ಕುಂಭಮೇಳ: ಭಕ್ತರ ಭಾವ ಪರವಶ ದೃಶ್ಯಗಳು

ಜ.15, 16ರಂದು ಭಕ್ತಾದಿಗಳು ಪವಿತ್ರ ಮುಳುಗು ಹಾಕಿದ ದೃಶ್ಯಾವಳಿಗಳು ಇಲ್ಲಿ ಸಂಗ್ರಹಿಸಿ ನೀಡಲಾಗುತ್ತಿದೆ.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ(ಜ.14)ರಂದು 2013ನೇ ಸಾಲಿನ ಮಹಾಕುಂಭಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. 2001ರ ನಂತರ ಮಹಾ ಕುಂಭಮೇಳ ಸಂಭವಿಸುತ್ತಿದ್ದು ಕೊರೆಯುವ ಚಳಿಯಲ್ಲೂ ಭಕ್ತಾದಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

ಸುಮಾರು 55 ದಿನಗಳ ಕಾಲ ನಡೆಯುವ ಈ ಮಹಾಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾಗಿದೆ. ಸುಮಾರು 100 ಮಿಲಿಯನ್ ಗೂ ಅಧಿಕ ಜನರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಾರ್ಚ್ 10ರಂದು ಮಹಾ ಶಿವರಾತ್ರಿ ದಿನ ಮೇಳ ಸಂಪನ್ನಗೊಳ್ಳಲಿದೆ.

ಅಲಹಾಬಾದಿನಲ್ಲಿ ನಡೆಯುತ್ತಿರುವುದು ಪೂರ್ಣ ಮಹಾ ಕುಂಭಮೇಳವಾಗಿದೆ. ಅರ್ಧ ಕುಂಭಮೇಳಗಳು ಪ್ರತಿ 6 ವರ್ಷಕ್ಕೊಮ್ಮೆ ಹರಿದ್ವಾರ, ಉಜ್ಜಯಿನಿ, ನಾಸಿಕ್ ನಲ್ಲಿ ನಡೆಯುತ್ತದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಸ್ಥಳ ಪ್ರಯಾಗದಲ್ಲಿ ಮುಳುಗೇಳುವ ಮೂಲಕ ಸಕಲ ಪಾಪಗಳ ಪರಿಹಾರ ಮಾಡಿಕೊಳ್ಳುವ ನಂಬಿಕೆಯನ್ನು ಹೊತ್ತು ಅಸಂಖ್ಯಾತ ಭಕ್ತಾದಿಗಳು ಧಾರ್ಮಿಕ ಸ್ಥಳಗಳತ್ತ ಧಾವಿಸುತ್ತಿದ್ದಾರೆ.

ಸೋಮವಾರ (ಜ.15) ಸಾಧು ಸಂತರು, ನಂಗಾ ಸಾಧುಗಳು ಮೊದಲಿಗೆ ಪವಿತ್ರ ನದಿಯಲ್ಲಿ ಮಿಂದೇಳುವ ಮೂಲಕ ಮಹಾ ಕುಂಭಮೇಳಕ್ಕೆ ಚಾಲನೆ ನೀಡಿದರು. ನಂತರ ಭಕ್ತಾದಿಗಳು ನದಿಗಳತ್ತ ತೆರಳುತ್ತಿದ್ದಾರೆ. ಸುಮಾರು 2,50,000 ಜನ ಇಂದಿನ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ, ಫೆ.15ರಂದು ಸುಮಾರು 20 ಮಿಲಿಯನ್ ಜನ ಭಾಗವಹಿಸುವ ನಿರೀಕ್ಷೆಯಿದೆ.

ಸುಮಾರು 12,000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು, 14 ವೈದ್ಯಕೀಯ ಕೇಂದ್ರಗಳು, 22,000 ಬೀದಿ ದೀಪಗಳು, 150 ಕಿ.ಮೀ ತಾತ್ಕಾಲಿಕ ರಸ್ತೆಗಳು, 18 ಸೇತುವೆಗಳು,35,000 ಶೌಚಾಲಯಗಳು ನಿರ್ಮಾಣಗೊಂಡಿದೆ.

ಅಲಹಾಬಾದಿನಿಂದ ವಿವಿಧೆಡೆಗೆ ಸುಮಾರು 7,000ಕ್ಕೂ ಅಧಿಕ ಬಸ್ ಗಳು, ವಿಶೇಷ ರೈಲುಗಳು ಸಂಚರಿಸುತ್ತಿದೆ. ಗಂಗಾ ನದಿಗೆ ತ್ಯಾಜ್ಯ ಸೇರ್ಪಡೆಗೊಳ್ಳದಂತೆ ತಡೆಗಟ್ಟಲು ದೊಡ್ಡ ಪಡೆಯೇ ಸಿದ್ಧವಾಗಿದ್ದು, ಪವಿತ್ರ ನದಿಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

12 ವರ್ಷಕ್ಕೊಮ್ಮೆ ಸಂಭವಿಸುವ ಈ ಮಹಾನ್ ಕುಂಭ ಮೇಳದ ವಿಶೇಷಗಳು ದೃಶ್ಯಾವಳಿಯಲ್ಲಿ

ಕುಂಭಮೇಳ: ಭಕ್ತರ ಭಾವ ಪರವಶ ದೃಶ್ಯಗಳು

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಸಾಧುಗಳು ಗದೆ, ಕತ್ತಿ ಹಿಡಿದು ವಿಜಯೋದ್ಘಾರ ಮಾಡುತ್ತಿರುವ ದೃಶ್ಯ. 100 ಮಿಲಿಯನ್ ಗೂ ಅಧಿಕ ಜನ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾಂತಿ ಹಾಗೂ ಫೆ.10ರ ಮೌನಿ ಅಮಾವಾಸ್ಯೆ ದಿನದಂದು ಕೋಟಿಗಟ್ಟಲೆ ಜನ ಭಾಗವಹಿಸಲಿದ್ದಾರೆ.

ಮಹಾ ಕುಂಭಮೇಳ 2013 ದೃಶ್ಯಾವಳಿ

ಮಹಾ ಕುಂಭಮೇಳ 2013 ದೃಶ್ಯಾವಳಿ

ಪವಿತ್ರ ಸಂಗಮದಲ್ಲಿ ಮುಳುಗು ಹಾಕಿ ಎದ್ದ ಭಕ್ತರೊಬ್ಬರ ದೃಶ್ಯ. 2001ರಲ್ಲಿ ಬಳಕೆಯಾದ ಭೂ ವಿಸ್ತೀರ್ಣದ ಎರಡು ಪಟ್ಟು ಜಾಗ ಸುಮಾರು 50.83 ಚದರ ಕಿಮೀ ಪ್ರದೇಶದಲ್ಲಿ ಮೇಳ ಜರುಗಲಿದೆ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಭಕ್ತೆಯೊಬ್ಬರು ಪೂಜೆ ಸಲ್ಲಿಸಲು ತಯಾರಾಗಿದ್ದು, ಅದನ್ನು ಸೆರೆ ಹಿಡಿಯುತ್ತಿರುವ ಆಕೆ ಪತಿ. 100 ಮಿಲಿಯನ್ ಗೂ ಅಧಿಕ ಜನ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾಂತಿ ಹಾಗೂ ಫೆ.10ರ ಮೌನಿ ಅಮಾವಾಸ್ಯೆ ದಿನದಂದು ಕೋಟಿಗಟ್ಟಲೆ ಜನ ಭಾಗವಹಿಸಲಿದ್ದಾರೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಪವಿತ್ರ ಸಂಗಮದಲ್ಲಿ ಗಂಗೆ ಪೂಜೆ ನಿರತ ಮಹಿಳೆಯರು. 1 ಮಿಲಿಯನ್ ವಿದೇಶಿ ಪ್ರವಾಸಿಗರು ಆಸಕ್ತಿಯಿಂದ ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಮುಳುಗು ಹಾಕಿದ ನಂತರ ತೆಂಗಿನಕಾಯಿ ಹಿಡಿದು ಹೊರಟ ಭಕ್ತೆ. ಮಹಾ ಕುಂಭಮೇಳದ ಒಟ್ಟಾರೆ ಬಜೆಟ್ 1,200 ಕೋಟಿ ರು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 200 ಕೋಟಿ ರು ಅಧಿಕವಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ನವಿಲುಗರಿ ಸಿಕ್ಕಿಸಿಕೊಂಡ ಸಾಧು. ಉತ್ತರ ಪ್ರದೇಶ ಸರ್ಕಾರ ಈ ಮಹಾನ್ ಮೇಳದಿಂದ ಸುಮಾರು 12,000 ಕೋಟಿ ರು ಸಂಗ್ರಹಿಸುವ ನಿರೀಕ್ಷೆಯಲ್ಲಿದೆ. ಸುಮಾರು 6 ಲಕ್ಷ ಮಂದಿಗೆ ಈ ಮೇಳ ಉದ್ಯೋಗ ನೀಡಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ವಿದೇಶಿ ಭಕ್ತರೊಬ್ಬರಿಂದ ಪ್ರಾರ್ಥನೆ ಸಲ್ಲಿಕೆ. 4 ಗೋದಾಮುಗಳು, 125 ದಿನಸಿ ಪಡಿತರ ವಿತರಣೆ ಕೇಂದ್ರಗಳು ಮೇಳದ ಪ್ರಮುಖ ಸ್ಥಳಗಳಲ್ಲಿ ತಲೆ ಎತ್ತಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳದಲ್ಲಿ ಭಕ್ತರೊಬ್ಬರಿಂದ ಆರತಿ ಸೇವೆ. ಪ್ರಮುಖ ಧಾರ್ಮಿಕ ಮುಖಂಡರ ಚಲನವಲನ ಭದ್ರತೆ ನಿಗಾವಹಿಸಲು ಜಿಪಿಎಸ್ ಬಳಸಲಾಗಿದೆ. ಇಸ್ರೋ, ದೂರ ಸಂವೇದಿ ಕೇಂದ್ರದ ಮೂಲಕ ಪ್ರತಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತಿದೆ. ಮೇಳದ ಪ್ರತಿ ಚಿತ್ರಗಳು ದಿನವಿಡೀ ಲಭ್ಯವಾಗಲಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಅಲಹಾಬಾದಿನ ಸಂಗಮದ ಬಳಿ ಕಮ್ಯಾಂಡೊ ಪಡೆ ಕಾವಲು. ಸುಮಾರು 115 ಸಿಸಿಟಿವಿ ಕೆಮರಾಗಳನ್ನು ಮೇಳದ ಸುತ್ತಮುತ್ತ ಅಳವಡಿಸಲಾಗಿದ್ದು, ಅಲಹಾಬಾದ್ ನಗರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾಮಂಡಲೇಶ್ವರ್ ಸ್ವಾಮಿ ಮಹೇಶಾನಂದ ಗಿರೀಜಿ ಮಹಾರಾಜ್ ಹಾಗೂ ಅವರ ಅನುಯಾಯಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

30 ಹೊಸ ಪೊಲೀಸ್ ಸ್ಟೇಷನ್ ಗಳು, 30,000 ಅಧಿಕಾರಿಗಳು, 72 ತುಕಡಿ ಪ್ಯಾರಾ ಮಿಲಿಟರಿ ಪಡೆಗಳನ್ನು ಮೇಳಕ್ಕೆ ಭದ್ರತೆ ಒದಗಿಸಲು ಬಳಸಲಾಗುತ್ತಿದೆ.
ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಉದ್ಯಮಿ ಜಿ.ಪಿ ಹಿಂದೂಜಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರು ಮಹಾ ಕುಂಭ ಮೇಳದಲ್ಲಿ ಹೋಮ ಹವನ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+