'ಅನಂತ ಕುಮಾರ್ ಬಿಜೆಪಿಯಲ್ಲಿ ಶಕುನಿಯಿದ್ದಂತೆ'

ಬೆಂಗಳೂರಿನಲ್ಲಿ ಇಂದು ಮಾತನಾಡಿದ KJP ಪ್ರಧಾನ ಕಾರ್ಯದರ್ಶಿ ವಿ ಧನಂಜಯ ಕುಮಾರ್ ಅವರು ಅನಂತ ಕುಮಾರ್ ಅವರನ್ನು ಶಕುನಿಗೆ ಹೋಲಿಸಿದ್ದಾರೆ.
'ಅನಂತ ಕುಮಾರ್ ಬಿಜೆಪಿಯಲ್ಲಿ ಶಕುನಿ ಇದ್ದಂತೆ. ಇದು ಮಾಜಿ ಸಿಎಂ ಸದಾನಂದ ಗೌಡರ ಅನುಭವಕ್ಕೆ ಈಗಾಗಲೇ ಬಂದಿದೆ. ಇನ್ನು ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೂ ಇದೇ ಅನುಭವ ಕಾದಿದೆ. ಶೆಟ್ಟರ್ ಹರಕೆಯ ಕುರಿ ಆಗಲಿದ್ದಾರೆ' ಎಂದು ಕೇಂದ್ರ ಮಾಜಿ ಸಚಿವ ವೇಣೂರು ಧನಂಜಯ ಕುಮಾರ್ ಆಳ್ವಾ ವ್ಯಾಖ್ಯಾನಿಸಿದ್ದಾರೆ.
'ಬಿಜೆಪಿ ಮುಳುಗುತ್ತಿರುವ ಪಕ್ಷವಾಗಿದೆ. ಶೆಟ್ಟರ್ ಮೊದಲು ಸರಕಾರವನ್ನು ಉಳಿಸಿಕೊಳ್ಳಲಿ. ಆಮೇಲೆ ಬಜೆಟ್ ಮಂಡಿಸುವ ಬಗ್ಗೆ ಯೋಚಿಸಲಿ' ಎಂದು ಅವರು ಹೇಳಿದರು.
'ಅನೇಕ ಮಂದಿ ಬಿಜೆಪಿ ಶಾಸಕರು ಪಕ್ಷವನ್ನು ಬಿಟ್ಟು ವಲಸೆ ಹೋಗುತ್ತಿದ್ದಾರೆ, ಮೊದಲು ಅವರನ್ನು ಶೆಟ್ಟರ್ ಮೊದಲು ತಡೆಯಲಿ' ಎಂದು ಧನಂಜಯ ಕುಮಾರ್ ಮೂದಲಿಸಿದರು.












Click it and Unblock the Notifications