ಪೆರೋಲ್ ಮೇಲೆ ಹೊರಬಿದ್ದ ಮತ್ತೆ ರೇಪಿಸ್ಟ್ ಆದ

32 ವರ್ಷದ ಆರೋಪಿ ಏಳು ತಿಂಗಳ ನಂತರ ಜೈಲಿಗೆ ಮರಳಿದ್ದಾನೆ. 2002ರಲ್ಲಿ ಅತ್ಯಾಚಾರ, ಕೊಲೆ ಸಂಬಂಧಿತ ಎರಡು ಕೇಸುಗಳಲ್ಲಿ ಅಪರಾಧಿಯಾಗಿ ಜೈಲುವಾಸ ಅನುಭವಿಸಿದ್ದ. ಆದರೆ, ಜೈಲಿನಲ್ಲಿ ಉತ್ತಮ ನಡತೆ ತೋರಿದ್ದರಿಂದ ಪೆರೋಲ್ ಮೇಲೆ ಬೇಗ ಹೊರ ಬಿದ್ದಿದ್ದ.
ಸುನಿಲ್ ಸುರೇಶ್ ಅಲಿಯಾಸ್ ಪಪ್ಪು ಸಾಳ್ವೆ ಎಂಬ ಆರೋಪಿ ಜೈಲಿನಿಂದ ಹೊರಬಿದ್ದ ಮೇಲೆ 9 ವರ್ಷ ವಯಸ್ಸಿನ ಹುಡುಗಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಅಹ್ಮದ್ ನಗರ ಜಿಲ್ಲೆಯ ಶಿರಡಿ ಪಟ್ಟಣದಲ್ಲಿ ಪಪ್ಪು ಮೇಲೆ ಪ್ರಕರಣ ದಾಖಲಾಗಿತ್ತು.
ನಾಸಿಕ್ ಜಿಲ್ಲೆಯ ಮನ್ಮದ್ ರೈಲ್ವೆ ನಿಲ್ದಾಣದಲ್ಲಿ ಸಾಳ್ವೆಯನ್ನು ಬಂಧಿಸಿದ ಪೊಲೀಸರು ಸ್ಥಳೀಯ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಜ.17ರ ತನಕ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
2003ರಲ್ಲಿ ಸಿನ್ನಾರ್ ಎಂಬಲ್ಲಿ ಅಪ್ರಾಪ್ತ ವಯಸ್ಕ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಆರೋಪದ ಮೇಲೆ ನಾಸಿಕ್ ನಲ್ಲಿ ಸಾಳ್ವೆಯನ್ನು ಬಂಧಿಸಲಾಗಿತ್ತು. ನಾಸಿಕ್ ಸೆಷನ್ಸ್ ಕೋರ್ಟ್ ನಲ್ಲಿ ಸಾಳ್ವೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಸೆಷನ್ಸ್ ಕೋರ್ಟ್ ವಿರುದ್ಧ ಸಾಳ್ಮೆ ಬಾಂಬೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ. ಒಟ್ಟಾರೆ 10 ವರ್ಷ ಹಾಗೂ 7 ವರ್ಷಗಳ ಕಠಿಣ ಶಿಕ್ಷೆ ಪಡೆದಿದ್ದ ಸಾಳ್ವೆ ನಾಸಿಕ್ ರಸ್ತೆ ಜೈಲಿನಿಂದ ಮೇ 28, 2012ರಂದು ಬಿಡುಗಡೆಗೊಂಡಿದ್ದ.
ಆದರೆ, ಪುನಃ ಶಿರಡಿ ಮೂಲದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದು ಶವವನ್ನು ರೈಲ್ವೆ ನಿಲ್ದಾಣದ ಬಳಿ ಹೂತು ಹಾಕಿ ಪರಾರಿಯಾಗಿದ್ದ. ಬಾಲಕಿಯ ಶವ ಹೊರ ತೆಗೆದ ಪೊಲೀಸರಿಗೆ ಕೊನೆಗೂ ಇದು ಸಾಳ್ವೆ ಮಾಡಿರುವ ಕೃತ್ಯ ಎಂದು ತಿಳಿದು ಬಂದಿದೆ. ಶಿರಡಿ ಪಟ್ಟಣವಾಸಿಗಳು ಸಾಳ್ವೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ 13 ವರ್ಷಗಳಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 6,000 ದುಷ್ಟರ ಹೆಸರುಗಳನ್ನು ಭಾವ ಚಿತ್ರ ಸಮೇತ 'hall of shame' ಹೆಸರಿನಲ್ಲಿ ಅಧಿಕೃತ ವೆಬ್ ತಾಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಇತ್ತೀಚೆಗೆ ಹರ್ಯಾಣ ಪೊಲೀಸರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications