಯಕ್ಷರಾಗುವ ಮುನ್ನ ವೇಣೂರು ಧನಂಜಯ ಕುಮಾರ್ ಆಳ್ವಾ ಕೆಲಕಾಲ ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ ಕೆಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+